ಅಧಿಕಾರ ನಿರೀಕ್ಷೆಯಲ್ಲಿ ರಾಜಪಕ್ಸೆ ;ಶ್ರೀಲಂಕಾದಲ್ಲಿ ಚುರುಕುಗೊಂಡ ಮತ ಎಣಿಕೆ
ಗೋಟಬಯಾ ರಾಜಪಕ್ಸೆ ಕಳೆದ ನವೆಂಬರ್ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
Team Udayavani, Aug 6, 2020, 4:49 PM IST
ಕೊಲಂಬೊ: ಶ್ರೀಲಂಕಾದ ಸಂಸತ್ ಚುನಾವಣೆ ಮುಕ್ತಾಯವಾಗಿದ್ದು, ಜನಪ್ರಿಯ ರಾಜಪಕ್ಸೆ ಸಹೋದರರಿಗೆ ಅಧಿಕಾರ ಸಿಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ಈಸ್ಟರ್ ಭಾನುವಾರದಂದು ಚರ್ಚ್ ಮತ್ತು ಹೋಟೆಲ್ಗಳ ಮೇಲಿನ ಬಾಂಬ್ ಸ್ಫೋಟದ ಬಳಿಕ ದೇಶವನ್ನು ಭದ್ರಪಡಿಸುವ ಏಕೈಕ ನಾಯಕ ಎಂದು ತಮ್ಮನ್ನು ತಾವು ನಿರೂಪಿಸಿಕೊಂಡ ಗೋಟಬಯಾ ರಾಜಪಕ್ಸೆ ಕಳೆದ ನವೆಂಬರ್ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ ಅಣ್ಣ, ವರ್ಚಸ್ವಿ ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ಪ್ರಧಾನಮಂತ್ರಿಯಾಗಿ ಮರಳಲು ಸಂಸತ್ತಿನ ಬಹುಮತವನ್ನು ಕೋರಿದ್ದಾರೆ.
ಸಂಸತ್ತಿನ ಚುನಾವಣೆಯಲ್ಲಿ ಕುಟುಂಬದ ಕನಿಷ್ಠ ನಾಲ್ಕು ಸದಸ್ಯರು ಸ್ಪರ್ಧಿಸಿದಾ ಬುಧವಾರ ಸಂಜೆ 5 ಗಂಟೆಗೆ ಕೊನೆಗೊಂಡ ಮತದಾನವು ಬಹುಮಟ್ಟಿಗೆ ಶಾಂತಿಯುತವಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು 64 ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಪ್ರಾರಂಭವಾಗಿದ್ದು, ಅಂತಿಮ ಫಲಿತಾಂಶಗಳನ್ನು ಶುಕ್ರವಾರ ನಿರೀಕ್ಷಿಸಲಾಗಿದೆ.196 ಶಾಸಕರನ್ನು ಆಯ್ಕೆ ಮಾಡಲು 1.60 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದರು, ಉಳಿದವರನ್ನು ಪ್ರತಿ ಪಕ್ಷಗಳು ಅಥವಾ ಸ್ವತಂತ್ರ ಗುಂಪುಗಳು ಪಡೆದ ಮತಗಳ ಸಂಖ್ಯೆಗೆ ಅನುಗುಣವಾಗಿ ರಾಷ್ಟ್ರೀಯ ಪಟ್ಟಿಯಿಂದ ಹೆಸರಿಸಲಾಗಿದೆ. ಲಂಕಾ ಸಂಸತ್ನ ಒಟ್ಟು ಬಲ 225 ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
Sheikh Hasina, ಅದಾನಿ ನಡುವಿನ ಒಪ್ಪಂದದ ಪರಿಶೀಲನೆಗೆ ಸಮಿತಿ ರಚಿಸಿದ ಬಾಂಗ್ಲಾದೇಶ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.