ಕಾಂಗ್ರೆಸ್ ಯಾರ ಪರ? ಮುಖ್ಯಮಂತ್ರಿ ಬೊಮ್ಮಾಯಿ ಪ್ರಶ್ನೆ ; ಆರದ ಡಿಕೆಶಿ ಕುಕ್ಕರ್ ಸ್ಫೋಟದ ಬಿಸಿ
Team Udayavani, Dec 17, 2022, 7:10 AM IST
ಬೆಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್-ಬಿಜೆಪಿ ನಾಯಕರ ನಡುವೆ ವಾಕ್ಸಮರ ಮುಂದುವರಿದಿದ್ದು, ಕಾಂಗ್ರೆಸ್ ದೇಶದಲ್ಲಿ ಅಶಾಂತಿ ಉಂಟು ಮಾಡುವ ಭಯೋತ್ಪಾದಕರ ಪರವೋ ಅಥವಾ ದೇಶ ಉಳಿಸುವವರ ಪರವೋ ಎನ್ನುವುದನ್ನು ಸ್ಪಷ್ಟಪಡಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಯವರು ಈ ಬಗ್ಗೆ ಉತ್ತರಿಸಬೇಕು ಎಂದು ವಿಜಯ ದಿವಸ್ ಕಾರ್ಯ ಕ್ರಮದ ಅನಂತರ ಸುದ್ದಿಗಾರರ ಜತೆ ಮಾತ ನಾಡಿದ ಸಂದರ್ಭ ಅವರು ಆಗ್ರ ಹಿ ಸಿ ದ್ದಾರೆ.
ಭಯೋತ್ಪಾದಕರು ಸಾಕ್ಷಿ ಸಮೇತ ಸಿಕ್ಕಾಗ ಅದರ ಪ್ರಕ್ರಿಯೆ ಹಾಗೂ ತನಿಖೆಯನ್ನೇ ಪ್ರಶ್ನಿಸುವುದು ಭಯೋತ್ಪಾದಕ ಸಂಘಟನೆಗಳಿಗೆ ನೈತಿಕ ಬಲ ತಂದುಕೊಡುತ್ತದೆ ಎಂದರು.
ಒಬ್ಬ ವ್ಯಕ್ತಿ ಬಾಂಬ್‌ಗ ಸಂಬಂಧಿಸಿದ ಎಲ್ಲ ವಸ್ತುಗಳನ್ನು ಕುಕ್ಕರ್‌ನಲ್ಲಿ ಹಾಕಿಕೊಂಡು ಹೋಗುವಾಗ ಸ್ಫೋಟ ವಾಗಿದೆ. ಮಂಗಳೂರಿನಲ್ಲಿ ಸ್ಫೋಟಿಸುವ ಉದ್ದೇಶವಿತ್ತು ಎನ್ನುವುದು ಸ್ಪಷ್ಟ. ಇಂಥ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರು ಅದು ಆಕಸ್ಮಿಕ, ಪ್ರಕರಣ ಮುಚ್ಚಿಹಾಕಲು ಮಾಡಿದ್ದಾರೆ ಎಂದು ಹೇಳಿ ರು ವುದು ಅವರಿಗೆ ಶೋಭೆ ತರುವಂಥದ್ದಲ್ಲ ಎಂದು ಕಿಡಿಕಾರಿದರು.
ಭಯೋತ್ಪಾದಕ ಚಟುವಟಿಕೆಯನ್ನು ಕ್ಷುಲ್ಲಕವಾಗಿ ಕಾಣುವುದು, ಭಯೋತ್ಪಾದಕರಿಗೆ ಬೆಂಬಲ ನೀಡುವುದು, ಗಲ್ಲಿಗೇರಿಸಿದಾಗ ಟೀಕಿಸುವುದು ಅವರ ಪ್ರವೃತ್ತಿ, ಚುನಾವಣೆಯ ತುಷ್ಟೀಕರಣದ ತಂತ್ರ. ಈ ರೀತಿ ಮಾತನಾಡಿದರೆ ಅಲ್ಪಸಂಖ್ಯಾಕರ ಮತಗಳು ದೊರಕಬಹುದೆಂಬ ಹಳೆ ತಂತ್ರವನ್ನೇ ಬಳಕೆ ಮಾಡಿದ್ದಾರೆ. ಆದರೆ ಜನ ಜಾಗೃತರಾಗಿದ್ದು, ಈಗ ಇದೆಲ್ಲ ನಡೆಯುವುದಿಲ್ಲ ಎಂದರು.
ಹೇಳಿಕೆಗೆ ಬದ್ಧ: ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿ ದ್ದಾರೆ. ಈಗಲೂ ಕುಕ್ಕರ್ ಸ್ಫೋಟ ಪ್ರಕರಣದ ಹೇಳಿಕೆ ಯನ್ನು ಸಮರ್ಥಿಸಿಕೊಳ್ಳುತ್ತೇನೆ, ಅದರಲ್ಲಿ ಯಾವುದೇ ಭಯವಿಲ್ಲ ಎಂದರು. ಕುಷ್ಟಗಿಯಲ್ಲಿ ಮಾತ ನಾ ಡಿ, ಮಂಗಳೂರು ಕಮಿಷನರ್ ತನಿಖೆ ಮಾಡದೆಯೇ ಆರೋಪಿಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದರ ಅರ್ಥ ಏನು? ಬಿಜೆಪಿಯ ಭ್ರಷ್ಟಾಚಾರ ಬಯಲಿಗೆಳೆದ ಹಿನ್ನೆಲೆಯಲ್ಲಿ ಸ್ಫೋಟ ಪ್ರಕರಣ ನಡೆದಿದೆ ಎಂದಿದ್ದಾರೆ.
ಭಯೋತ್ಪಾದನೆಗೆ ನಮ್ಮ ಪಕ್ಷದ ನಾಯಕರು ಬಲಿಯಾಗಿದ್ದಾರೆ. ದೇಶದ ಏಕತೆ, ಸಮಗ್ರತೆ, ಶಾಂತಿಗೆ ನಾವು ಸದಾ ಬದ್ಧರು. ಕಾಂಗ್ರೆಸ್ ಭಯೋತ್ಪಾದಕರ ಪರವಾಗಿದೆ ಎಂದು ಹೇಳಿ ಮುಖ್ಯಮಂತ್ರಿಯವರು ತಮ್ಮ ಹೆಸರನ್ನು ಮಾರುಕಟ್ಟೆ ಯಲ್ಲಿ ಓಡಿಸಿಕೊಳ್ಳುತ್ತಿದ್ದಾರೆ. ನಾನು ಅವರ ಭ್ರಷ್ಟಾ ಚಾರ, ಅಕ್ರಮ ಮುಚ್ಚಿಹಾಕುವ ಯತ್ನ, ರಾಜ್ಯಕ್ಕೆ ಆಗುತ್ತಿರುವ ದ್ರೋಹದ ಬಗ್ಗೆ ಮಾತನಾಡಿದ್ದೇನೆ ಎಂದು ತಿಳಿಸಿದ್ದಾರೆ.
ಡಿಕೆಶಿಗೆ ಕೈ ನಾಯಕರ ಬೆಂಬಲ
ಡಿಕೆಶಿ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್ ನಡೆ ಸಿದ್ದು, ಅನಗತ್ಯ ವಿವಾದ ಮಾಡಲಾಗಿದೆ ಎಂದಿ ದ್ದಾರೆ. ಕುಕ್ಕರ್ ಬಾಂಬ್ ಸ್ಫೋಟದ ಕುರಿತು ಡಿಕೆಶಿ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಆದರೆ ಭಯೋತ್ಪಾದನೆ ಘಟನೆ ನಡೆಯಬಾರದು ಎಂದು ಯು.ಟಿ. ಖಾದರ್ ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.