10 ಆ್ಯಪಲ್ ಫೋನ್ ಕದ್ದ ಕೊರಿಯರ್ ಡೆಲಿವರಿ ಬಾಯ್
Team Udayavani, Apr 29, 2023, 7:51 AM IST
ನವದೆಹಲಿ: ಹಿಂದೆಲ್ಲ ಕಳ್ಳರ ಮೂಲ ಟಾರ್ಗೆಟ್ ಚಿನ್ನ! ಆದರೀಗ ಕಳ್ಳರ ಕಣ್ಣಿರೋದು ಚಿನ್ನದಂಥ ಬೆಲೆ ಇರುವ ವಸ್ತುವಿನ ಮೇಲೆ ಅದೇ ಆ್ಯಪಲ್ ಐಫೋನ್. ಅಪಾರ ಬೇಡಿಕೆ ಇರುವ ಆ್ಯಪಲ್ ಗೆಜೆಟ್‌ಗಳ ಕಳ್ಳತನ ಹೆಚ್ಚುತ್ತಿರುವ ನಡುವೆಯೇ, ಡೆಲಿವರಿ ಬಾಯ್ ಒಬ್ಬ 10 ಆ್ಯಪಲ್ ಫೋನ್‌ಗಳನ್ನು ಕದ್ದು, ನಕಲಿ ಫೋನ್‌ಗಳನ್ನಿಟ್ಟಿರುವ ಪ್ರಕರಣ ಗುರುಗ್ರಾಮದಲ್ಲಿ ವರದಿಯಾಗಿದೆ. ಮ್ಯಾಟ್ರಿಕ್ಸ್ ಫೈನಾನ್ಶಿಯಲ್ ಸಲ್ಯೂಷನ್ಸ್ ಎನ್ನುವ ಕೊರಿಯರ್ ಸಂಸ್ಥೆಯೊಂದು ಗುರುಗ್ರಾಮದಲ್ಲಿ ಅಮೆಜಾನ್‌ನ ಪಾರ್ಸೆಲ್‌ಗಳನ್ನು ಡೆಲಿವರಿ ಮಾಡುತ್ತಿದೆ.
ಮಾ.27ರಂದು ಸಂಸ್ಥೆಯ ಡೆಲಿವರಿ ಉದ್ಯೋಗಿ ಲಲಿತ್ ಎಂಬವನ ಕೈನಲ್ಲಿ 10 ಆ್ಯಪಲ್ ಐಫೋನ್ ಹಾಗೂ ಒಂದು ಇಯರ್‌ಬಡ್ಸ್‌ಗಳನ್ನು ಗ್ರಾಹಕರಿಗೆ ತಲುಪಿಸಲು ಕಳುಹಿಸಿದೆ. ಆದರೆ ಲಲಿತ್ ಐಫೋನ್‌ಗಳನ್ನು ಕದ್ದು, ಅವುಗಳ ಬದಲಿಗೆ ನಕಲಿ ಫೋನ್ ಇರಿಸಿದ್ದಾನೆ. ನಂತರ ಆತನ ಸಹೋದರ ಗ್ರಾಹಕರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲವೆಂದು ತಿಳಿಸಿ, ಪಾರ್ಸೆಲ್‌ಗಳನ್ನು ಮರಳಿಸಿದ್ದಾನೆ. ಈ ವೇಳೆ ಪ್ಯಾಕಿಂಗ್‌ನಲ್ಲಿ ಬದಲಾವಣೆ ಗಮನಿಸಿ ಸಂಸ್ಥೆಯ ಮುಖ್ಯಸ್ಥರು ಪರೀಕ್ಷಿಸಿದಾಗ ಕಳ್ಳತನವಾಗಿರುವುದು ತಿಳಿದುಬಂದಿದೆ. ಲಲಿತ್ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.