ಪದ್ಮಶ್ರೀ ಹಿಂಪಡೆಯಿರಿ : ಕಂಗನಾ ಸ್ವಾತಂತ್ರ್ಯದ ಹೇಳಿಕೆ ‘ದೇಶದ್ರೋಹ’ ಎಂದ ಕಾಂಗ್ರೆಸ್
Team Udayavani, Nov 11, 2021, 6:20 PM IST
ಹೊಸದೆಹಲಿ : ನಟಿ ಕಂಗನಾ ರಣಾವತ್ ಅವರು 1947 ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ‘ಭಿಕ್ಷೆ’ ಎಂಬ ಹೇಳಿಕೆಯನ್ನು ‘ದೇಶದ್ರೋಹ’ ಎಂದು ಕಾಂಗ್ರೆಸ್ ಟೀಕಿಸಿದ್ದು, ಅವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿ ಸರಕಾರ ವಾಪಾಸ್ ಪಡೆಯಬೇಕು ಎಂದು ಗುರುವಾರ ಆಗ್ರಹಿಸಿದೆ.
ರಣಾವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, ಪದ್ಮ ಪ್ರಶಸ್ತಿಗೆ ಅರ್ಹರಲ್ಲದವರಿಗೆ ಈ ಗೌರವಗಳನ್ನು ನೀಡಿದಾಗ ಏನಾಗುತ್ತದೆ ಎಂಬುದನ್ನು ಅವರ ಹೇಳಿಕೆ ತೋರಿಸುತ್ತದೆ ಎಂದು ಕಿಡಿ ಕಾರಿದ್ದಾರೆ.
‘ಕಂಗನಾ ರಣಾವತ್ ಅವರು, ನಮ್ಮ ಸ್ವಾತಂತ್ರ್ಯ ಚಳವಳಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಅವಮಾನವಾಗುವ ಹೇಳಿಕೆ ನೀಡಿರುವುದರಿಂದ ಎಲ್ಲಾ ಭಾರತೀಯರಲ್ಲಿ ಸಾರ್ವಜನಿಕ ಕ್ಷಮೆಯಾಚಿಸಬೇಕು’ ಎಂದು ವಲ್ಲಭ್ ಒತ್ತಾಯಿಸಿದರು.
‘ಮಹಾತ್ಮಾ ಗಾಂಧಿ, ಸರ್ದಾರ್ ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಅವಮಾನಿಸುತ್ತಿರುವ ಇಂತಹ ಮಹಿಳೆಯಿಂದ ಭಾರತ ಸರಕಾರವು ಪ್ರತಿಷ್ಠಿತ ಪದ್ಮ ಪ್ರಶಸ್ತಿಯನ್ನು ಹಿಂಪಡೆಯಬೇಕು. ಸರಕಾರ ಆಕೆಗೆ ಪದ್ಮ ಪ್ರಶಸ್ತಿ ನೀಡುತ್ತಿದೆ ಎಂದರೆ ಇಂತಹವರನ್ನು ಉತ್ತೇಜಿಸುತ್ತಿದೆ ಎಂದರ್ಥ’ ಎಂದು ವಲ್ಲಭ್ ಆಕ್ರೋಶ ವ್ಯಕ್ತ ಪಡಿಸಿದರು.
ಇದನ್ನೂ ಓದಿ ಭಾರತಕ್ಕೆ 2014 ರಲ್ಲಿ ಸ್ವಾತಂತ್ರ್ಯ ಸಿಕ್ಕಿತು, 1947 ರಲ್ಲಿ ಸಿಕ್ಕಿದ್ದು ಭಿಕ್ಷೆ : ಕಂಗನಾ
‘ಅವರ ಹೇಳಿಕೆಯಿಂದಾಗಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಪ್ರತಿಪಾದಿಸಿದ ವಲ್ಲಭ್ , ರಣಾವತ್ ಪದ್ಮ ಪ್ರಶಸ್ತಿಗೆ ಭಾಜನರಾಗಿರುವ ಕಾರಣ ಸರಕಾರ ಅವರ ಪರವಾಗಿ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.
ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಕಂಗನಾ ಅವರು “ಅದು ಸ್ವಾತಂತ್ರ್ಯವಲ್ಲ, ಆದರೆ ‘ಭೀಖ್’ (ಭಿಕ್ಷೆ), ಮತ್ತು ಸ್ವಾತಂತ್ರ್ಯವು 2014 ರಲ್ಲಿ ಬಂದಿತು” ಎಂದಿದ್ದರು. ಆ ವಿಡಿಯೋ ವೈರಲ್ ಆಗಿದ್ದು ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.