ರಾಜ್ಯದಲ್ಲಿ ಅಶಾಂತಿ, ಅರಾಜಕತೆಗೆ ಕಾಂಗ್ರೆಸ್ ಸರ್ವಪ್ರಯತ್ನ: ಆರ್.ಅಶೋಕ್
ಹಿಂದೆ ಅವರದೇ ಸಿಎಂ ಬದಲಾಯಿಸಲು ಕನಕಪುರದಲ್ಲಿ ಗಲಾಟೆ ಮಾಡಿಸುತ್ತಿದ್ದರು
Team Udayavani, Apr 23, 2022, 5:37 PM IST
ಬೆಂಗಳೂರು: “ಕಾಂಗ್ರೆಸ್ ಸಂಸ್ಕೃತಿಯೇ ಎಲ್ಲೆಡೆ ಅಶಾಂತಿ ನಿರ್ಮಾಣ ಮಾಡುವುದು. ಹಿಂದೆ ಅವರದೇ ಪಕ್ಷದ ಸಿಎಂ ಬದಲಾಯಿಸಲು ರಾಮನಗರ, ಕನಕಪುರದಲ್ಲಿ ಗಲಾಟೆ ಮಾಡಿಸುತ್ತಿದ್ದರು ಎಂದು ಕಂದಾಯ ಸಚಿವ ಆರ್ ಅಶೋಕ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಜೆ ಹಳ್ಳಿ-ಕೆಜಿಹಳ್ಳಿಯಲ್ಲೂ ಅವರದೇ ಪಕ್ಷದ ಶಾಸಕನ ಮನೆಯನ್ನು, ಅವರದೇ ಪಕ್ಷದ ಮಾಜಿ ಮೇಯರ್ ಬೆಂಕಿ ಹಾಕಿಸಿ, ಜೈಲಿಗೆ ಹೋಗಿದ್ದ. ಹುಬ್ಬಳ್ಳಿ ಗಲಾಟೆಯಲ್ಲೂ ಸ್ಥಳೀಯ ಕಾಂಗ್ರೆಸ್ ಅಧ್ಯಕ್ಷನೇ ಭಾಗಿಯಾಗಿದ್ದಾನೆ. ಪಿಎಸ್ಐ ನೇಮಕಾತಿ ಹಗರಣದಲ್ಲೂ ಕಾಂಗ್ರೆಸ್ ಮುಖಂಡನೇ ಇದ್ದಾನೆ. ಹೀಗೆ ಅವರೇ ಎಲ್ಲ ಹಗರಣದಲ್ಲೂ ಭಾಗಿಯಾಗಿ ಉಳಿದವರ ಬಗ್ಗೆ ಮಾತನಾಡುತ್ತಾರೆ. ರಾಜ್ಯದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಸರ್ವಪ್ರಯತ್ನ ಮಾಡುತ್ತಿದೆ. ವಿದೇಶಿ ಶಕ್ತಿಗಳು ಈ ಎಲ್ಲ ಘಟನೆಯಲ್ಲಿ ಭಾಗಿಯಾಗಿದೆಯೇ ಎನ್ನುವ ಬಗ್ಗೆ ತನಿಖೆ ನಡೆಸಬೇಕು” ಎಂದರು.
“ನಮ್ಮಲ್ಲೂ ಯುಪಿ, ಮಧ್ಯಪ್ರದೇಶ ಮಾದರಿ ಕಾನೂನು ಬರಬೇಕಾದ ಸ್ಥಿತಿ ಬರುತ್ತಿದೆ. ಬುಲ್ಡೋಜರ್ ಕಾನೂನು ತಂದರೆ ಮಾತ್ರ ಮಟ್ಟ ಹಾಕಲು ಸಾಧ್ಯ. ಗಲಭೆ ಸೃಷ್ಟಿ ಮಾಡುವವರ ಮೇಲೆ ಕಠಿಣ ಕ್ರಮ ಜರುಗಿಸಬೇಕು. ಬುಲ್ಡೋಜರ್ ಬಳಸಿ ಆರೋಪಿಗಳ ಅಕ್ರಮ ಮನೆಗಳನ್ನು ತೆರವು ಮಾಡಬೇಕು. ಯಾವುದೇ ಧರ್ಮ, ಜಾತಿಗೆ ಸೇರಿದ್ದರೂ ಸುಮ್ಮನೆ ಬಿಡಬಾರದು. ಅವರ ಆಸ್ತಿ-ಪಾಸ್ತಿಗಳನ್ನು ಜಪ್ತಿ ಮಾಡಿಕೊಳ್ಳಬೇಕು. ಈ ಬಗ್ಗೆ ನಾನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚೆ ಮಾಡುತ್ತೇನೆ. ನಾವು ಇನ್ನಷ್ಟು ಕಠಿಣ ಕ್ರಮ ತೆಗೆದುಕೊಂಡು ದುಷ್ಟರ ಹೆಡೆಮುರಿ ಕಟ್ಟುತ್ತೇವೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಅರಾಜಕತೆ ಉಂಟುಮಾಡುವ ಕಾಂಗ್ರೆಸ್ ಗೆ ತಕ್ಕ ಪಾಠ ಜನರೇ ಕಲಿಸುತ್ತಾರೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.