ISRO: ಜು.13ರಂದು ಚಂದ್ರಯಾನ-3: ಬಹುನಿರೀಕ್ಷಿತ ಯೋಜನೆಗೆ ದಿನ ನಿಗದಿ
ಆ. 10ರಂದು ಸೂರ್ಯನ ಅಧ್ಯಯನಕ್ಕಾಗಿರುವ ಆದಿತ್ಯ- ಎಲ್1 ನೌಕೆ ನಭಕ್ಕೆ.
Team Udayavani, Jun 29, 2023, 7:28 AM IST
ದೇಶದ ಹೆಮ್ಮೆಯ ಇಸ್ರೋ ಮತ್ತೂಂದು ಸಾಹಸಕ್ಕೆ ಸಜ್ಜಾಗಿದೆ. ಬಹುನಿರೀಕ್ಷಿತ ಚಂದ್ರಯಾನ-3ನ್ನು ಜು.13ರಂದು ಕೈಗೊಳ್ಳಲಾಗುತ್ತದೆ. 2019ರಲ್ಲಿ ಯಶಸ್ವಿಯಾಗಿ ಕೈಗೊಳ್ಳಲಾಗಿದ್ದ ಚಂದ್ರಯಾನ-2 ಕೊನೆಯ ಹಂತದಲ್ಲಿ ಕಕ್ಷೆಯನ್ನು ಸೇರಿದ್ದರೂ ನಿಗದಿಯಾಗಿದ್ದಂತೆ “ವಿಕ್ರಂ” ಲ್ಯಾಂಡರ್ ಅಲ್ಲಿ ಇಳಿಯಲು ಸಾಧ್ಯವಾಗಿರಲಿಲ್ಲ. ಈಗ ಹೊಸ ಯೋಜನೆಯಲ್ಲಿ ಚಂದ್ರನ ದಕ್ಷಿಣ ಭಾಗದ ಅಧ್ಯಯನಕ್ಕೆ ಸಿದ್ಧತೆ ನಡೆಸಲಾಗಿದೆ.
ಯೋಜನೆ ಉದ್ದೇಶವೇನು?
~ ಚಂದ್ರನ ಮೇಲ್ಮೈಯಲ್ಲಿ ಸುಲಭವಾಗಿ ಹಾಗೂ ಸುರಕ್ಷಿತವಾಗಿ ಲ್ಯಾಂಡರ್ ಇಳಿಕೆ.
~ ರೋವರ್ ಅನ್ನು ಚಂದ್ರನಲ್ಲಿ ಸಂಚ ರಿಸುವಂತೆ ಮಾಡುವುದು.
~ ದಕ್ಷಿಣ ಭಾಗದಲ್ಲಿ ಲ್ಯಾಂಡರ್ ಮತ್ತು ರೋವರ್ ಇಳಿಕೆ. ಈ ಮೂಲಕ ಭಾರತಕ್ಕೆ ಕೂಡ ಅಂಥ ಸಾಮರ್ಥ್ಯ ಇದೆ ಎಂದು ಸಾಬೀತುಪಡಿಸುವುದು.
ವಿಶೇಷತೆ ಏನು?
~ ಚಂದ್ರಯಾನ-2ರಲ್ಲಿ ಬಳಕೆ ಮಾಡಿದ್ದ ವಿಕ್ರಂ ಲ್ಯಾಂಡರ್‌ನಂತೆಯೇ ಇರಲಿದೆ ಹೊಸ ಯೋಜನೆಯ ಲ್ಯಾಂಡರ್.
~ ಹೊಸ ಯೋಜನೆ ಚಂದ್ರಯಾನ-2ರ ಮುಂದುವರಿದ ಭಾಗ.
~ ಪ್ರೊಪಲ್ಶನ್ ಮಾಡ್ಯುಲ್, ಲ್ಯಾಂಡರ್ ಮತ್ತು ರೋವರ್ ಕಾನ್ಫಿಗರೇಶನ್ ಅನ್ನು ಚಂದ್ರನ ಮೇಲ್ಮೆ „ಯಲ್ಲಿ 100 ಕಿ.ಮೀ. ವರೆಗೆ ಸಾಗಿಸುತ್ತದೆ.
~ ಪ್ರೊಪಲ್ಶನ್ ಮಾಡ್ಯುಲ್ ಅನ್ನು ಸಂಪರ್ಕ ಸಾಧಿಸುವ ವ್ಯವಸ್ಥೆಯಂತೆ ವಿನ್ಯಾಸಗೊಳಿಸಿರುವುದು.
~ ಭೂಮಿಯಿಂದ ಹೊರಹೊಮ್ಮುವ ಬೆಳಕಿನ ಧ್ರುವೀಕರಣವನ್ನು ಚಂದ್ರನ ಮೇಲ್ಮೆ„ಯಿಂದ ಅಧ್ಯಯನ.
ಎಲ್ಲಿಂದ ಉಡಾವಣೆ?
ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕೇಶ ಕೇಂದ್ರ
ಉಡಾವಣ ವಾಹಕ
ಜಿಯೋ ಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್- ಮಾರ್ಕ್ 3.
ಯೋಜನೆ ವೆಚ್ಚ– 615 ಕೋಟಿ ರೂ.
ಉಡಾವಣೆ: ಜು.13 ಗುರುವಾರ ಮಧ್ಯಾಹ್ನ 2.30 ಗಂಟೆಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ಡ್ರೆಸ್ಸಿಂಗ್ ರೂಂ ರಹಸ್ಯ: ಕೋಚ್ ಗಂಭೀರ್ ವಿರುದ್ಧ ಮಾಜಿ ಕ್ರಿಕೆಟಿಗರ ಅಸಮಾಧಾನ
Mangaluru: ಕೈಕೊಡುವ ವೆಟ್‌ವೆಲ್; ನಂದಿನಿ, ಬಾವಿ ನೀರು ಕಲುಷಿತ
Bajpe: ಪಂಚ ಭಾಷೆಗಳಲ್ಲಿ ಎಕ್ಕಾರು ಶಾಲಾ ವಾರ್ತೆಗಳು
ಇನ್ಮುಂದೆ ಶಿವಣ್ಣನಿಗೆ ಡಬಲ್ ಪವರ್ ಇರುತ್ತದೆ.. ಸರ್ಜರಿ ಬಳಿಕ ಹ್ಯಾಟ್ರಿಕ್ ಹೀರೋ ಮಾತು
New year 2025: ಬೆಳಗಾವಿ- ನಿರೀಕ್ಷೆಗಳು ನೂರಾರು..ಬೇಡಿಕೆಗಳು ಬೆಟ್ಟದಷ್ಟು..!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.