ಅಡಿಡಾಸ್ ಗೆ ಅಜಿತ್ ದಾಸ್ ಎಂಬ ಸಹೋದರನಿದ್ದಾನೆ…ಆನಂದ್ ಮಹೀಂದ್ರ ಟ್ವೀಟ್ ವೈರಲ್!
ವಿಡಿಯೋ, ಫೋಟೋಗಳು ಕೂಡಲೇ ವೈರಲ್ ಆಗುವುದು ಸ್ವಾಭಾವಿಕವಾಗಿದೆ.
Team Udayavani, Nov 22, 2022, 6:28 PM IST
ಮುಂಬೈ: ಮಹೀಂದ್ರ ಸಮೂಹ ಸಂಸ್ಥೆಗಳ ಮುಖ್ಯಸ್ಥ ಆನಂದ್ ಮಹೀಂದ್ರ ಅವರು ಟ್ವೀಟರ್ ನಲ್ಲಿ ಅಪರೂಪದ ಸಂಗತಿಗಳ ಫೋಟೊ ಹಂಚಿಕೊಂಡು ಚಮತ್ಕಾರದ ಪ್ರತಿಕ್ರಿಯೆಗಳನ್ನು ನೀಡುವ ಮೂಲಕ ಹೆಚ್ಚು ಜನಪ್ರಿಯರಾಗಿರುವುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.
ಇದನ್ನೂ ಓದಿ:“ನಾನು ಕಥೆಗಳನ್ನು ಬರೆಯುವುದಿಲ್ಲ, ಅವುಗಳನ್ನು ಕದಿಯುತ್ತೇನೆ.. ಬಾಹುಬಲಿ ಚಿತ್ರಕಥೆಗಾರ
ಆನಂದ್ ಮಹೀಂದ್ರ ಅವರು ತುಂಬಾ ಕುತೂಹಲ ಮೂಡಿಸುವ ವಿಡಿಯೋಗಳನ್ನು ವಾಟ್ಸಪ್ ಮೂಲಕ ಪಡೆದ ನಂತದ ಅದನ್ನು ಟ್ವೀಟರ್ ನಲ್ಲಿ ಹಾಸ್ಯದ ತಲೆಬರಹದ ಮೂಲಕ ಶೇರ್ ಮಾಡುವುದು ಪ್ರವೃತ್ತಿಯಾಗಿದೆ.
Completely logical. It just means that Adi has a brother called Ajit. Vasudhaiva Kutumbakam? ? pic.twitter.com/7W5RMzO2fB
— anand mahindra (@anandmahindra) November 22, 2022
ಹೀಗೆ ತಮ್ಮ ಟ್ವೀಟರ್ ನಲ್ಲಿ ಶೇರ್ ಮಾಡುವ ವಿಡಿಯೋ, ಫೋಟೋಗಳು ಕೂಡಲೇ ವೈರಲ್ ಆಗುವುದು ಸ್ವಾಭಾವಿಕವಾಗಿದೆ. ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆ ಎಂಬಂತೆ ಆನಂದ್ ಮಹೀಂದ್ರ ಅವರು ನಕಲಿ ಅಡಿಡಾಸ್ ಶೂ ಫೋಟೊವನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದು, ಬಳಿಕ ವೈರಲ್ ಆಗಿದೆ.
ಅಡಿಡಾಸ್ ವೈರಲ್ ಆಗಿದ್ದೇಕೆ?
ಆನಂದ್ ಮಹೀಂದ್ರ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಬಿಳಿ ಬಣ್ಣದ ಅಡಿಡಾಸ್ ಶೂನ ಫೋಟೊವನ್ನು ಅಪ್ ಲೋಡ್ ಮಾಡಿದ್ದು, ಇದರಲ್ಲಿ ಅಡಿಡಾಸ್ ನ ಲೋಗೋ ಮತ್ತು ಕಂಪನಿಯ ಟ್ರೇಡ್ ಮಾರ್ಕ್ ನ ಮೂರು ಗೆರೆಗಳಿವೆ. ಆದರೆ ನೀವು ಆ ಫೋಟೊವನ್ನು ಸೂಕ್ಷ್ಮವಾಗಿ ಗಮನಿಸಿದರೆ…ಅಲ್ಲಿ ಅಡಿಡಾಸ್ ಬದಲು ಅಜಿತ್ ದಾಸ್ ಎಂಬುದಾಗಿ ಬರೆದಿರುವ ಗುಟ್ಟು ಬಯಲಾಗುತ್ತದೆ!
ಈ ಶೂನ ಕಂಪನಿಯ ಹೆಸರು ಅಜಿತ್ ದಾಸ್.. ಆದರೆ ಇದು ನಕಲಿ ಅಡಿಡಾಸ್. ಈ ಫೋಟೋವನ್ನು ಹಂಚಿಕೊಂಡಿರುವ ಮಹೀಂದ್ರ ಅವರು, ಇದೊಂದು ಸಂಪೂರ್ಣ ತಾರ್ಕಿಕವಾಗಿದೆ ಎಂದಿದ್ದು, ಇದರ ಅರ್ಥ ಆದಿಗೆ ಅಜಿತ್ ಎಂಬ(ಆಡಿಡಾಸ್…ಅಜಿತ್ ದಾಸ್) ಸಹೋದರನಿದ್ದಾನೆ ಎಂದು ಕಾಲೆಳೆದಿದ್ದು, ವಸುದೈವ ಕುಟುಂಬಕಂ?ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.