ಗ್ರಾಹಕ ರಕ್ಷಣ ಕಾನೂನು-2019: ಡಿಜಿಟಲ್‌ ವ್ಯವಹಾರ, ಜಾಹೀರಾತುಗಳಿಗೂ ಮೂಗುದಾರ

ಇಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ

Team Udayavani, Dec 24, 2020, 7:20 AM IST

ಗ್ರಾಹಕ ರಕ್ಷಣ ಕಾನೂನು-2019: ಡಿಜಿಟಲ್‌ ವ್ಯವಹಾರ, ಜಾಹೀರಾತುಗಳಿಗೂ ಮೂಗುದಾರ

ಬಳಕೆದಾರರ ಶೋಷಣೆ, ಸಮಸ್ಯೆ, ತೊಂದರೆಗಳು.. ಇವೆಲ್ಲವು ಇಂದು ನಿನ್ನೆಯದಲ್ಲ. ಅಥವಾ ಕೇವಲ ಭಾರತಕ್ಕೆ ಸೀಮಿತಗೊಂಡಿಲ್ಲ. ಜಗತ್ತಿನಾದ್ಯಂತ ಗ್ರಾಹಕ ಮೋಸ, ನಂಬಿಕೆ ದ್ರೋಹ ಗಳಿಗೆ ಸಿಲುಕಿ ಹೈರಾಣಾಗಿದ್ದಾನೆ. ಹೀಗೇಗಾಗುತ್ತಿದೆ? ಆತನ ಆಸೆಬುರಕತನವೇ? ಹೆಚ್ಚಿನ ಲಾಭ ಪಡೆಯಬೇಕೆನ್ನುವ ಪೂರೈಕೆದಾರನ ಅತೀ ಲಾಭ ಪ್ರವೃತ್ತಿಯೇ? ಪೂರೈಕೆದಾರರು, ಉತ್ಪಾದಕರು, ತಾಂತ್ರಿಕ ತಜ್ಞರನ್ನೂ ಪರಿಜ್ಞಾನವಂತರನ್ನೂ ಕೆಲಸಕ್ಕೆ ಸೇರಿಸಿಕೊಂಡು, ಅವರಿಗೆ ವ್ಯವಹಾರದ ಲಾಭದ ಗುರಿಗಳನ್ನು ಕೊಟ್ಟು ಬೆಣ್ಣೆಯಲ್ಲಿರುವ ಕೂದಲಿನಂತೆ ಸೂಕ್ಷ್ಮವಾಗಿ ತಮ್ಮ ಮೋಸಗಳನ್ನು ಮರೆಮಾಚುತ್ತಾರೆ. ಇದನ್ನು ಅರ್ಥ ಮಾಡಿಕೊಂಡು ಗ್ರಾಹಕ ಜಾಗೃತನಾಗಬೇಕಾದರೆ ಆತನಿಗೆ ಪರಿಜ್ಞಾನದ ಆವಶ್ಯಕತೆ ಇದೆ. ಗ್ರಾಹಕನ ಹಕ್ಕುಗಳೇನು, ಕರ್ತವ್ಯಗಳೇನು, ಪೂರೈಕೆದಾರರ ಯಾವ ಏಟಿಗೆ, ತಾವು ಪ್ರತಿ ಏಟು ಕೊಟ್ಟು, ಏಟು ತಾಗದಂತೆ ನೋಡಬೇಕು ಎಂದು ತಿಳಿದಿರಬೇಕು.

ಹಲವು ದೇಶಗಳು ಗ್ರಾಹಕರ ರಕ್ಷಣೆಗಾಗಿ ಕಾನೂನುಗಳನ್ನು ತಂದಿವೆ. ಗ್ರಾಹಕರ ರಕ್ಷಣೆಗಾಗಿ ಕೇಂದ್ರ ಸರಕಾರವು 1986ರಲ್ಲಿ ಒಂದು ಸರಳ ಕಾನೂನನ್ನು ಜಾರಿಗೆ ತಂದಿತು. ಕೇವಲ 27 ಪರಿಚ್ಛೇದಗಳನ್ನು ಒಳಗೊಂಡ ಈ ಕಾನೂನು ಶಕ್ತಿಶಾಲಿ ಎಂದು ಆಗ ತಿಳಿಯಲಾಗಿತ್ತು. ಅದರ ಮೂಲ ಉದ್ದೇಶವೇ ಸರಳ ನ್ಯಾಯದಾನ. ಖರ್ಚು ರಹಿತ ನ್ಯಾಯದಾನ. ಇತರ ಎಲ್ಲ ಕಾನೂನುಗಳಿಗಿಂತಲೂ ಈ ಕಾನೂನು ಗ್ರಾಹಕರಿಗೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಅಲ್ಲದೆ ಶೀಘ್ರ ವಿಲೇ ಎಂಬ ಧನಾತ್ಮಕ ಅಂಶಗಳನ್ನು ಒಳಗೊಂಡ ಈ ಕಾನೂನು ಅಂದಿನ ದಿನಗಳಲ್ಲಿ ಗ್ರಾಹಕನಿಗೆ ಒದಗಿ ಬಂದ ವರದಾನ ಎಂದೇ ಭಾವಿಸಲಾಗಿತ್ತು.
ಆದರೆ ವರ್ಷಗಳುರುಳಿದಂತೆ ಯೇ ಈ ಕಾನೂನಿನ ಹತ್ತು ಹಲವು ನ್ಯೂನತೆ, ತೊಡಕುಗಳು ನಿಧಾನ ವಾಗಿ ಗೋಚರಕ್ಕೆ ಬಂದವು.

ಗ್ರಾಹಕರಿಗೆ ಕಾನೂನಿನ ಮೇಲಿನ ನಂಬಿಕೆ ಮಾಯವಾಗತೊಡಗಿತು. ಇದನ್ನು ಮನಗಂಡ ಸರಕಾರ, ಹೊಸ ಕಾನೂನನ್ನು ಜಾರಿಗೆ ತಂದಿದೆ. ಇದರಲ್ಲಿ ಹಿಂದಿನ ಕಾನೂನಿನಲ್ಲಿದ್ದ ಅನೇಕ ನ್ಯೂನತೆಗಳನ್ನು ಪರಿಹರಿಸಿ, ಹೊಸ ವ್ಯಾಖ್ಯಾನಗಳನ್ನು ಸೇರಿಸಲಾಯಿತು. ಅಲ್ಲದೆ ಸುನಾಮಿಯಂತೆ ಹಬ್ಬುತ್ತಿರುವ ಡಿಜಿಟಲ್‌ ವ್ಯವಹಾರವನ್ನೂ ಕಾನೂನಿನ ಪರಿಧಿಯೊಳಗೆ ತಂದು ಗ್ರಾಹಕನಿಗಾಗುತ್ತಿರುವ ಮೋಸ, ವಂಚನೆಗಳ ಬಗೆಗೆ ಗಂಭೀರ ಚಿಂತನೆ ನಡೆಸಿ, ಅವುಗಳಿಗೆಲ್ಲ ಪರಿಹಾರ ಕಂಡುಕೊಳ್ಳುವ ಮಾರ್ಗ ಇದರಲ್ಲಿದೆ. ಗ್ರಾಹಕ ರಕ್ಷಣ ಕಾನೂನು- 2019ರಲ್ಲಿ 107 ಪರಿಚ್ಛೇದಗಳಿವೆ. ಕಾನೂನಿನ ತಿರಸ್ಕಾರಕ್ಕೆ ದಂಡ ಹಾಗೂ ಸಜೆ ಕೊಡುವಂತಾಯಿತು.

ಜಾಹೀರಾತುಗಳ ಮೇಲೆ ಹತೋಟಿ, ಕ್ರಮ, ಮಾತುಕತೆಯಿಂದ ತೀರ್ಮಾನಕ್ಕೆ ಪ್ರೋತ್ಸಾಹ ಹೊಸ ಕಾನೂನಿನ ಕೆಲವೊಂದು ವಿಶೇಷಗಳು.ಹೊಸ ಕಾನೂನಿನ ಪ್ರಕಾರ ಜಿಲ್ಲಾ ಗ್ರಾಹಕರ ಆಯೋಗದ ಆರ್ಥಿಕ ವ್ಯಾಪ್ತಿ ಒಂದು ಕೋ.ರೂ.ಗಳ ವರೆಗೆ. 1-10 ಕೋ. ರೂ. ತನಕದ ವ್ಯಾಜ್ಯಗಳು ರಾಜ್ಯ ಆಯೋಗಕ್ಕೆ. 10 ಕೋ. ರೂ. ಗಳಿಗಿಂತಲೂ ಹೆಚ್ಚಿನ ಮೊತ್ತದ ವ್ಯಾಜ್ಯವಾಗಿದ್ದಲ್ಲಿ ಅದನ್ನು ರಾಷ್ಟ್ರೀಯ ಆಯೋಗ ತೀರ್ಮಾನಿಸ ಬೇಕಾಗುತ್ತದೆ. ಪ್ರತಿವಾದಿಯ ಕಚೇರಿ/ಕಾರ್ಖಾನೆ/ಗ್ರಾಹಕರ ನಿವಾಸ, ಅಥವಾ ಘಟನೆ ನಡೆದ ಜಿಲ್ಲೆ ಇವು ಭೌಗೋಳಿಕ ವ್ಯಾಪ್ತಿಯನ್ನು ನಿರ್ಧರಿಸುತ್ತದೆ. ನೇರ ವ್ಯಾಪಾರದ ಎಲ್ಲ ನಿಯಮಗಳು ಇ-ಕಾಮರ್ಸ್‌ಗೆ ಬದ್ಧ. ಅರ್ಜಿ ನೋಂದಣಿ ನೋಟಿಸ್‌ ಬಟವಾಡೆ, ತೀರ್ಮಾನ ಕಾಲಾವಕಾಶ, ಮೇಲ್ಮನವಿ, ಮುಂದುವರಿಕೆ, ಹೀಗೆ ವ್ಯಾಜ್ಯದ ಎಲ್ಲ ಆಯಾಮಗಳ ಮೇಲೆ ಹತೋಟಿ ಕ್ರಮ, ಮಧ್ಯಾಂತರ ತೀರ್ಪು, ವಿಶೇಷ ನ್ಯಾಯ ವೇದಿಕೆ, ಸಂಚಾರಿ ವೇದಿಕೆ, ವೀಡಿಯೋ ನಡೆ, ಕೇಸುಗಳ ಸುಲಭ ವರ್ಗಾವಣೆ- ಈ ಕಾನೂನಿನ ಇತರ ಪ್ರಮುಖಾಂಶಗಳು. ಅಕ್ರಮ ವ್ಯಾಪಾರದ ಮೇಲೆ ದೂರು ನೀಡಬಹುದು. ಸರಕು ಜವಾಬ್ದಾರಿ ಬದ್ಧತೆಯನ್ನು ಮತ್ತಷ್ಟು ಬಲಗೊಳಿಸಲಾಗಿದೆ.

ಈ ಹೊಸ ಕಾನೂನಿಗೆ ದೃಢತೆ ಹಾಗೂ ನಿರಂತರತೆ ಇರುವುದೇ ಸೆಕ್ಷನ್‌ 10ರಿಂದ. ಇದರ ಪ್ರಕಾರ ಕೇಂದ್ರ ಗ್ರಾಹಕ ರಕ್ಷಣ ಕೌನ್ಸಿಲ್‌ (ಸಿಸಿಪಿಸಿ) ಹುಟ್ಟು ಹಾಕಿ ಅದರ ಮೂಲಕ ಕೇಂದ್ರ ಗ್ರಾಹಕ ರಕ್ಷಣ ಸತ್ತೆ ಅಸ್ತಿತ್ವಕ್ಕೆ ಬಂದಿದೆ. ಇದಕ್ಕೆ ಅಗಾಧ ಅಧಿಕಾರ ಕೊಟ್ಟಿದ್ದಾರೆ. ಪಾಲಿಸಿ ವಿಷಯ ನಿರ್ಧರಿಸುತ್ತದೆ. ಅಸ್ವಾಭಾವಿಕ ವ್ಯವಹಾರದ ಮೇಲೆ ಹತೋಟಿ, ದಾರಿ ತಪ್ಪಿಸುವ ಜಾಹೀರಾತುಗಳ ಹತೋಟಿ, ವಿಚಾರಣಾಧಿಕಾರ. ದೂರು ದಾಖಲಿಸುವ ಅಧಿಕಾರ, ತೀರ್ಪುಗಳ ಮರುಪರಿಶೀಲನೆ, ಅಂತಾರಾಷ್ಟ್ರೀಯ ಮಟ್ಟದ ಉತ್ತಮ ನಡೆಗಳ ಜಾರಿ, ಗ್ರಾಹಕ ಹಕ್ಕುಗಳ ಮೇಲೆ ಸಂಶೋಧನೆ, ಎನ್‌ಜಿಒ ಗಳಿಗೆ ಪ್ರೋತ್ಸಾಹ, ಇತರ ಸಚಿವ ಖಾತೆಗಳಿಗೆ ಸಲಹೆ/ಮಾರ್ಗದರ್ಶನ, ವಸ್ತು ವಾಪಸು ಮಾಡಿಸುವ ಅಧಿಕಾರ, ಜಪ್ತಿ ಮಾಡಲು ಅಲ್ಲದೇ ತಪ್ಪು ಮಾಡುವವರ ಹೆಡೆ ಮುರಿ ಕಟ್ಟಲು.

ಹೊಸ ಕಾನೂನು ಬಂದಿದೆ ಎಂದು ಗ್ರಾಹಕರು ತುಂಬಾ ಆಶಾವಾದಿಗಳಾಗಬೇಕಾಗಿಲ್ಲ. ಯಾಕೆಂದರೆ ಹೊಸ ವಿಷಯಗಳು ವಾಸ್ತವದಲ್ಲಿ ಆಚರಣೆಗೆ ಬರಲು ಸ್ವಲ್ಪ ಕಾಲಾವಕಾಶಬೇಕಾಗಬಹುದು. ಹಾಗೆಂದು ಎದೆಗುಂದ ಬೇಕಾಗಿಯೂ ಇಲ್ಲ. ನಮ್ಮ ತಿಳಿವಳಿಕೆಗೆ ಸಮಾನವಾಗಿ ನಮ್ಮ ಶಕ್ತಿಯೂ ಬೆಳೆಯುತ್ತದೆ. ಈ ಹೊಸ ಕಾನೂನನ್ನು ಉಪಯೋಗಿಸುವ ಅವಕಾಶ ಗ್ರಾಹಕರಿಗಿದೆ.

ಎ. ಪಿ. ಕೊಡಂಚ
ಸಂಚಾಲಕರು, ಬಳಕೆದಾರರ ವೇದಿಕೆ (ರಿ.) ಉಡುಪಿ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

2-

ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ

Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ

Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ

ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್‌, ಕಿಟ್‌ಕ್ಯಾಟ್‌ ಚಾಕ್ಲೆಟ್‌ ಬೆಲೆ ಏರಿಕೆ?

Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್‌, ಕಿಟ್‌ಕ್ಯಾಟ್‌ ಚಾಕ್ಲೆಟ್‌ ಬೆಲೆ ಏರಿಕೆ?

1-digi

‘DigiLocker’; ಕ್ಲೇಮ್‌ ಮಾಡದ ಹೂಡಿಕೆಗೆ ಪರಿಹಾರ?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.