ಲ್ಹಾಸಾ ಆಗಸದಲ್ಲಿ ಚೀನಾ ವೈಮಾನಿಕ ತಾಲೀಮು
ಅಮೆರಿಕದ ನೂತನ ಕಾಯ್ದೆಗೆ ಪಿಎಲ್‌ಎ ಗುಟುರು
Team Udayavani, Jan 5, 2021, 7:01 PM IST
ನವದೆಹಲಿ: ದಲಾಯಿಲಾಮಾ ಉತ್ತರಾಧಿಕಾರಿ ನೇಮಕ ವಿಚಾರದಲ್ಲಿ ಚೀನಾಕ್ಕೆ ಯಾವುದೇ ಹಕ್ಕಿಲ್ಲ ಎಂದು ಅಮೆರಿಕ ಪ್ರತಿಪಾದಿಸಿದ ಬೆನ್ನಲ್ಲೇ ಟಿಬೆಟ್ ಆಗಸದಲ್ಲಿ ಪಿಎಲ್‌ಎ ಹೆಲಿಕಾಪ್ಟರ್‌ಗಳು ಹೇಡಿ ಸಾಹಸ ಪ್ರದರ್ಶಿಸಿವೆ.
ಟಿಬೆಟ್‌ನಲ್ಲಿನ ಲಾಮಾ ಅರಮನೆ ಎಂದೇ ಖ್ಯಾತಿಪಡೆದ, ಪೊಟಾಲಾ ಪ್ಯಾಲೇಸ್ ಮೇಲ್ಭಾಗದಲ್ಲಿ ಸೋಮವಾರ, ಮಂಗಳವಾರ ಚೀನಾ ಸೇನೆಯ ಯುದ್ಧವಿಮಾನಗಳು ಹಾರಾಡಿದ್ದು, ಮಿಲಿಟರಿ ತಾಲೀಮು ನಡೆಸಿವೆ. ಈ ವೈಮಾನಿಕ ತಾಲೀಮಿನ ಚಿತ್ರಗಳು ಈಗ ಬಹಿರಂಗವಾಗಿವೆ.
ಅಮೆರಿಕಕ್ಕೆ ಗುಟುರು?: ಟಿಬೆಟನ್ನರ ಹಕ್ಕು ಎತ್ತಿಹಿಡಿಯುವ ಸಂಬಂಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗಷ್ಟೇ “ಟೆಬೆಟನ್ ನೀತಿ ಮತ್ತು ಬೆಂಬಲ ಕಾಯ್ದೆ-2020′ ಜಾರಿಮಾಡಿದ್ದರು. ಉತ್ತರಾಧಿಕಾರಿ ವಿಚಾರದಲ್ಲಿ ಚೀನಾ ಹಸ್ತಕ್ಷೇಪ ನಡೆಸುವಂತಿಲ್ಲ, ಲ್ಹಾಸಾದಲ್ಲಿ ಅಮೆರಿಕ ರಾಯಭಾರಿ ಕಚೇರಿ ತೆರೆಯಲಿದೆ ಎನ್ನುವುದನ್ನು ಕಾಯ್ದೆ ಪ್ರತಿಪಾದಿಸಿತ್ತು. ಇದಕ್ಕೆ ವಿರೋಧ ಸೂಚಿಸಿ ಚೀನಾ ವೈಮಾನಿಕ ತಾಲೀಮು ನಡೆಸಿದೆ ಎನ್ನಲಾಗುತ್ತಿದೆ.
2008ರಲ್ಲೂ ಚೀನಾ ಇದೇ ರೀತಿ ಲ್ಹಾಸಾದ ಅರಮನೆ ಮೇಲೆ ವೈಮಾನಿಕ ಹಾರಾಟ ನಡೆಸಿದ್ದಾಗ, ಇದನ್ನು ವಿರೋಧಿಸಿದ್ದ 12 ಟಿಬೆಟನ್ ಬೌದ್ಧರನ್ನು ಕೊಲ್ಲಲಾಗಿತ್ತು.
2020ರ ಹಿನ್ನೋಟ; ಚೀನಾ ಬಣ್ಣ ಬಯಲು
ಲಡಾಖ್‌ನ ಎಲ್‌ಎಸಿಯಲ್ಲಿನ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಿಸಲು ಚೀನಾ ವರ್ಷವಿಡೀ ಯತ್ನಿಸಿತ್ತು! 2020ರ ಗಡಿಬಿಕ್ಕಟ್ಟಿನ ಹಿನ್ನೋಟದ ಚಿತ್ರಣವನ್ನು ರಕ್ಷಣಾ ಸಚಿವಾಲಯ ಹೀಗೆ ವಿಶ್ಲೇಷಿಸಿದೆ. “ಗಾಲ್ವಾನ್‌ನಲ್ಲಿ ಅವರು ಸಾಂಪ್ರದಾಯಿಕವಲ್ಲದ ಆಯುಧಗಳಿಂದ ಬಿಕ್ಕಟ್ಟನ್ನು ಹೆಚ್ಚಿಸಿದ್ದರು. ಪಿಎಲ್‌ಎ ಸೈನಿಕರು ಕಲ್ಲುಗಳು, ಕಬ್ಬಿಣದ ಸರಳುಗಳು, ಮೊಳೆಯ ದೊಣ್ಣೆಗಳಿಂದ ಭಾರತೀಯ ಯೋಧರ ಮೇಲೆ ಆಕ್ರಮಣಕ್ಕೆ ಮುಂದಾಗಿದ್ದರು. ನಮ್ಮ ಯೋಧರು ಇದಕ್ಕೆ ತಕ್ಕ ಉತ್ತರವನ್ನೇ ನೀಡಿದ್ದರು’ ಎಂದು ತಿಳಿಸಿದೆ. ಎಲ್‌ಎಸಿ ಉದ್ದಕ್ಕೂ ಭೂಸೇನೆ, ವಾಯುಸೇನೆಯ ಬಲವರ್ಧನೆ, ಪ್ಯಾಂಗಾಂಗ್ ದಕ್ಷಿಣ ದಂಡೆ ಮೇಲೆ ಭಾರತೀಯ ಪಡೆಗಳು ಹಕ್ಕು ಸ್ಥಾಪಿಸಿದ ರೀತಿ, ಕಾರ್ಪ್ ಕಮಾಂಡರ್‌ಗಳ 8 ಸುತ್ತಿನ ಮಾತುಕತೆಯ ವಿವರಗಳನ್ನೂ ಇಲಾಖೆ ವಿಶ್ಲೇಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Putin Apologizes: ಅಜರ್‌ಬೈಜಾನ್ ವಿಮಾನ ದುರಂತ… ಕ್ಷಮೆಯಾಚಿಸಿದ ರಷ್ಯಾ ಅಧ್ಯಕ್ಷ !
Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
NASA ಹನುಮ ಸಾಹಸ: ಸೂರ್ಯನ ಬಳಿ ಸುಳಿದು ಸುಡದೆ ಪಾರು!
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.