ಅರಣ್ಯದಲ್ಲಿ ಅಕ್ರಮವಾಗಿ ಮಾಕಳಿ ಬೇರು ಸಂಗ್ರಹಿಸುತಿದ್ದ 6 ಮಂದಿ ಬಂಧನ
Team Udayavani, Aug 25, 2020, 5:53 PM IST
ಹನೂರು( ಚಾಮರಾಜನಗರ): ಅಕ್ರಮವಾಗಿ ಅರಣ್ಯ ಪ್ರವೇಶಿಸಿ ಮಾಕಳಿ ಬೇರು ಸಂಗ್ರಹಿಸುತ್ತಿದ್ದ 2 ಮಹಿಳೆಯರು, 4 ಪುರುಷರು ಸೇರಿ ಒಟ್ಟು 6 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸುವಲ್ಲಿ ಕಾವೇರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ತಾಲೂಕಿನ ಆಲಂಬಾಡಿ ಗ್ರಾಮದ ಕುಟ್ಟಿ, ಬಿಳಿಗುಂಡ್ಲುವಿನ ಅರುಳ್, ಚಾರ್ಲಿಸ್, ಬಾಲ, ಆರೋಗ್ಯಮೇರಿ ಮತ್ತು ತೆರೆಸಾ ಎಂಬುವರೇ ಬಂಧಿತ ಆರೋಪಿಗಳಾಗಿದ್ದು, ಈ 6 ಜನರ ತಂಡ ಕಾವೇರಿ ವನ್ಯಜೀವಿ ವಲಯ ಕೌದಳ್ಳಿ ವಿಭಾಗದ ಬಿಜ್ಜಲಾನೆ ಗಸ್ತುವಿನ ಎರಮೋಡ್ ಎಂಬುವಲ್ಲಿ ಅಕ್ರಮವಾಗಿ ಮಾಕಳಿ ಬೇರನ್ನು ಸಂಗ್ರಹಿಸುತ್ತಿದ್ದರು. ಈ ಸಂಬಂಧ ದೊರೆತ ಮಾಹಿತಿ ಮೇರೆಗೆ ಡಿಎಫ್‍ಓ ರಮೇಶ್‍ಕುಮಾರ್ ಅವರ ಮಾರ್ಗದರ್ಶನದಲ್ಲಿ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿ 6 ಜರನ್ನು ಬಂಧಿಸಿ ಬಂಧಿತರಿಂದ 2 ಚೀಲದಲ್ಲಿ ಅಂಗ್ರಹಿಸಿದ್ದ 35 ಕೆ.ಜಿ ಮಾಕಳಿ ಬೇರು ಮತ್ತು2 ಉರುಳನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ದಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿ ಕನಕರಾಜ, ಅರಣ್ಯ ರಕ್ಷಕ ಮಲ್ಲಿಕಾರ್ಜುನ ಈರಪ್ಪ, ಮಂಜುನಾಥ ಬಿಜ್ಜರಗಿ, ಪಿ.ಸಿ.ಪಿ ನೌಕರರಾದ ಮಹದೇವ, ಚಿಕ್ಕನಾಗಶೆಟ್ಟಿ ಇನ್ನಿತರರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.