ಕೊಲೆಗೆ ಸಂಚು; ಗೂಂಡಾಗಿರಿ ಮಾಡುವವರನ್ನ ಸರ್ಕಾರ ಬಿಡುವುದಿಲ್ಲ: ಆರ್. ಅಶೋಕ್
Team Udayavani, Dec 1, 2021, 7:41 PM IST
ಮೈಸೂರು : ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆಗೆ ಸಂಚು ಪ್ರಕರಣ ಆಶ್ಚರ್ಯ ತರುವಂತಹ ಘಟನೆ,ಒಬ್ಬ ರಾಜಕಾರಣಿ ವಿರುದ್ಧ ಈ ರೀತಿಯ ಸಂಚು ನೋಡಿದರೆ ಆತಂಕ ಆಗುತ್ತಿದೆ ಎಂದು ಮೈಸೂರಿನಲ್ಲಿ ಬುಧವಾರ ಸಚಿವ ಆರ್ ಆಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವರು, ಇವರೇನು ಇವತ್ತಿಂದನೇ ಪ್ರಯತ್ನ ಮಾಡುತ್ತಿದ್ದಾರೆ ಅನ್ನಿಸುವುದಿಲ್ಲ..ಬಹಳ ದಿನದಿಂದ ಸ್ಕೆಚ್ ಹಾಕಿದ್ದಾರೆ ಅನ್ನಿಸುತ್ತದೆ ಎಂದರು.
ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ದ ನಾಯಕರ ಸಂಪರ್ಕ ಇರುವ ವ್ಯಕ್ತಿ. ಒಬ್ಬ ಶಾಸಕರ ವಿರುದ್ದ ಕೊಲೆ ಸಂಚು ನೋಡಿದರೆ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕಾಗಿದೆ. ರಾಜಕೀಯ ವೈರತ್ವ ಬೇರೆ. ಆದರೆ ಕೊಲೆ ಮಾಡಿಸುವ ಮಟ್ಟಕ್ಕೆ ಬಂದಿರುವುದು ದೊಡ್ಡ ಅಪರಾಧ. ಇಂತಹವರನ್ನು ಬಗ್ಗು ಬಡಿಯಬೇಕು. ಇದರ ಹಿಂದೆ ಯಾವ ಸಂಚಿದೆ, ಕುತಂತ್ರ ಇದೆ ಅನ್ನುವ ವಿಚಾರವೂ ಬಯಲಿಗೆ ಬರಬೇಕು. ಇದರ ಹಿಂದೆ ಇರುವ ದೊಡ್ಡ ವ್ಯಕ್ತಿಗಳು ಸಹ ಹೊರ ಬರಬೇಕು ಎಂದರು.
ನನಗೆ ಇರುವ ಮಾಹಿತಿ ಪ್ರಕಾರ ಆಂಧ್ರ ಮೂಲದ ಸುಪಾರಿ ಹಂತಕರಿಂದ ಅವರನ್ನು ಮುಗಿಸಬೇಕು ಅನ್ನುವುದು ಅವರ ಉದ್ದೇಶ ಅನ್ನಿಸುತ್ತಿದೆ. ಇದು ಒಂದು ದೊಡ್ಡ ಷಡ್ಯಂತ್ರ. ಇಂತಹವರನ್ನ ಬಿಡುವುದಿಲ್ಲ ಅವರನ್ನ ಮಟ್ಟ ಹಾಕುತ್ತೇವೆ. ನಾನು ಮುಖ್ಯಮಂತ್ರಿಗಳ ಜೊತೆಯಲ್ಲಿಯೂ ಮಾತಾನಾಡುತ್ತೇನೆ. ಗೂಂಡಾಗಿರಿ ಮೂಲಕ ಮೇಲೆ ಬರಲು ಪ್ರಯತ್ನ ಮಾಡುವವರನ್ನ ಸರ್ಕಾರ ಬಿಡುವುದಿಲ್ಲ. ಈಗಾಗಲೇ ಪೊಲೀಸರ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ.
ನಾನು ಕಾಂಗ್ರೆಸ್ ನಾಯಕರಲ್ಲೂ ಸಹ ಕೇಳಿಕೊಳ್ಳುತ್ತೇನೆ.ಇಂತಹ ಕೊಲೆ ಯತ್ನ ವ್ಯಕ್ತಿಗಳಿಗೆ ಬೆಂಬಲ ನೀಡಬೇಡಿ.ರಾಜಕೀಯವಾಗಿ ಮೈಸೂರಲ್ಲೂ ಒಬ್ಬ ಶಾಸಕರ ಮೇಲು ದಾಳಿಯಾಗಿತ್ತು. ಇವೆಲ್ಲವೂ ನಮಗೆ ಪಾಠ ಆಗಬೇಕು.ಇಂತಹ ಗೂಂಡಾಗಿರಿ, ಸಮಾಜಘಾತುಕರನ್ನ ಮಟ್ಟ ಹಾಕಬೇಕು. ಇಂತಹ ವ್ಯಕ್ತಿಗಳಿಗೆ ಯಾವುದೇ ರಾಜಕೀಯ ಪಕ್ಷಗಳು ಬೆಂಬಲ ನೀಡಬಾರದು ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.