ಚೀನಾದಲ್ಲೂ ಕೋವಿಡ್ ಬಿಗಿ ಕ್ರಮ: ತತ್ತರಿಸಿದ ನಾಗರಿಕರು, ಆಕ್ರೋಶ
ಕೋವಿಡ್ ಬಿಗಿಕ್ರಮದಿಂದ ಚೀನಾ ಸರಕಾರ ಜನರನ್ನು ಹಸಿವಿನ ದವಡೆಗೆ ದೂಡುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.
Team Udayavani, Dec 28, 2021, 6:37 PM IST
![ಚೀನಾದಲ್ಲೂ ಕೋವಿಡ್ ಬಿಗಿ ಕ್ರಮ: ತತ್ತರಿಸಿದ ನಾಗರಿಕರು, ಆಕ್ರೋಶ](https://www.udayavani.com/wp-content/uploads/2021/12/Bijing-620x372.jpg)
![ಚೀನಾದಲ್ಲೂ ಕೋವಿಡ್ ಬಿಗಿ ಕ್ರಮ: ತತ್ತರಿಸಿದ ನಾಗರಿಕರು, ಆಕ್ರೋಶ](https://www.udayavani.com/wp-content/uploads/2021/12/Bijing-620x372.jpg)
ಬೀಜಿಂಗ್:ಯುರೋಪ್ ಹಾಗೂ ಅಮೆರಿಕಾ ಮಾದರಿಯಲ್ಲಿ ಚೀನಾದಲ್ಲೂ ಕೋವಿಡ್ ಬಿಗಿಕ್ರಮ ಜಾರಿಗೊಳಿಸಲಾಗಿದೆ. ಚೀನಾದ ಕ್ಸಿಯಾನ್ ನಗರದಲ್ಲಿ ಬಿಗಿ ನಿಯಮಗಳ ಜಾರಿಯಿಂದ ಜನರು ಆಹಾರ ಸೇರಿದಂತೆ ದಿನ ಬಳಕೆ ವಸ್ತುಗಳ ಬಳಕೆಗೂ ಪರದಾಡುವಂತಾಗಿದೆ.
ಕೋವಿಡ್ ಮೊಡಲ ಅಲೆಯ ಸಂದರ್ಭದಲ್ಲಿ ವುಹಾನ್ ಪಟ್ಟಣ ಎಲ್ಲ ಬಗೆಯ ನಾಗರಿಕ ಸಂಪರ್ಕದಿಂದ ವಂಚಿಸಲ್ಪಟ್ಟಿತ್ತು. ಆದರೆ ವುಹಾನ್ ನಲ್ಲಿ ಈಗ ಏನಾಗುತ್ತಿದೆ ಎಂಬ ಚಿತ್ರಣ ನಾಗರಿಕ ಜಗತ್ತಿಗೆ ಇನ್ನೂ ಸ್ಪಷ್ಟವಾಗಿ ಲಭ್ಯವಿಲ್ಲ. ಇದರ ಮಧ್ಯೆಯೇ ಕ್ಸಿಯಾನ್ ನಗರದಲ್ಲಿ ಜನರು ದಿನಬಳಕೆ ವಸ್ತುಗಳಿಗಾಗಿ ಪರದಾಡುವ ಸಂಗತಿ ಅಲ್ಲಿನ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
ಅಮೆರಿಕಾ, ಬ್ರಟಿನ್ ಹಾಗೂ ಯುರೋಪ್ ದೇಶದಲ್ಲಿ ಕೋವಿಡ್ ರೂಪಾಂತರಿ ಓಮಿಕ್ರಾನ್ ಭಾರಿ ಪ್ರಮಾಣದಲ್ಲಿ ಹರಡುತ್ತಿದೆ. ಚೀನಾದಲ್ಲೂ ಈ ಸೋಂಕು ವ್ಯಾಪಿಸಬಹುದೆಂಬ ಕಾರಣಕ್ಕೆ ಅಲ್ಲಿನ ಸರಕಾರ ಬಿಗಿ ಕ್ರಮ ಕೈಗೊಂಡಿದ್ದು, ಲಾಕ್‌ಡೌನ್ ಜಾರಿ ಮಾಡಿದೆ. ಜನರ ಓಡಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿದೆ.
ಪ್ರತಿ ಮೂರು ದಿನಕ್ಕೊಮ್ಮೆ ಒಂದು ಕುಟುಂಬದ ಒಬ್ಬ ಸದಸ್ಯ ಮಾತ್ರ ಮನೆಯಿಂದ ಹೊರ ಬಂದು ದಿನಬಳಕೆ ವಸ್ತುಗಳನ್ನು ಖರೀದಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಳಿದ ಸಮಯದಲ್ಲಿ ಜನರು ಮನೆಯ ಆವರಣದಲ್ಲೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಬಿಗಿ ಕ್ರಮದಿಂದ ತಮ್ಮ ಬದುಕು ದುರ್ಭರವಾಗುತ್ತಿದೆ ಎಂದು ಕ್ಸಿಯಾನ್ ಪಟ್ಟಣದ ಜನತೆ ಜಾಲತಾಣದಲ್ಲಿ ನೋವು ತೋಡಿಕೊಂಡಿದ್ದಾರೆ. ಕೋವಿಡ್ ಬಿಗಿಕ್ರಮದಿಂದ ಚೀನಾ ಸರಕಾರ ಜನರನ್ನು ಹಸಿವಿನ ದವಡೆಗೆ ದೂಡುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.
ವಿಶ್ವದ ಇತರೆ ದೇಶಗಳಲ್ಲೂ ಕೋವಿಡ್ ಭೀತಿ ಹೆಚ್ಚಿದೆ. ಅಮೆರಿಕಾದಲ್ಲಿ ಓಮಿಕ್ರಾನ್ ಪ್ರಕರಣ ಹೆಚ್ಚುತ್ತಿದ್ದು, ಆಸ್ಪತ್ರೆಗಳಲ್ಲಿ ದಟ್ಟಣೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬಿಡನ್ “ಓಮಿಕ್ರಾನ್ ಕೋವಿಡ್ ಆರಂಭಿಕ ಅಲೆಯಷ್ಟು ಅಪಾಯಕಾರಿಯಲ್ಲ. ಸಾಕಷ್ಟು ಮುನ್ನೆಚ್ಚರಿಕೆಯೊಂದಿಗೆ ಎದುರಿಸೋಣʼʼ ಎಂದು ಜನರಲ್ಲಿ ಭರವಸೆ ತುಂಬುವ ಪ್ರಯತ್ನ ನಡೆಸಿದ್ದಾರೆ.ಇನ್ನೊಂದೆಡೆ ಫ್ರಾನ್ಸ್‌ನಲ್ಲಿ ವಾರದಲ್ಲಿ ಮೂರು ದಿನ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಗೆ ಒತ್ತು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ](https://www.udayavani.com/wp-content/uploads/2025/02/obama-150x80.jpg)
![Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ](https://www.udayavani.com/wp-content/uploads/2025/02/obama-150x80.jpg)
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
![Trump-musk](https://www.udayavani.com/wp-content/uploads/2025/02/Trump-musk-150x90.jpg)
![Trump-musk](https://www.udayavani.com/wp-content/uploads/2025/02/Trump-musk-150x90.jpg)
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
![Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹತ್ಯೆ](https://www.udayavani.com/wp-content/uploads/2025/02/Mexic-150x84.jpg)
![Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹತ್ಯೆ](https://www.udayavani.com/wp-content/uploads/2025/02/Mexic-150x84.jpg)
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
![India cuts import duty on American Bourbon Whiskey](https://www.udayavani.com/wp-content/uploads/2025/02/wisky-150x83.jpg)
![India cuts import duty on American Bourbon Whiskey](https://www.udayavani.com/wp-content/uploads/2025/02/wisky-150x83.jpg)
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
![ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ](https://www.udayavani.com/wp-content/uploads/2025/02/uk-1-150x100.jpg)
![ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ](https://www.udayavani.com/wp-content/uploads/2025/02/uk-1-150x100.jpg)
ರಷ್ಯಾ-ಉಕ್ರೇನ್ ಕಾಳಗ ತಪ್ಪಿಸಲು ಮುಂದಿನ ವಾರ 3 ದೇಶದ ಅಧಿಕಾರಿಗಳ ಸಭೆ