ಕೋವಿಡ್ ಮಹತ್ವದ ಸಭೆ: ವೀಕೆಂಡ್ ಕರ್ಫ್ಯೂ ತೆರವು, ನೈಟ್ ಕರ್ಫ್ಯೂ ಮುಂದುವರಿಕೆ
Team Udayavani, Jan 21, 2022, 3:41 PM IST
ಬೆಂಗಳೂರು :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ರಾಜ್ಯದ ಕೋವಿಡ್ 19 ಸ್ಥಿತಿಗತಿ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಸಿದ್ದು, ವೀಕೆಂಡ್ ಕರ್ಫ್ಯೂ ತೆರವು ಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ.
ಸಚಿವ ಆರ್ ಅಶೋಕ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ , ಎಲ್ಲಾ ತಜ್ಞರ ಅಭಿಪ್ರಾಯಗಳನ್ನು ಮುಖ್ಯಮಂತ್ರಿಗಳು ಸ್ವೀಕರಿಸಿದ್ದಾರೆ. ವೀಕೆಂಡ್ ಕರ್ಫ್ಯೂ ತೆರವು ಗೊಳಿಸುವ ತೀರ್ಮಾನ ಕೈಗೊಂಡಿದ್ದು, ನೈಟ್ ಕರ್ಫ್ಯೂ ಮುಂದುವರಿಯಲಿದೆ, ಉಳಿದ ಎಲ್ಲ ನಿಯಮಗಳು ಮುಂದುವರಿಯುತ್ತದೆ ಎಂದು ತಿಳಿಸಿದರು.
ನಾಳೆಯಿಂದ ವಾರಾಂತ್ಯ ಕರ್ಫ್ಯೂ ಇಲ್ಲ ಎಂದು ತಿಳಿಸಿದರು. ಜನರು ಎಚ್ಚರಿಕೆ ವಹಿಸಬೇಕು, ಸೋಂಕಿನ ಸಂಖ್ಯೆ ಹೆಚ್ಚಾದಲ್ಲಿ ಮತ್ತೆ ಕಠಿಣ ಕ್ರಮ ಕೈಗೊಳ್ಳುವ ಅನಿವಾರ್ಯತೆ ಎದುರಾಗುತ್ತದೆ ಎಂದರು.
ಆಸ್ಪತ್ರೆಗೆ ಸೇರುವವರ ಸಂಖ್ಯೆ ಹೆಚ್ಚಾದರೆ ಮತ್ತೆ ವೀಕ್ ಎಂಡ್ ಕರ್ಪ್ಯೂ ಜಾರಿ ತರುವ ಕಂಡಿಷನ್ ಮೇಲೆ ಕರ್ಪ್ಯೂ ಸಡಿಲಿಕೆ ಮಾಡಲಾಗಿದೆ.ನೈಟ್ ಕರ್ಪ್ಯೂ ರಾತ್ರಿ 10 ರಿಂದ ಬೆಳಗಿನ 5 ರ ವರೆಗೆ ವಾರದ ಏಳೂ ದಿನ ಮುಂದುವರಿಯಲಿದೆ. ಪ್ರತಿಭಟನೆ, ರ್ಯಾಲಿ, ಸಮಾರಂಭ, ಸಿನೆಮಾ, ಎಲ್ಲವೂ ಯಥಾ ಸ್ಥಿತಿ ಮುಂದುವರೆಯಲಿದೆ. ಕೊವಿಡ್ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆ ಇದೆ. ಕೊವಿಡ್ ಸಂಖ್ಯೆ ಇನ್ನೂ ಹೆಚ್ಚಳವಾಗಲಿದೆ . ರಾಜ್ಯದ ಕೆಲವು ಜಿಲ್ಲೆಗಳಲ್ಲಿ ತೆರವು ಮಾಡಬೇಕೆಂಬ ಬೇಡಿಕೆ ಇಟ್ಟಿದ್ದರು ಆದರೆ, ಬೆಂಗಳೂರು ಬಿಟ್ಟು ಜನರು ಹಳ್ಳಿಗಳಿಗೆ ಹೋಗುತ್ತಾರೆ ಅಲ್ಲಿ ಹೆಚ್ಚಾಗುತ್ತದೆ ಆ ಕಾರಣಕ್ಕಾಗಿ ರಾಜ್ಯವನ್ನು ಒಂದು ಯುನಿಟ್ ಎಂದು ಪರಿಗಣಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದರು.
ಜನರಿಗೆ ಜಾಗೃತಿ ಮೂಡಿಸಲು ನೈಟ್ ಕರ್ಪ್ಯೂ ಮುಂದುವರೆಸಲು ತೀರ್ಮಾನ ಮಾಡಲಾಗಿದ್ದು, 2.93,231 ಸಕ್ರೀಯ ಪ್ರಕರಣಗಲಿದ್ದು, 2.86 ಸಾವಿರ ಹೋಮ್ ಐಸೋಲೇಷನ್ ನಲ್ಲಿ ಇದ್ದಾರೆ. 5340 ಆಸ್ಪತ್ರೆಗೆ ದಾಖಲಾಗಿದ್ದಾರೆ. 340 ಮಂದಿ ಐಸಿಯು ನಲ್ಲಿದ್ದಾರೆ. ಪಾಸಿಟಿವ್ ದರ ಶೇ 19% ರಷ್ಟಿದೆ ಎಂದು ಮಾಹಿತಿ ನೀಡಿದರು.
ಶಾಲೆಗಳು ಯಥಾ ಸ್ಥಿತಿ
ರಾಜ್ಯದಲ್ಲಿ ಶಾಲೆಗಳನ್ನು ಬಂದ್ ಮಾಡುವುದಿಲ್ಲ. 6 ರಿಂದ 15 ವರ್ಷದ ಮಕ್ಕಳಿಗೆ ಪಾಸಿಟಿ ವಿಟಿ ರೇಟ್ ಕಡಿಮೆ ಇದೆ.ಜ 29 ರ ವರೆಗೆ ಬೆಂಗಳೂರು ನಗರದಲ್ಲಿ ಶಾಲೆಗಳು ಬಂದ್ ಮಾಡಲಾಗುತ್ತಿದ್ದು, ಆ ಬಳಿಕ ಪರಿಶೀಲನೆ ನಡೆಸುತ್ತೇವೆ , 28 ರಂದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಭೆಯ ಬಳಿಕ ತಿಳಿಸಿದರು.
ಬೇರೆ ಜಿಲ್ಲೆಗಳಲ್ಲಿ ಕಡಿಮೆ ಕೇಸ್ ಇದ್ದರೆ 3 ದಿನ ಹೆಚ್ಚು ಕೇಸ್ ಇದ್ದರೆ ಶಾಲೆಗಳು 7 ದಿಂದ ಬಂದ್ ತೀರ್ಮಾನ, ಆ ತೀರ್ಮಾನವನ್ನು ಸ್ಥಳೀಯ ಅಧಿಕಾರಿಗಳು ತೆಗೆದುಕೊಳ್ಳುತ್ತಾರೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಸಚಿವರಾದ ಗೋವಿಂದ ಕಾರಜೋಳ, ಡಾ. ಕೆ. ಸುಧಾಕರ್, ಆರಗ ಜ್ಞಾನೇಂದ್ರ, ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.