ಕೋವಿಡ್-19 ಸಾವು: ಭಾರತಕ್ಕೆ 9ನೇ ಸ್ಥಾನ; ಅಮೆರಿಕಕ್ಕೆ ಪ್ರಥಮ ಸ್ಥಾನ
Team Udayavani, Jun 15, 2020, 6:30 AM IST
ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಸೋಂಕು ಮತ್ತು ಸಾವಿನ ಸಂಖ್ಯೆ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿದೆ. ಭಾರತಕ್ಕೆ ಈಗ ಜಗತ್ತಿನಲ್ಲೇ ಅತೀ ಹೆಚ್ಚು ಸಾವುಗಳನ್ನು ಕಂಡ 9ನೇ ರಾಷ್ಟ್ರ ಎಂಬ ಹಣೆಪಟ್ಟಿ ದೊರೆತಿದೆ.
ಕಳೆದ ಒಂದು ವಾರದಿಂದ ಪ್ರತೀ ದಿನ 10 ಸಾವಿರದಷ್ಟು ಸೋಂಕು ಪ್ರಕರಣಗಳಿಗೆ ಸಾಕ್ಷಿಯಾಗುವ ಮೂಲಕ ದೇಶವು ಜಾಗತಿಕ ಹಾಟ್‌ಸ್ಪಾಟ್ ದೇಶಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿತ್ತು. ಅದರ ಬೆನ್ನಲ್ಲೇ ಸಾವಿನ ಸಂಖ್ಯೆಯಲ್ಲೂ ಭಾರತ ಇತರ ದೇಶಗಳನ್ನು ಹಿಂದಿಕ್ಕುತ್ತಾ ಸಾಗುತ್ತಿರುವುದು ಆತಂಕ ಮೂಡಿಸಿದೆ.
ಸೋಂಕು ಮತ್ತು ಸಾವಿನ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಈವರೆಗೆ 1,17,587 ಮಂದಿ ಕೋವಿಡ್-19 ಕ್ಕೆ ಬಲಿಯಾಗಿ ದ್ದಾರೆ. 42,802 ಸಾವುಗಳನ್ನು ಕಂಡ ಬ್ರೆಜಿಲ್ 2ನೇ ಸ್ಥಾನದಲ್ಲಿದೆ. ಯು.ಕೆ.ಯಲ್ಲಿ 41,698 ಮಂದಿ ಮೃತಪಟ್ಟಿದ್ದಾರೆ. ಬಳಿಕದ ಸ್ಥಾನಗಳಲ್ಲಿ ಇಟಲಿ (34,301), ಫ್ರಾನ್ಸ್ (29,398), ಸ್ಪೇನ್ (27,136), ಮೆಕ್ಸಿಕೋ (16,872) ಮತ್ತು ಬೆಲ್ಜಿಯಂ (9,655) ಇವೆ. 9,365 ಸಾವುಗಳನ್ನು ಕಂಡಿರುವ ಮೂಲಕ ಭಾರತ 9ನೇ ಸ್ಥಾನದಲ್ಲಿದೆ.
ಶನಿವಾರ ಬೆಳಗ್ಗೆ 8ರಿಂದ ರವಿವಾರ ಬೆಳಗ್ಗೆ 8ರ ವರೆಗಿನ ಅವಧಿಯಲ್ಲಿ ದೇಶಾದ್ಯಂತ 311 ಮಂದಿ ಮೃತಪಟ್ಟಿದ್ದರೆ, 11,929 ಮಂದಿಗೆ ಸೋಂಕು ದೃಢಪಟ್ಟಿದೆ. ಸಮಾಧಾನದ ಸಂಗತಿಯೆಂದರೆ, ಗುಣಮುಖ ಪ್ರಮಾಣ ಈಗ ಶೇ.50.60 ಆಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.