Ajmer: ಅಜ್ಮೇರ್ ದರ್ಗಾದಲ್ಲಿ ನರ್ತನಕ್ಕೆ ಖಂಡನೆ
Team Udayavani, Jun 29, 2023, 6:48 AM IST
ಜೈಪುರ: ರಾಜಸ್ಥಾನದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಅಜ್ಮೇರ್ ದರ್ಗಾದಲ್ಲಿ ಮಹಿಳೆಯೊಬ್ಬರು ನರ್ತಿಸಿರುವ ಘಟನೆ ಟೀಕೆಗೆ ಗುರಿಯಾಗಿದೆ. ಸೂಫಿ ಸಂತರ ಪವಿತ್ರ ಕ್ಷೇತ್ರವಾದ ತಾರಾಗರ್ ಬೆಟ್ಟದಲ್ಲಿರುವ ಅಜ್ಮೇರ್ ದರ್ಗಾದಲ್ಲಿ ಅಪರಿಚಿತ ಮಹಿಳೆಯೊಬ್ಬಳು ಸುತ್ತಮುತ್ತಲಿನ ಪರಿವೆ ಇಲ್ಲದೆ ಇಯರ್ ಫೋನ್ ಹಾಕಿಕೊಂಡು ನೃತ್ಯ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
“ಧಾರ್ಮಿಕ ಕ್ಷೇತ್ರದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಮಹಿಳೆ ಕಲಿಯಬೇಕು” ಎಂದು 13ನೇ ಶತಮಾನದ ಸೂಫಿ ಸಂತ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾದ ಆಡಳಿತ ಮಂಡಳಿ ಹೇಳಿದೆ. ಹಿಂದೂ-ಮುಸ್ಲಿಮರಿಬ್ಬರ ಶ್ರದ್ಧಾಕೇಂದ್ರವಾಗಿರುವ ಜಾಗದಲ್ಲಿ ಮಹಿಳೆ ವರ್ತಿಸಿರುವ ರೀತಿಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.