Commonwealth ಸಮಸ್ಯೆ: ಕಾಮನ್`ವೆಲ್ತ್’ ಗೇಮ್ಸ್‌ಗೆ ಈಗ ಸಂಪತ್ತಿನ ಗ್ರಹಣ
Team Udayavani, Jul 21, 2023, 7:28 AM IST
ಬ್ರಿಟಿಷ್ ವಸಾಹತುಶಾಹಿ ದೇಶಗಳ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ಗೆ ಈಗ ಸಂಪತ್ತಿನ ಗ್ರಹಣ ಬಡಿದಿದೆ. ಆಸ್ಟ್ರೇಲಿಯದ ವಿಕ್ಟೋರಿಯಾ ರಾಜ್ಯ 2026ರ ಕಾಮನ್‌ವೆಲ್ತ್ ಕೂಟವನ್ನು ಆಯೋಜನೆ ಮಾಡಬೇಕಾಗಿತ್ತು. ಆದರೆ ದಿಢೀರನೇ ಆಯೋಜಕತ್ವದಿಂದ ಹಿಂದೆ ಸರಿದಿದ್ದು, 2026ನೇ ಕೂಟ ಆಯೋಜನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಸದ್ಯ ಈ ಕಾಮನ್‌ವೆಲ್ತ್ ಗೇಮ್ಸ್ ಅನ್ನು ಆಯೋಜನೆ ಮಾಡಲು 54 ಸದಸ್ಯ ರಾಷ್ಟ್ರಗಳ ಪೈಕಿ ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ಈ ಕ್ರೀಡಾಕೂಟದ ಭವಿಷ್ಯದ ಬಗ್ಗೆಯೇ ಚಿಂತೆ ಮೂಡಿದೆ.
ಏನಿದು ಕಾಮನ್‌ವೆಲ್ತ್?
ಬ್ರಿಟಿಷರ ವಸಾಹತುಶಾಹಿ ದೇಶಗಳ ನಡುವೆ ಗಾಢ ಸ್ನೇಹ ಬೆಳೆಯಲಿ ಎಂಬ ಕಾರಣದಿಂದ ಬ್ರಿಟನ್ ದೇಶ ಇದನ್ನು 1930ರಲ್ಲಿ ಆರಂಭಿಸಿತು. 1930ರಿಂದ 1950ರ ವರೆಗೆ ಇದನ್ನು ಬ್ರಿಟಿಷ್ ಎಂಪೈರ್ ಗೇಮ್ಸ್ ಎಂದು ಕರೆಯಲಾಗುತ್ತಿತ್ತು. 1954ರಿಂದ 1966ರ ವರೆಗೆ ಬ್ರಿಟಿಷ್ ಎಂಪೈರ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಎಂಬ ಹೆಸರಿನಿಂದ ಕರೆಯಲಾಯಿತು. 1970ರಿಂದ 1974ರವರೆಗೆ ಬ್ರಿಟಿಷ್ ಕಾಮನ್‌ವೆಲ್ತ್ ಗೇಮ್ಸ್ ಎಂದೂ ಅನಂತರದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ.
ಪ್ರತೀ ನಾಲ್ಕು ವರ್ಷಕ್ಕೊಮ್ಮೆ ಸದಸ್ಯ ರಾಷ್ಟ್ರಗಳಲ್ಲಿ ಒಂದು ದೇಶ ಆತಿಥ್ಯ ವಹಿಸುತ್ತವೆ. ಇತ್ತೀಚಿಗೆ ಅಂದರೆ 2022ರಲ್ಲಿ ಇಂಗ್ಲೆಂಡ್‌ನ ಬರ್ಮಿಂಗ್ ಹ್ಯಾಮ್‌ನಲ್ಲಿ ಈ ಕೂಟವನ್ನು ಆಯೋಜನೆ ಮಾಡಲಾಗಿತ್ತು. 2026ರಲ್ಲಿ ಆಸ್ಟ್ರೇಲಿಯದ ವಿಕ್ಟೋರಿಯ ರಾಜ್ಯದಲ್ಲಿ ನಡೆಸಬೇಕಾಗಿತ್ತು.
ಆಸ್ಟ್ರೇಲಿಯದಿಂದಲೇ ಹೆಚ್ಚು ಆತಿಥ್ಯ
1930ರಲ್ಲಿ ಆರಂಭವಾದ ಈ ಕೂಟಕ್ಕೆ ಅತೀ ಹೆಚ್ಚು ಬಾರಿ ಆಸ್ಟ್ರೇಲಿಯವೇ ಆತಿಥ್ಯ ವಹಿಸಿಕೊಂಡಿದೆ. ಅಂದರೆ 22 ಬಾರಿ ಕಾಮನ್‌ವೆಲ್ತ್ ಗೇಮ್ಸ್ ನಡೆದಿದ್ದು ಆಸ್ಟ್ರೇಲಿಯ 5 ಬಾರಿ ಆತಿಥ್ಯ ವಹಿಸಿಕೊಂಡಿದ್ದು, 2026ನೇಯದ್ದು 6ನೇ ಬಾರಿಗೆ ಆತಿಥ್ಯ ವಹಿಸಿಕೊಳ್ಳಬೇಕಾಗಿತ್ತು. ಅಷ್ಟೇ ಅಲ್ಲ 2006ರ ಅನಂತರ ವಿಕ್ಟೋರಿಯ ರಾಜ್ಯವೇ ಮೂರನೇ ಬಾರಿಗೆ ಆತಿಥ್ಯ ವಹಿಸಿಕೊಳ್ಳಲಿತ್ತು.
2026ರ ಆತಿಥ್ಯ ಯಾರದ್ದು?
ಸದ್ಯಕ್ಕೆ ಇದು ಬಿಲಿಯನ್ ಡಾಲರ್ ಪ್ರಶ್ನೆಯಾಗಿ ಉಳಿದಿದೆ. ಇದು 2023ರ ನಡುಘಟ್ಟ. ಲೆಕ್ಕ ಹಾಕಿ ಹೇಳುವುದಾದರೆ, ಕ್ರೀಡಾಕೂಟ ಆಯೋಜನೆಗೆ ಉಳಿದಿರುವುದು ಇನ್ನು 1000 ದಿನ ಮಾತ್ರ. ಇಷ್ಟು ದಿನದೊಳಗೆ ಬೇರೊಂದು ದೇಶ ಮುಂದೆ ಬಂದು, ತಯಾರಿ ನಡೆಸುವುದು ಕಷ್ಟ ಸಾಧ್ಯವೇ ಸರಿ. ಜತೆಗೆ ಎಲ್ಲವೂ ವಿಕ್ಟೋರಿಯ ರಾಜ್ಯವೇ ಆತಿಥ್ಯ ವಹಿಸಲಿದೆ ಎಂಬ ಕಾರಣದಿಂದಾಗಿ ಬೇರಾವ ದೇಶಗಳೂ ಸಿದ್ಧತೆಯನ್ನೂ ಮಾಡಿಕೊಂಡಿರುವುದಿಲ್ಲ. ಹೀಗಾಗಿಯೇ ಈ ಬಾರಿ ಕೂಟದ ಅಗತ್ಯತೆ ಬಗ್ಗೆಯೇ ಪ್ರಶ್ನೆ ಮೂಡುವಂತಾಗಿದೆ. ಜತೆಗೆ ವಿಕ್ಟೋರಿಯ ರಾಜ್ಯದ ಈ ನಡೆಯಿಂದ ಕಾಮನ್‌ವೆಲ್ತ್ ಗೇಮ್ಸ್ ನಡೆಸುವ ಕಾಮನ್‌ವೆಲ್ತ್ ಫೆಡರೇಶನ್ ಒಂದು ರೀತಿಯಲ್ಲಿ ಅತಂತ್ರಕ್ಕೆ ಸಿಲುಕುವಂತಾಗಿದೆ.
ವಿಕ್ಟೋರಿಯಾ ಹಿಂದೆ ಸರಿಯಲು ಕಾರಣವೇನು?
ಈ ರಾಜ್ಯದ ಮುಖ್ಯಸ್ಥ ಡೇನಿಯಲ್ ಆ್ಯಂಡ್ರೋಸ್ ಪ್ರಕಾರ 2026ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಸಂಪತ್ತಿನ ಕಾರಣದಿಂದ ಆಯೋಜನೆ ಮಾಡಲಾಗುತ್ತಿಲ್ಲ. ಅಂದರೆ ಈ ಆವೃತ್ತಿ ಆಯೋಜಿಸಲು ಬೇಕಾಗಿರುವ ವೆಚ್ಚ ಸರಿ ಸುಮಾರು 5 ಬಿಲಿಯನ್ ಅಮೆರಿಕನ್ ಡಾಲರ್(41 ಸಾವಿರ ಕೋಟಿ ರೂ.)ಗೆ ಏರಿಕೆಯಾಗಿದೆ. ಆರಂಭದಲ್ಲಿ ಕೇವಲ 14 ಸಾವಿರ ಕೋಟಿ ರೂ.ಗಳಲ್ಲಿ ಪಂದ್ಯ ಆಯೋಜನೆ ಮಾಡಬಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಈಗ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ. ಹೀಗಾಗಿ ನಾವು ಹಿಂದೆ ಸರಿಯುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಮನ್‌ವೆಲ್ತ್ ಫೆಡರೇಶನ್, ವಿಕ್ಟೋರಿಯಾದ ಗೇಮ್ಸ್ ಆಯೋಜನೆ ತಂತ್ರಗಾರಿಕೆಯ ಕಾರಣದಿಂದ ವೆಚ್ಚ ಹೆಚ್ಚಾಗಿದೆ. ಅವರು ವಿಶಿಷ್ಟ ಪ್ರಾದೇಶಿಕ ವಿತರಣ ಮಾದರಿಯನ್ನು ಅನುಸರಿಸಲು ಮುಂದಾಗಿತ್ತು. ಇದರಿಂದಾಗಿ ಬೇರೆ ಬೇರೆ ಕಡೆಗಳಲ್ಲಿ ಕ್ರೀಡಾ ಗ್ರಾಮಗಳನ್ನು, ಮೂಲಭೂತ ಸೌಕರ್ಯಗಳನ್ನು ಮತ್ತು ಸಾರಿಗೆ ವ್ಯವಸ್ಥೆಯನ್ನು ಮಾಡಬೇಕಾಗಿತ್ತು. ಇದರಿಂದಲೇ ವೆಚ್ಚದ ಅಂದಾಜು ಹೆಚ್ಚಾಗಿದೆ ಎಂದಿದೆ.
ಆರಂಭದಿಂದಲೇ ಸಮಸ್ಯೆ
2026ರ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆ ವಿಚಾರದಲ್ಲಿ ಆರಂಭದಿಂದಲೂ ಸಮಸ್ಯೆ ಇದೆ. ಈ ಹಿಂದೆ ಆತಿಥ್ಯದಿಂದ ಕೌಲಾಲಂಪುರ, ಕಾರ್ಡಿಫ್, ಕಾಲ್ಗೆರಿ, ಎಡ್‌ಮೌಂಟನ್ ಮತ್ತು ಅಡಿಲೇಡ್ ಹಿಂದೆ ಸರಿದವು. ಅಲ್ಲದೆ 2022ರ ಆತಿಥ್ಯವನ್ನು ಡರ್ಬನ್ ವಹಿಸಬೇಕಾಗಿತ್ತು. ಆದರೆ ಒಪ್ಪಂದಕ್ಕೆ ಸಹಿ ಹಾಕುವಲ್ಲಿ ವಿಳಂಬವಾಗಿದ್ದರಿಂದ ಅನಿವಾರ್ಯವಾಗಿ ಬರ್ಮಿಂಗ್‌ಹ್ಯಾಮ್ ಆತಿಥ್ಯ ವಹಿಸಿಕೊಂಡಿತು. ಈ ಮೊದಲಿನ ಯೋಜನೆ ಪ್ರಕಾರ, 2026ರ ಆತಿಥ್ಯವನ್ನು ಬರ್ಮಿಂಗ್‌ಹ್ಯಾಮ್ ವಹಿಸಿಕೊಳ್ಳಬೇಕಾಗಿತ್ತು. 2022ರ ಎಪ್ರಿಲ್‌ನಲ್ಲಿ ವಿಕ್ಟೋರಿಯಾ ರಾಜ್ಯವು ಆತಿಥ್ಯ ವಹಿಸುವುದಾಗಿ ಘೋಷಣೆ ಮಾಡಿತ್ತು. ಈ ಮಧ್ಯೆ ವಿಕ್ಟೋರಿಯಾವು ಹಿಂದೆ ಸರಿದ ಕೂಡಲೇ, ಆಸ್ಟ್ರೇಲಿಯದ ಇತರೆ ರಾಜ್ಯಗಳಾದ ನ್ಯೂ ಸೌತ್ ವೇಲ್ಸ್, ಕ್ವೀನ್ಸ್‌ಲ್ಯಾಂಡ್, ವೆಸ್ಟ್ರನ್ ಆಸ್ಟ್ರೇಲಿಯ, ಸೌತ್ ಆಸ್ಟ್ರೇಲಿಯ ಮತ್ತು ಟಸೆನಿಯ ರಾಜ್ಯಗಳು ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆ ಮಾಡುವ ಯಾವುದೇ ಚಿಂತನೆ ನಮ್ಮಲ್ಲಿ ಇಲ್ಲ ಎಂದು ಘೋಷಣೆ ಮಾಡಿಬಿಟ್ಟಿವೆ.
ಏನಿದು ವಿಶಿಷ್ಟ ಪ್ರಾದೇಶಿಕ ವಿತರಣಾ ಮಾದರಿ
ಇದೇ ಮೊದಲ ಬಾರಿಗೆ ವಿಕ್ಟೋರಿಯ ರಾಜ್ಯವು ಬೇರೆ ರೀತಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆಗೆ ಮುಂದಾಗಿತ್ತು. ಅಂದರೆ ಇದುವರೆಗೆ ಕಾಮನ್‌ವೆಲ್ತ್ ಗೇಮ್ಸ್ ಅನ್ನು ದೇಶವೊಂದರ ಒಂದೇ ನಗರದಲ್ಲಿ ಆಯೋಜನೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ವಿಕ್ಟೋರಿಯದ ಬೇರೆ ಬೇರೆ 5 ನಗರಗಳಲ್ಲಿ ಆಯೋಜನೆ ಮಾಡಲು ಮುಂದಾಗಿತ್ತು. ಅಂದರೆ ಗೀಲಾಂಗ್, ಬೆಂಡಿಗೋ, ಬೆಲ್ಲಾರತ್, ಗಿಪ್ಸ್‌ಲ್ಯಾಂಡ್ ಮತ್ತು ಶೆಪಾರ್ಟನ್. 20 ಗೇಮ್ಸ್ ಮತ್ತು ಒಂಬತ್ತು ಪ್ಯಾರಾ ಗೇಮ್ಸ್‌ಗಳನ್ನು ನಡೆಸಲು ಚಿಂತನೆ ನಡೆಸಿತ್ತು. .
ಸ್ಟಾರ್‌ಗಳ ಸಮಸ್ಯೆ
ಒಲಿಂಪಿಕ್ಸ್‌ನಲ್ಲಿ ಸುಮಾರು 200 ದೇಶಗಳು ಭಾಗಿಯಾಗುತ್ತವೆ. ಅಂದರೆ ಅಮೆರಿಕ, ಚೀನ, ರಷ್ಯಾ ಸಹಿತ ಪ್ರಮುಖ ದೇಶಗಳು ಇದರಲ್ಲಿ ಭಾಗಿಯಾಗಿ ಕ್ರೀಡಾಕೂಟದ ಮೆರಗನ್ನು ಹೆಚ್ಚು ಮಾಡುತ್ತವೆ. ಆದರೆ ಕಾಮನ್‌ವೆಲ್ತ್‌ನಲ್ಲಿ ಈ ಯಾವುದೇ ದೇಶಗಳು ಇಲ್ಲ. ಇರುವ ದೇಶಗಳೆಂದರೆ, ಭಾರತ, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯದಂಥ ದೇಶಗಳು ಮಾತ್ರ. ಅಲ್ಲದೆ ಆ್ಯತ್ಲೆಟಿಕ್ಸ್‌ನಂಥ ಕ್ರೀಡೆಗಳ ಹೆಚ್ಚಾಗಿರುವುದರಿಂದ ಈ ದೇಶಗಳಲ್ಲಿ ದೊಡ್ಡ ಸ್ಟಾರ್‌ಗಳು ಕಡಿಮೆ.
ಏಳು ದೇಶಗಳ ಆತಿಥ್ಯ
1930ರಲ್ಲಿ ಆರಂಭವಾದ ಈ ಕಾಮನ್‌ವೆಲ್ತ್ ಗೇಮ್ಸ್ ಅನ್ನು ಇದುವರೆಗೆ ಕೇವಲ ಏಳು ದೇಶಗಳು ಮಾತ್ರ ಆಯೋಜನೆ ಮಾಡಿವೆ. ಅಂದರೆ ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯ, ನ್ಯೂಜಿಲೆಂಡ್, ಜಮೈಕಾ, ಮಲೇಷ್ಯಾ ಮತ್ತು ಭಾರತ. ಜಮೈಕಾ, ಮಲೇಷ್ಯಾ ಮತ್ತು ಭಾರತ ಇದುವರೆಗೆ ಒಮ್ಮೆ ಮಾತ್ರ ಆಯೋಜನೆ ಮಾಡಿವೆ. ಆಸ್ಟ್ರೇಲಿಯ ಇದುವರೆಗೆ ಆರು ಬಾರಿ ಆತಿಥ್ಯ ವಹಿಸಿಕೊಂಡಿದೆ.
ದಿನದಿಂದ ದಿನಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತಿರುವುದೇಕೆ?
ಕಾಮನ್‌ವೆಲ್ತ್ ಗೇಮ್ಸ್ ದಿನದಿಂದ ದಿನಕ್ಕೆ ಆಕರ್ಷಣೆ ಕಳೆದುಕೊಳ್ಳುತ್ತಿರುವುದಕ್ಕೆ ಬೇರೆ ಬೇರೆ ಕಾರಣಗಳುಂಟು. ಅದರಲ್ಲಿ ಪ್ರಮುಖ ಕಾರಣವೇ ಹಣಕಾಸಿನದ್ದು. ಸಾಮಾನ್ಯವಾಗಿ ಒಲಿಂಪಿಕ್ಸ್ ಆಯೋಜನೆ ವೇಳೆ, ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ಆತಿಥ್ಯ ವಹಿಸುವ ದೇಶಗಳಿಗೆ ಧನ ಸಹಾಯ ಮಾಡುತ್ತದೆ. ಆದರೆ ಕಾಮನ್‌ವೆಲ್ತ್ ಫೆಡರೇಶನ್ ಯಾವುದೇ ಧನ ಸಹಾಯ ಮಾಡುವುದಿಲ್ಲ.
ಇದಕ್ಕೆ ಬದಲಾಗಿ ಆತಿಥ್ಯ ವಹಿಸುವ ದೇಶವೇ ಇಂತಿಷ್ಟು ಅಂತ ಶುಲ್ಕ ಕಟ್ಟಬೇಕು. ಅಂದರೆ ಈಗ ವಿಕ್ಟೋರಿಯಾ ರಾಜ್ಯದಲ್ಲಿ ಕಾಮನ್‌ವೆಲ್ತ್ ಗೇಮ್ಸ್ ನಡೆಸಲು 41 ಸಾವಿರ ಕೋಟಿ ರೂ. ಬೇಕು. ಇದರಲ್ಲಿ ಒಂದೇ ಒಂದು ರೂಪಾಯಿಯನ್ನು ಕಾಮನ್‌ವೆಲ್ತ್ ಫೆಡರೇಶನ್ ನೀಡುವುದಿಲ್ಲ. ಆದರೆ 2020ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ಗೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ 1.7 ಬಿಲಿಯನ್ ಡಾಲರ್ ಹಣ ನೀಡಿತ್ತು. ಈ ಕ್ರೀಡಾಕೂಟಕ್ಕೆ ಒಟ್ಟಾರೆಯಾಗಿ ವೆಚ್ಚವಾದ ಹಣ 12 ಬಿಲಿಯನ್ ಡಾಲರ್. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಒಲಿಂಪಿಕ್ ಸಂಸ್ಥೆ ಪ್ಯಾರಿಸ್ ಒಲಿಂಪಿಕ್ಸ್‌ಗೂ ಇಷ್ಟೇ ಹಣ ನೀಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.