ಗೆರಟೆಯಲ್ಲಿ ಕಲಾಕೃತಿ ರಚಿಸುವ ದಂಪತಿ : ಲಾಕ್ಡೌನ್ ಸಂದರ್ಭದಲ್ಲಿ ಮೂಡಿದ ಯೋಚನೆ
Team Udayavani, Apr 19, 2021, 2:07 AM IST
ಬಂಟ್ವಾಳ: ಕಳೆದ ವರ್ಷ ಲಾಕ್ಡೌನ್ ಸಂದರ್ಭ ಮನೆಯಲ್ಲೇ ಏನಾದರೊಂದು ಸ್ವಾದ್ಯೋಗ ಮಾಡ ಬೇಕೆಂಬ ಆಲೋಚನೆಯಲ್ಲಿದ್ದ ದಂಪತಿ ಇದೀಗ ಗೆರಟೆಯಲ್ಲಿ ಹಲವು ರೀತಿಯ ಕಲಾಕೃತಿಗಳನ್ನು ಮಾಡಿ ಯಶಸ್ಸನ್ನು ಸಾಧಿಸಿ ದ್ದಾರೆ. ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ ಭಾರತದ ಕಲ್ಪನೆಯಂತೆ ಈ ದಂಪತಿ ಸ್ವಾದ್ಯೋಗದಲ್ಲಿ ತೊಡಗಿಕೊಂಡಿದೆ.
ಇರಾ ಗ್ರಾಮದ ಕುಕ್ಕಾಜೆ ಕಾಪಿಕಾಡ್- ಕಲ್ಪನೆ ನಿವಾಸಿ ಸಚ್ಚೀಂದ್ರ ಮೇಸ್ತ್ರಿ ಹಾಗೂ ಜಯಲಕ್ಷ್ಮೀ ದಂಪತಿ ಗೆರಟೆಯ ಮೂಲಕ ಕಲಾಕೃತಿಗಳನ್ನು ರಚಿಸಿ ಯಶಸ್ವಿಯಾಗಿದ್ದಾರೆ. ವೃತ್ತಿಯಲ್ಲಿ ಮೇಸ್ತ್ರಿಯಾಗಿರುವ ಸಚ್ಚೀಂದ್ರ ಲಾಕ್ಡೌನ್ ವೇಳೆ ಮನೆಯಲ್ಲೇ ಕೂತಿದ್ದರು. ಜೀವನ ನಿರ್ವಹಣೆಗಾಗಿ ಯಾವುದಾದರೊಂದು ಉದ್ಯೋಗ ಅನಿವಾ ರ್ಯವಾಗಿತ್ತು. ಹೀಗಾಗಿ ಇಟ್ಟಿಗೆ ಮಾಡುವ ವೃತ್ತಿಯನ್ನು ಆರಂಭಿಸಿದರು. ಇಂತಹ ಉದ್ಯಮಗಳು ದೊಡ್ಡ ಮಟ್ಟದ ಬಂಡವಾಳದೊಂದಿಗೆ ನಡೆಯುವುದರಿಂದ ಅವರಿಗೆ ಇದನ್ನು ನಿರ್ವಹಿಸುವುದು ಸಾಧ್ಯವಾಗಲಿಲ್ಲ. ಈ ಕಾರಣದಿಂದ ಸಚ್ಚೀಂದ್ರ ಅವರ ಪತ್ನಿ ಜಯಲಕ್ಷ್ಮೀ ಯೂಟ್ಯೂಬ್ನಲ್ಲಿ ಗೆರಟೆಯ ಮೂಲಕ ಕಲಾಕೃತಿ ಮಾಡುವುದನ್ನು ನೋಡಿ ಅಭ್ಯಾಸ ಮಾಡಿಕೊಂಡರು. ಸಜೀಪಮೂಡದ ಕೊಳಕೆಯವರಾದ ಸಚ್ಚೀಂದ್ರ ಪ್ರಸ್ತುತ ಕುಕ್ಕಾಜೆ ಯಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ಪತ್ನಿ, ಪತ್ನಿಯ ತಾಯಿ, ಮತ್ತೂಬ್ಬರು ಸಂಬಂಧಿ ಸೇರಿ ನಾಲ್ಕು ಮಂದಿ ಇದ್ದಾರೆ.
ಯಂತ್ರ ಜೋಡಿಸಬೇಕಷ್ಟೆ
ಲಾಕ್ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಕಂಗಾಲಾಗಿ ಹೋಗಿದ್ದೆವು. ಹೀಗಾಗಿ ಇಂತಹ ಕಲಾಕೃತಿಗಳನ್ನು ಮಾಡುವ ಆಲೋಚನೆ ಮಾಡಿದ್ದೇವೆ. ಪ್ರಸ್ತುತ ಮೇಸ್ತ್ರಿ ಕೆಲಸದ ಜತೆಗೆ ಇದನ್ನು ನಿರ್ವಹಿಸುತ್ತೇವೆ. ಸಾಲ ಮಾಡಿ ಯಂತ್ರಗಳನ್ನು ತಂದಿದ್ದು, ಅದನ್ನು ಜೋಡಿಸಬೇಕಷ್ಟೆ. ಜತೆಗೆ ಕಲಾಕೃತಿಗಳಿಗೆ ಮಾರುಕಟ್ಟೆ ವಿಚಾರ ಮುಂದೆ ನಿರ್ಧಾರವಾಗಬೇಕಷ್ಟೆ.
-ಸಚ್ಚೀಂದ್ರ ಮೇಸ್ತ್ರಿ, ಕಲಾಕೃತಿಗಳ ರಚನೆಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.