ಅವಿರೋಧ ಆಯ್ಕೆ? ಪರಿಷತ್ ಚುನಾವಣೆ: ತ್ರಿಪಕ್ಷ ಅಭ್ಯರ್ಥಿ ನಾಮಪತ್ರ
Team Udayavani, Jun 19, 2020, 6:10 AM IST
ಬೆಂಗಳೂರು: ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿಯಿಂದ ನಾಲ್ಕು, ಕಾಂಗ್ರೆಸ್‌ನಿಂದ ಎರಡು, ಜೆಡಿಎಸ್‌ನಿಂದ ಓರ್ವ ಅಭ್ಯರ್ಥಿ ಗುರುವಾರ ನಾಮಪತ್ರ ಸಲ್ಲಿಸಿದ್ದು, ಎಲ್ಲರೂ ಅವಿ ರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಬಿಜೆಪಿಯಿಂದ ಬೆಳ್ತಂಗಡಿಯ ಹಿರಿಯ ನಾಯಕ ಪ್ರತಾಪಸಿಂಹ ನಾಯಕ್, ಎಂ.ಟಿ.ಬಿ. ನಾಗರಾಜ್, ಸುನಿಲ್ ವಲ್ಯಾಪುರೆ, ಆರ್. ಶಂಕರ್, ಕಾಂಗ್ರೆಸ್‌ನಿಂದ ಬಿ.ಕೆ. ಹರಿಪ್ರಸಾದ್, ನಸೀರ್ ಅಹಮದ್ ಹಾಗೂ ಜೆಡಿಎಸ್‌ನಿಂದ ಗೋವಿಂದರಾಜು ನಾಮಪತ್ರ ಸಲ್ಲಿಸಿದರು.
ಮೊದಲಿಗೆ ಜೆಡಿಎಸ್‌ನ ಗೋವಿಂದರಾಜು ಅವರು ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರ ಸ್ವಾಮಿ, ಮಾಜಿ ಸಚಿವರಾದ ಕೆ. ಶ್ರೀನಿವಾಸ ಗೌಡ, ಬಸವರಾಜ ಹೊರಟ್ಟಿ ಅವರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಅನಂತರ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ. ಹರಿ ಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವ ಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂ ರಾವ್, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವ ರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿ ಸಿ ದರು. ಮತ್ತೂಬ್ಬ ಕಾಂಗ್ರೆಸ್ ಅಭ್ಯರ್ಥಿ ನಸೀರ್ ಅಹಮದ್ ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಸಚಿವ ಯು.ಟಿ. ಖಾದರ್, ಶಾಸಕರಾದ ಎನ್.ಎ. ಹ್ಯಾರೀಸ್, ಖನೀಜ್ ಫಾತಿಮಾ ಉಪಸ್ಥಿತರಿದ್ದರು.
ಅನಂತರ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ರಾಜ್ಯಾಧ್ಯಕ್ಷ ನಳಿನ್, ಡಿಸಿಎಂ ಗೋವಿಂದ ಕಾರಜೋಳ, ಸಚಿವರಾದ ಬೈರತಿ ಬಸವರಾಜ್, ಕೋಟ ಶ್ರೀನಿವಾಸ ಪೂಜಾರಿ, ಎಸ್.ಟಿ. ಸೋಮಶೇಖರ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಇದ್ದರು.
ಮುಖ್ಯಮಂತ್ರಿ ಗೈರು
ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಸಿಎಂ ಯಡಿಯೂರಪ್ಪ ಗೈರಾಗಿದ್ದರು. ಕಾಲು ನೋವಿನ ಕಾರಣ ವಿಶ್ರಾಂತಿಯಲ್ಲಿದ್ದರು ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.
ಜೂ. 22ಕ್ಕೆ ಅಧಿಕೃತ ಘೋಷಣೆ
ಪಕ್ಷೇತರ ಅಭ್ಯರ್ಥಿಯಾಗಿ ಯಡವನಹಳ್ಳಿ ಪಿ.ಸಿ. ಕೃಷ್ಣೇಗೌಡ ಎಂಬವರು ನಾಮಪತ್ರ ಸಲ್ಲಿ ಸಿದ್ದರಾದರೂ ಸೂಚಕರ ಸಹಿ ಇಲ್ಲ ಎನ್ನಲಾಗಿದೆ. ಶುಕ್ರವಾರ ನಾಮ ಪತ್ರಪರಿಶೀಲನೆ ನಡೆಯಲಿದ್ದು, 3 ಪಕ್ಷಗಳ ಏಳೂ ಮಂದಿ ಬಹುತೇಕ ಅವಿರೋಧ ಆಯ್ಕೆಯಾಗಬಹುದು. ನಾಮಪತ್ರ ವಾಪಸಾತಿಗೆ ಜೂ.22 ಕೊನೆಯ ದಿನಾಂಕ, ಅಂದು ಅಧಿಕೃತ ಘೋಷಣೆಯಾಗಬಹುದು ಎನ್ನಲಾಗಿದೆ.
ಬೆಂಬಲಿಗರ ಜಮಾವಣೆ
ನಾಮಪತ್ರ ಸಲ್ಲಿಕೆ ವೇಳೆ ಐವರಿಗೆ ಮಾತ್ರ ಪ್ರವೇಶವಿದ್ದ ಕಾರಣ ಅಭ್ಯರ್ಥಿಗಳ ಜತೆ ಬಂದಿದ್ದ ಬೆಂಬಲಿಗರು ವಿಧಾನಸೌಧ ಕಾರಿಡಾರ್‌ನಲ್ಲಿ ಜಮಾವಣೆಗೊಂಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣ ಅವರನ್ನು ನಿಯಂತ್ರಿಸಲು ಸ್ಪೀಕರ್ ಕಚೇರಿ ಸಿಬಂದಿ ಮತ್ತು ಪೊಲೀಸರು ಸಾಕಷ್ಟು ಶ್ರಮಿಸಬೇಕಾಯಿತು.
ಬಿ.ಕೆ. ಹರಿಪ್ರಸಾದ್, ನಸೀರ್ ಅಹಮದ್ ವಿದ್ಯಾರ್ಥಿ ನಾಯಕರಿಂದ ರಾಷ್ಟ್ರಮಟ್ಟದ ವರೆಗೆ ಬೆಳೆದವರು. ಅವರ ಹಿರಿತನ ಮತ್ತು ಮಾರ್ಗದರ್ಶನದಿಂದ ಪಕ್ಷಕ್ಕೆ ಶಕ್ತಿ ತುಂಬಲು ನಾವೆಲ್ಲ ಅವರನ್ನು ವಿಧಾನಪರಿಷತ್‌ಗೆ ಕಳುಹಿಸಲು ತೀರ್ಮಾನಿಸಿದ್ದೇವೆ.
– ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಪರಿಷತ್‌ನಲ್ಲಿ ತೆರವಾದ ಸ್ಥಾನಗಳಿಗೆ ಬಿಜೆಪಿ ನಾಲ್ಕು ಮಂದಿಗೆ ಅವಕಾಶ ಕಲ್ಪಿಸಿದೆ. ಸಿದ್ಧಾಂತದ ಮೂಲಕ ಕಾರ್ಯಕರ್ತರನ್ನು ಬೆಳೆಸಿದ ಪ್ರತಾಪ ಸಿಂಹ ನಾಯಕ್ ಮತ್ತು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲು ಕಾರಣ ವಾದವರಿಗೂ ಅವಕಾಶ ನೀಡಲಾಗಿದೆ.
-ನಳಿನ್ ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ
ಜೆಡಿಎಸ್‌ನಲ್ಲಿ ಸಾಮಾನ್ಯ ಕಾರ್ಯಕರ್ತನಿಗೆ ಅವಕಾಶ ಕೊಟ್ಟಿದ್ದೇವೆ. ಪಕ್ಷ ನಿಷ್ಠೆ, ಸಂಘಟನ ಸಾಮರ್ಥ್ಯ ನೋಡಿ ಗುರುತಿಸಲಾಗಿದೆ.
– ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Madikeri: ಹಲಸಿನ ಮರವೇರಿದ ಕಾರ್ಮಿಕನ ಮೇಲೆ ಗುಂಡು… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.