ಕಲ್ಯಾಣ ಯೋಜನೆ ಪ್ರಕಟಿಸುವಾಗ ಸಿಎಂ ಭಾವುಕರಾಗಿದ್ದೇಕೆ?
ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಆಸಿಡ್ ದಾಳಿಗೆ ಒಳಗಾದವರನ್ನು ನೆನೆದು ಮರುಗಿದ ಬೊಮ್ಮಾಯಿ
Team Udayavani, Mar 16, 2022, 3:29 PM IST
ವಿಧಾನಸಭೆ : ತಾವು ಬಜೆಟ್ ನಲ್ಲಿ ಘೋಷಿಸಿರುವ ಕಲ್ಯಾಣ ಯೋಜನೆಗಳ ಬಗ್ಗೆ ಮಾತನಾಡುವಾಗ ಸಿಎಂ ಬಸವರಾಜ್ ಬೊಮ್ಮಾಯಿ ಭಾವುಕರಾಗಿದ್ದು ಈಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ತಮ್ಮನ್ನು ” ಕಾಮನ್ ಮ್ಯಾನ್ ಸಿಎಂ” ಎಂದು ಯಾರಾದರೂ ಕರೆದರೆ ಖುಷಿಪಡುವ ಬೊಮ್ಮಾಯಿ ಜನಸಾಮಾನ್ಯರಿಗೆ ಅನ್ವಯವಾಗುವ ವಿಚಾರಗಳ ಬಗ್ಗೆ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಪ್ರಸ್ತಾಪಿಸುವಾಗ ಭಾವುಕರಾದರು.
ನಾನು ಘೋಷಿಸಿರುವ ವಿಚಾರಗಳು ದೊಡ್ಡದಲ್ಲ. ಆದರೆ ಜನಸಾಮಾನ್ಯರಿಗೆ ಇದರಿಂದ ತೃಪ್ತಿಯಾಗುತ್ತದೆ. ಸರಕಾರ ನಮ್ಮನ್ನು ಗುರುತಿಸಿದೆ ಎಂಬ ನೆಮ್ಮದಿ ಮೂಡುತ್ತದೆ. ಹೀಗಾಗಿ ಈ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.
ಸಮಾಜದಲ್ಲಿ ಯಾವುದಾದರೂ ವ್ಯಕ್ತಿ ಆಸಿಡ್ ದಾಳಿಗೆ ಒಳಗಾಗದರೆ ಅವರನ್ನು ಕುಟುಂಬ ಕಡೆಗಣಿಸುತ್ತದೆ. ಸಮಾಜ ತ್ಯಜಿಸುತ್ತದೆ. ಅವರ ಬದುಕು ಮುಗಿದು ಹೋಗುತ್ತದೆ. ಇದನ್ನು ಸರಕಾರ ಗಮನಿಸಿದ್ದು, ಅಂಥವರಿಗೆ ನೀಡುತ್ತಿದ್ದ ಪಿಂಚಣಿಯನ್ನು ಮೂರು ಸಾವಿರ ರೂ. ನಿಂದ ಹತ್ತು ಸಾವಿರ ರೂ.ಗೆ ಹೆಚ್ಚಳ ಮಾಡಿದೆ ಎಂದರು.
ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ನಾವಿ ಎಷ್ಟೋ ಸಂದರ್ಭದಲ್ಲಿ ಕೆಟ್ಟದಾಗಿ ಮಾತನಾಡುತ್ತೇವೆ. ಅವರ ವರ್ತನೆ ಬಗ್ಗೆ ನಮ್ಮಲ್ಲಿ ಆಕ್ಷೇಪ ಇದೆ. ಆದರೆ ಅವರೇಕೆ ಹಾಗೆ ವರ್ತಿಸುತ್ತಾರೆ ? ಎಂದು ನಾವು ಯೋಚಿಸುವುದಿಲ್ಲ. ಸಮಾಜದ ಕುರಿತಾಗಿ ಅವರಿಗೆ ಹತಾಶೆ ಕಾಡುತ್ತದೆ. ಹೀಗಾಗಿ ಉದ್ರೇಕವಾಗಿ ವರ್ತಿಸುತ್ತಾರೆ. ಅಂಥವರಿಗೆ ನೆರವಾಗಲು ಸರಕಾರ ನಿರ್ಧರಿಸಿದ್ದು ಅವರಿಗೆ ಮನೆ ಕಟ್ಟಿಸಿಕೊಡಲು ನಿರ್ಧರಿಸಿದೆ ಎಂದರು.
ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಆರ್ಥಿಕವಾಗಿ ಪ್ರತಿಕೂಲ ಸನ್ನಿವೇಶವಿತ್ತು. ಕೋವಿಡ್ ನಿಂದ ಸಂಕಷ್ಟ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಬಜೆಟ್ ಗಾತ್ರ ಕುಗ್ಗಿಸಬೇಕಾಗಬಹುದೆಂಬ ಆತಂಕ ಸೃಷ್ಟಿಯಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಕರಸಂಗ್ರಹ ಹೆಚ್ಚಿದೆ. ಬಜೆಟ್ ಗಾತ್ರ ಹೆಚ್ಚಿದೆ ಎಂದು ಹೇಳಿದರು.
ಸರಕಾರದಿಂದಲೇ ಬೀಜ ಭದ್ರತೆ
ರೈತ ಸಮುದಾಯ ಸಂತಸಪಡುವ ವಿಚಾರವೊಂದನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪ್ರಕಟಿಸಿದ್ದು,ಭವಿಷ್ಯದಲ್ಲಿ ಸರಕಾರದ ವತಿಯಿಂದಲೇ ಬೀಜ ಭದ್ರತೆ ನೀತಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಘೋಷಿಸಿದ್ದಾರೆ.
ಮಾಜಿ ಸಚಿವ ರಮೇಶ್ ಕುಮಾರ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು ರೈತರ ಸಂಕಷ್ಟದ ಬಗ್ಗೆ ಸರಕಾರಕ್ಕೆ ಸಂಪೂರ್ಣ ಅರಿವಿದೆ. ಫೌಂಡೇಶನ್ ಸೀಡ್ ಹಾಗೂ ಮದರ್ ಸೀಡ್ ವಿಚಾರದಲ್ಲಿ ನೀವು ಪ್ರಸ್ತಾಪಿಸಿದ ಸಂಗತಿ ಸತ್ಯವಾಗಿದೆ. ಖಾಸಗಿ ಹಾಗೂ ಸರಕಾರಿ ಹಂತದಲ್ಲಿ ಬೀಜ ಸುಧಾರಣೆಗೆ ಸಂಬಂಧಪಟ್ಟಂತೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದೆ. ಆದಾಗಿಯೂ ನಕಲಿ ಬೀಜಗಳಿಂದ ರೈತರು ಹಾನಿಗೆ ಒಳಗಾಗಿರುವ ಸಾಕಷ್ಟು ಉದಾಹರಣೆ ನಮ್ಮ ಮುಂದೆ ಇದೆ ಎಂದು ಹೇಳಿದರು.
ರೈತರಿಗೆ ಉತ್ತಮ ಗುಣಮಟ್ಟದ ಬೀಜ ದೊರೆತಾಗ ಮಾತ್ರ ಉತ್ಕ್ರಷ್ಟ ಬೆಳೆ ಬೆಳೆಯುವುದಕ್ಕೆ ಸಾಧ್ಯ. ಈ ಹಿನ್ನಲೆಯಲ್ಲಿ ಸರಕಾರದಿಂದಲೇ ಬೀಜಭದ್ರತೆ ಒದಗಿಸುವ ಬಗ್ಗೆ ನಿರ್ಧರಿಸಲಾಗಿದೆ. ಸದ್ಯದಲ್ಲೇ ಇದರ ರೂಪು ರೇಷೆಗಳನ್ನು ಸಿದ್ದಗೊಳಿಸುತ್ತೇವೆ.ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಚಿಂತನೆ ಆರಂಭವಾಗಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್ ಬೋರ್ಡ್ ಗೆ ಬರೆಯುವುದು ಬೇರೆ: ಸಿ.ಟಿ ರವಿ
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.