Congress ವಿದ್ಯುತ್‌ ಉಚಿತ: ನಿಗದಿತ ಶುಲ್ಕ ಖಚಿತ!

ಬಳಸಿ, ಬಿಡಿ-ಬಿಲ್‌ ಪಾವತಿ ಮಾತ್ರ ಗ್ಯಾರಂಟಿ

Team Udayavani, May 20, 2023, 7:42 AM IST

power lines

ಬೆಂಗಳೂರು: ಹೊಸ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಎಲ್ಲೆಡೆ ವಿದ್ಯುತ್‌ ಬಿಲ್‌ ಪಾವತಿಗೆ ನಿರಾಕರಣೆ ಕೂಗು ಕೇಳಿಬರುತ್ತಿದೆ. ಆದರೆ ಜನರು ವಿದ್ಯುತ್‌ ಬಳಸಿ ಅಥವಾ ಬಿಡಿ; ನಿಗದಿತ ಶುಲ್ಕ ಪಾವತಿಸುವುದು ತಪ್ಪದು!

ಕಾಂಗ್ರೆಸ್‌ ಈಗಾಗಲೇ 5 ಗ್ಯಾರಂಟಿ ಗಳನ್ನು ಘೋಷಿಸಿದ್ದು, ಆ ಪೈಕಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಕೂಡ ಒಂದಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ನಡೆಯ ಲಿರುವ ಮೊದಲ ಸಚಿವ ಸಂಪುಟ ಸಭೆ ಯಲ್ಲಿ ಉಚಿತ ವಿದ್ಯುತ್‌ ಘೋಷಣೆ ಯನ್ನು ಅಂಗೀಕರಿಸುವ ಸಾಧ್ಯತೆ ಇದೆ. ಆದರೆ ಸರಕಾರ ವಿದ್ಯುತ್‌ ಉಚಿತ ವಾಗಿ ಕೊಟ್ಟರೂ ಗ್ರಾಹಕರಿಗೆ ನಿಗದಿತ ಶುಲ್ಕದ ರೂಪದಲ್ಲಿ ಬಿಲ್‌ ಪಾವತಿ ಸುವುದರಿಂದ ಮುಕ್ತಿ ಸಿಗುವುದು ಅನುಮಾನ.

ಯಾಕೆಂದರೆ ಪ್ರತೀ ತಿಂಗಳು ಬರುವ ವಿದ್ಯುತ್‌ ಬಿಲ್‌ನಲ್ಲಿ ನಿಗದಿತ ಶುಲ್ಕ ಮತ್ತು ಬಳಕೆ ಶುಲ್ಕ ಎಂಬ 2 ವಿಭಾಗಗಳು ಇರುತ್ತವೆ. ಕಾಂಗ್ರೆಸ್‌ ಹೇಳಿದ್ದು 200 ಯೂನಿಟ್‌ವರೆಗೆ ವಿದ್ಯುತ್‌ ಉಚಿತ ಎಂದಷ್ಟೇ. ಹೀಗಾಗಿ ನಿಗದಿತ ಶುಲ್ಕವನ್ನು ಎಂದಿನಂತೆ ಭರಿಸಬೇಕಾಗುತ್ತದೆ. ಪ್ರಸ್ತುತ ಗೃಹ ಬಳಕೆದಾರರಿಗೆ ಕನಿಷ್ಠ 110 ರಿಂದ ಗರಿಷ್ಠ 210 ರೂ. ನಿಗದಿತ ಶುಲ್ಕ ಇದೆ.

ಇತ್ತೀಚೆಗಿನ ವರ್ಷಗಳಲ್ಲಿ ವಿದ್ಯುತ್‌ ಬಳಕೆ ಶುಲ್ಕಕ್ಕಿಂತ ನಿಗದಿತ ಶುಲ್ಕಕ್ಕೆ ಎಲ್ಲ ವಿದ್ಯುತ್‌ ಸರಬರಾಜು ಕಂಪೆನಿ (ಎಸ್ಕಾಂ)ಗಳು ಒತ್ತು ನೀಡುತ್ತಿವೆ. ಕಳೆದ ಒಂದು ವರ್ಷದ ಅಂತರದಲ್ಲಿ ಎರಡು ಬಾರಿ ವಿದ್ಯುತ್‌ ದರ ಪರಿಷ್ಕರಣೆ ಆಗಿದ್ದು, ಶುಲ್ಕವನ್ನು 2022 ರಲ್ಲಿ ಪ್ರತೀ ಯೂನಿಟ್‌ಗೆ 48 ಪೈಸೆ ಮತ್ತು 2023ರಲ್ಲಿ 70 ಪೈಸೆ ಹೆಚ್ಚಿಸ ಲಾಗಿದೆ. 48 ಪೈಸೆಯಲ್ಲಿ 30 ಪೈಸೆ ಹಾಗೂ 70 ಪೈಸೆಯಲ್ಲಿ 55 ಪೈಸೆ ನಿಗದಿತ ಶುಲ್ಕವಾಗಿದೆ. ಮುಂಬರುವ ದಿನಗಳಲ್ಲೂ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ. ಹೀಗಾಗಿ “ಉಚಿತ ವಿದ್ಯುತ್‌ ಗ್ಯಾರಂಟಿ’ಯಿಂದ ಗ್ರಾಹಕರಿಗೆ ನಿರೀಕ್ಷಿತ ಮಟ್ಟದ ಲಾಭ ಸಿಗುವುದು ಅನುಮಾನ ಎಂದು ತಜ್ಞರು ವಿಶ್ಲೇಷಿಸುತ್ತಾರೆ.

ಷರತ್ತುಗಳ ಸುಳಿವು
ಈ ಮಧ್ಯೆ ಷರತ್ತುಗಳ ಸುಳಿವನ್ನು ಕಾಂಗ್ರೆಸ್‌ ನಾಯಕರು ನೀಡಿದ್ದಾರೆ. 200 ಯೂನಿಟ್‌ ದಾಟಿದವರಿಗೆ ಅಂದರೆ, ಉದಾಹರಣೆಗೆ, 201 ಯೂನಿಟ್‌ ಬಳಕೆಯಾಗಿದ್ದರೆ ಪೂರ್ತಿ ಬಿಲ್‌ ಪಾವತಿಸಬೇಕಾಗುತ್ತದೆಯೇ? 250 ಯೂನಿಟ್‌ ಬಳಕೆಯಾಗಿದ್ದರೆ ಕೇವಲ 50 ಯೂನಿಟ್‌ಗೆ ಬಿಲ್‌ ಪಾವತಿಸಿದರೆ ಸಾಕೇ? ಬಿಪಿಎಲ್‌ನವರಿಗೆ ಮಾತ್ರ ಇದು ಅನ್ವಯವೇ? -ಇಂತಹ ಹಲವು ಗೊಂದಲಗಳಿಗೆ ಶನಿವಾರ ತೆರೆಬೀಳುವ ಸಾಧ್ಯತೆ ಇದೆ.

100 ಯೂನಿಟ್‌ಗಿಂತ ಕಡಿಮೆ ಬಳಕೆದಾರರು 1 ಕೋಟಿ
200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಘೋಷಣೆಯಿಂದ ಗ್ರಾಹಕರಿಗೆ ಅನುಕೂಲ ಆಗುವುದಿಲ್ಲ ಎಂದಲ್ಲ; ರಾಜ್ಯದಲ್ಲಿ 1.92 ಕೋಟಿ ಗೃಹ ಬಳಕೆದಾರರಿದ್ದಾರೆ. ಅವರಲ್ಲಿ ಸುಮಾರು ಶೇ. 50ರಷ್ಟು ಅಂದರೆ ಒಂದು ಕೋಟಿ ಗ್ರಾಹಕರು ತಿಂಗಳಿಗೆ 100 ಯೂನಿಟ್‌ಗಿಂತ ಕಡಿಮೆ ಬಳಕೆ ಮಾಡುವವರೇ ಇದ್ದಾರೆ. ಅವರೆಲ್ಲರಿಗೂ ಯೋಜನೆಯಿಂದ ಪ್ರಯೋಜನವಾಗಲಿದೆ. ಆದರೆ ಸರಕಾರ ಯಾವ ರೀತಿಯ ಷರತ್ತುಗಳನ್ನು ವಿಧಿಸುತ್ತದೆ ಎನ್ನುವುದನ್ನು ಕಾದು ನೋಡ ಬೇಕು ಎಂದು ಕೆಇಆರ್‌ಸಿ ಸಲಹಾ ಸಮಿತಿ ಮಾಜಿ ಸದಸ್ಯ ಎಂ.ಜಿ. ಪ್ರಭಾಕರ್‌ ತಿಳಿಸಿದ್ದಾರೆ.

ಅಂಕಿ-ಅಂಶಗಳ ಪ್ರಕಾರ, ಗೃಹಬಳಕೆಗೆ ವಾರ್ಷಿಕ 14,089 ದಶ ಲಕ್ಷ ಯೂನಿಟ್‌ಗೆ ಅನುಮೋದನೆ ನೀಡಲಾ ಗಿದೆ. ಪ್ರತೀ ಯೂನಿಟ್‌ಗೆ 9.12 ರೂ. ವೆಚ್ಚ ಆಗುತ್ತದೆ. 14,089 ದಶ ಲ ಕ್ಷ ಯೂನಿಟ್‌ಗೆ ಲೆಕ್ಕ ಹಾಕಿದರೆ 12,849 ಕೋಟಿ ರೂ. ಆಗುತ್ತದೆ. ಇದರಲ್ಲಿ ಅರ್ಧಕ್ಕರ್ಧ ಗ್ರಾಹಕರು 100 ಯೂನಿಟ್‌ಗಿಂತ ಕಡಿಮೆ ಬಳಸುವವರು ಎಂದಾದರೆ, ಅಂದಾಜು 6,400 ಕೋ. ರೂ. ಆಗುತ್ತದೆ. ಇದರ ಜತೆಗೆ ಭಾಗ್ಯಜ್ಯೋತಿ, ಕುಟೀರಜ್ಯೋತಿ, ಪಂಪ್‌ಸೆಟ್‌ಗಳಿಗೆ ನೀಡಿದ ವಿದ್ಯುತ್‌ಗೆ ಪ್ರತಿಯಾಗಿ ವಾರ್ಷಿಕ ಸುಮಾರು 14,500 ಕೋ. ರೂ. ಆಗುತ್ತದೆ. ಇದರ ಹಳೆಯ ಬಾಕಿ ಕೂಡ ಸಾವಿರಾರು ಕೋ. ರೂ. ಇದೆ ಎಂದೂ ಹೇಳಿದ್ದಾರೆ.

 ವಿಜಯ ಕುಮಾರ ಚಂದರಗಿ

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

WhatsApp Image 2024-11-17 at 21.09.50

Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ

ssa

Malpe: ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.