ಡಿಸಿಗಳಿಗೆ ಗ್ರಾಮಗಳಿಗೆ ಭೇಟಿ‌ ಕೊಡಲು ಸಿಎಂ ಬೊಮ್ಮಾಯಿ ಸೂಚನೆ


Team Udayavani, Dec 31, 2021, 4:01 PM IST

1-fdsf

ಬೆಂಗಳೂರು: ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ ಸಿಇಒಗಳ ಜತೆ ಇಲಾಖೆ, ಯೋಜನೆಗಳ ಬಗ್ಗೆ ಚರ್ಚೆ  ಮಾಡಿದ್ದು, ಆಡಳಿತ ಚುರುಕಿಗೆ ಆದೇಶ ಮಾಡಿದ್ದೇನೆ, ಜನರು ಇರುವ ಕಡೆ ಹೋಗಿ ಕೆಲಸ ಮಾಡಬೇಕು ಮತ್ತು ಗ್ರಾಮಗಳಿಗೆ ಭೇಟಿ‌ ಕೊಡಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನಿನ್ನೆ ಜಿ.ಪಂ ಸಿಇಒಗಳ ಜತೆ ಇಲಾಖೆ, ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಯಿತು,ಇವತ್ತು ಡಿಸಿಗಳ‌ ಸಭೆ ನಡೆಸಿದ್ದೇವೆ. ಡಿಸಿಗಳ‌ ಪಾತ್ರ ದೊಡ್ಡದಿದೆ. ಜಿಲ್ಲಾಧಿಕಾರಿಗಳಾಗಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳಾಗಿ ಡಿಸಿಗಳು ಕೆಲಸ ಮಾಡುತ್ತಾರೆ,  ಅಧಿಕಾರದ ಬಹುಮುಖ್ಯ ಕೊಂಡಿಯಾಗಿದ್ದು, ಅವರ ಪಾತ್ರ  ಆಡಳಿತದ  ಮೇಲೆ ಬಹಳಷ್ಟು ಅವಲಂಬನೆ ಯಾಗಿದೆ ಎಂದರು.

ಡಿಸಿಗಳಿಗೆ ಜನಸ್ಪಂದನೆಯಾಗಿ ಕೆಲಸ ಮಾಡಲು ಸೂಚನೆ ನೀಡಿದ್ದು,  ಕೆಲವರ ಹಿತಕ್ಕಾಗಿ ಬೇಡ, ಜನರ ಹಿತಕ್ಕಾಗಿ ಕೆಲಸ ಮಾಡಲು ಸೂಚಿಸಲಾಗಿದೆ ಎಂದರು.

ಮನೆಗಳ ವಿಚಾರದಲ್ಲಿ 2019-20 ರಲ್ಲಿ ಕೆಲವರು ಮನೆಗಳ ನಿರ್ಮಾಣ ಆರಂಭ ಮಾಡಿಲ್ಲ.  ಇನ್ನೊಮ್ಮೆ ಜಿಪಿಎಸ್ ಮೂಲಕ‌ ಪರಿಶೀಲನೆಗೆ ಸೂಚನೆ ನೀಡಲಾಗಿದ್ದು, ಸ್ಥಳ ಬದಲಾಯಿಸಿ ಇನ್ನೊಂದೆಡೆ ಅವರದೇ ಸ್ಥಳದಲ್ಲಿ ಮನೆ ಕಟ್ಟುವುದಾದರೆ  ಅನುಮತಿಸಲು ಸೂಚನೆ ನೀಡಲಾಗಿದೆ.

ನೆನೆಗುದಿಗೆ ಬಿದ್ದಿರುವ ಹಲವು ವಿಚಾರಗಳ ಚರ್ಚೆ ಮಾಡಿದ್ದು, ಅಕ್ರಮ ಸಕ್ರಮ ಬಗ್ಗೆ,  ಗೋಮಾಳಗಳ ಸಕ್ರಮ ಬಗ್ಗೆ, ಸಕ್ರಮಕ್ಕೆ ಕಾನೂನು ತೊಡಕುಗಳ ಬಗ್ಗೆ ಚರ್ಚಿಸಲಾಯಿತು ಎಂದರು.

ರೈತರ ಬಾಕಿ ಬೆಳೆ ಪರಿಹಾರ ಕೊಡಲು ಸೂಚನೆ ನೀಡಲಾಗಿದೆ.  ಪರಿಹಾರ ಸಂಬಂಧ ಮಾಹಿತಿ ಆಪ್ ನಲ್ಲಿ ಅಲ್ ಲೋಡ್ ಗೆ ಸೂಚನೆ ನೀಡಲಾಗಿದ್ದು, ಜನವರಿ 7 ರ ಗಡುವು‌ ಇದಕ್ಕೆ ಕೊಡಲಾಗಿದೆ. ಇವುಗಳ ಕಡತ ವಿಲೇವಾರಿ ಜವಾಬ್ದಾರಿ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ ಎಂದರು.

ಡೀಮ್ಡ್ ಅರಣ್ಯಗಳ ವಿಚಾರದಲ್ಲಿ ಬಡವರು, ರೈತರಿಗೆ ಹಲವು ಕಡೆ ತೊಂದರೆಯಾಗುತ್ತಿದ್ದು, ಇದರ ನಿವಾರಣೆ ಬಗ್ಗೆ ಚರ್ಚೆ ನಡೆದಿದೆ. ಕಂದಾಯ ಭೂಮಿಗಳ ಮಂಜೂರು ಪ್ರಕರಣ ಬಾಕಿ ಇದೆ. ಬಹಳಷ್ಟು ಜನಕ್ಕೆ ನ್ಯಾಯ ಸಿಗದೇ ವ್ಯಾಜ್ಯ ಮುಂದುವರಿಕೆಯಾಗಿದೆ. ಇಂಥ ವ್ಯಾಜ್ಯ ಇತ್ಯರ್ಥಕ್ಕೆ ಸೂಚನೆ ನೀಡಿದ್ದು, ಒಂದು ವರ್ಷ ದಲ್ಲಿ ಇವುಗಳ ವಿಲೇವಾರಿಗೆ ಸೂಚಿಸಲಾಗಿದೆ.

ಭೂಪರಿವರ್ತನೆಗೆ ಕಂದಾಯ ಸಚಿವರು ಹೊಸ ನಿಯಮಾವಳಿ ತರುವ ಘೋಷಣೆ ಮಾಡಿದ್ದಾರೆ.  ಇದಕ್ಕೆ ಎಲ್ಲ ನಗರಗಳ ಮಾಸ್ಟರ್ ಪ್ಲಾನ್ ಮಾಡ್ತಿದ್ದೇವೆ. 48 ನಗರಗಳ ಮಾಸ್ಟರ್ ಪ್ಲಾನ್ ಇನ್ನೂ ಆಗಿಲ್ಲ,ಇದಕ್ಕೂ ಸೂಚನೆ ಕೊಡಲಾಗಿದೆ. 4370 ಊರುಗಳಲ್ಲಿ ಸ್ಮಶಾನ ಭೂಮಿ ಅಗತ್ಯ ಇದ್ದು, ಸ್ಮಶಾನ ಭೂಮಿಗಳು ಎಲ್ಲೆಡೆ ಇಲ್ಲ, ಹಲವು‌ ಕಡೆ ಇದ್ದರೂ ಜಾಗ  ಸಾಕಾಗುತ್ತಿಲ್ಲ. ಸ್ಮಶಾನ ಭೂಮಿಗಳಿಗೆ ಸರ್ಕಾರದ ಜಾಗ ಕೊಡಲು ನಿರ್ಧಾರ ಮಾಡಿದ್ದು, ಸರ್ಕಾರಿ ಜಾಗ ಇಲ್ಲದಿರುವ ಕಡೆ ಖರೀದಿ ಮಾಡಲು ನಿರ್ಧರಿಸಲಾಗಿದೆ.

ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದು, ಈ ಸೇವೆಗಳನ್ನು ಆಧಾರ್ ಗೆ ಸೇರಿಸಲು ಒಂದು ತಿಂಗಳ ಗಡುವು ನೀಡಲಾಗಿದೆ.

ಸಂಧ್ಯಾ ಸುರಕ್ಷಾ, ಅಂಗವಿಕಲ, ವಿಧವಾ ಮಾಸಾಶನ‌ ಸೇವೆಗಳು, ಲಸಿಕೆ ಈಗಾಗಲೇ 97% ಆಗಿದ್ದು, ಜನವರಿ ಅಂತ್ಯಕ್ಕೆ 100% ಮುಗಿಸಲು ಸೂಚನೆ ನೀಡಿದ್ದೇವೆ.  ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾಗೃತ ಆಗಲು ಸೂಚನೆ ನೀಡಿದ್ದೇವೆ.

ಬೆಡ್, ಔಷಧ, ಟೆಸ್ಟಿಂಗ್, ಆರೋಗ್ಯ ಸೌಕರ್ಯ ಹೆಚ್ಚಿಸಲು ಸೂಚನೆ ನೀಡಲಾಗಿದ್ದು, ಆಯುಷ್ಮಾನ್ ಭಾರತ ಕಾರ್ಡ್ ಗಳನ್ನು ಮಾಡಲು ಸೂಚನೆ ನೀಡಿದ್ದೇವೆ.  ಬಿಪಿಎಲ್, ಆಧಾರ್ ಕಾರ್ಡ್ ಲಿಂಕ್ ಮಾಡಿ ಆಯುಷ್ಮಾನ್ ಕಾರ್ಡ್ ಕೊಡಲು ಸೂಚನೆ ನೀಡಲಾಗಿದೆ.

76% ಎರಡನೇ ಡೋಸ್ ಆಗಿದ್ದು, ಇದು 80% ತಲುಪಲು ಸೂಚನೆ ನೀಡಲಾಗಿದೆ. ದಿಟ್ಟವಾಗಿ ಜನಪರವಾಗಿ ಕೆಲಸ ಮಾಡಲು ಸೂಚಿಸಲಾಗಿದೆ. ಕಾನೂನು ಚೌಕಟ್ಟಿನಲ್ಲಿ ಬಡವರಿಗೆ ನೆರವು ಕೊಡುವ ಕೆಲಸ ಮಾಡಲು ಸೂಚನೆ ನೀಡಲಾಗಿದೆ ಎಂದರು.

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

Karnataka Govt.,: ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.