ಮದುಮಗನೊಂದಿಗಿದ್ದ 21 ಜನರಿಗೆ ಕೋವಿಡ್-19 ಸೋಂಕು
Team Udayavani, Jul 1, 2020, 11:51 PM IST
ಭಟ್ಕಳ: ಬೆಂಗಳೂರಿನಿಂದ ಭಟ್ಕಳಕ್ಕೆ ಬಂದು ಮದುವೆಯಾಗಿ ಅದೇ ದಿನ ಮಂಗಳೂರಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವಾಗ ಮೃತ ಪಟ್ಟಿದ್ದ ವ್ಯಕ್ತಿಗೆ ಕೋವಿಡ್-19 ದೃಢವಾಗಿದ್ದು ಈತನ ಸಂಪರ್ಕಕ್ಕೆ ಬಂದಿದ್ದ ಹಲವರಿಗೆ ಕೋವಿಡ್-19 ಸೋಂಕು ತಗುಲಿದೆ ಎಂದು ಸಹಾಯಕ ಆಯುಕ್ತ ಭರತ್ ಎಸ್. ಹೇಳಿದರು.
ಅವರು ಪತ್ರಕರ್ತರೊಂದಿಗೆ ಮಾತನಾಡಿ, ಆತನು ಬೆಂಗಳೂರಿನಿಂದ ಜೂ.22ಕ್ಕೆ ಬಂದಿದ್ದು 25ರಂದು ಭಟ್ಕಳದಲ್ಲಿ ಮದುವೆ ಇತ್ತು. ಆದರೆ ಅಂದೇ ಆತನಿಗೆ ಜ್ವರ ಉಲ್ಬಣಗೊಂಡ ಕಾರಣ ಆತ ಮಂಗಳೂರಿಗೆ ತೆರಳಿ ಚಿಕಿತ್ಸೆಗೆ ದಾಖಲಾಗಿದ್ದಾನೆ. ಆತನ ಗಂಟಲು ದ್ರವ ಪರೀಕ್ಷೆಯಲ್ಲಿ ಆತನಿಗೆ ಕೋರೊನಾ ಇರುವುದು ದೃಢವಾಗಿರುವ ಕಾರಣ ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದರು.
ಬೆಂಗಳೂರಿನಿಂದ ಬಂದಿದ್ದ ಆತನಿಂದ ಈಗಾಗಲೇ 21 ಜನಕ್ಕೆ ಕೋವಿಡ್-19 ಇರುವುದು ದೃಢವಾಗಿದ್ದು ಓರ್ವ ಧಾರ್ಮಿಕ ಮುಖಂಡರಿಗೂ ಕೂಡಾ ಈತನ ಸಂಪರ್ಕಕ್ಕೆ ಬಂದಿದ್ದರಿಂದಲೇ ಕೊರೊನಾ ಬಂದಿದೆ ಎಂದ ಅವರು, ಕೋವಿಡ್-19 ಸೋಂಕಿತರಿಗಾಗಿ ಸೊನಾರಕೇರಿಯಲ್ಲಿ ಒಂದು ಕೋವಿಡ್-19 ಆಸ್ಪತ್ರೆಯನ್ನು ತಾತ್ಕಾಲಿಕವಾಗಿ ಸ್ಥಾಪಿಸಲಾಗಿದ್ದು ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಭಟ್ಕಳದಲ್ಲಿ ಒಟ್ಟೂ 100 ಹಾಸಿಗೆಗಳ ಕೋವಿಡ್-19 ಆಸ್ಪತ್ರೆ ಮಾಡಲು ಕಟ್ಟಡದ ಅಗತ್ಯತೆ ಇದ್ದು ನಗರಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶದಲ್ಲಿ ಮಾಡಬೇಕಾಗಿದೆ ಎಂದರು.
ಜೂ.25ರಂದು ಆತನ ಮದುವೆಗೆ ಹೋದವರು ಸ್ವಯಂ ಆಗಿ ಕೋವಿಡ್-19 ಟೆಸ್ಟ್ ಮಾಡಿಸಿಕೊಳ್ಳಲು ಬರಬೇಕು ಎಂದು ಕರೆ ನೀಡಿದರು.
ಮದುವೆಗೆ ಎಷ್ಟು ಜನ ಬಂದಿದ್ದರು ಎನ್ನುವ ಪ್ರಶ್ನೆಗೆ ಉತ್ತರಿಸಿದ ಎಎಸ್‌ಪಿ ನಿಖೀಲ್, 50 ಜನಕ್ಕೆ ಪರವಾನಿಗೆ ಕೊಟ್ಟಿದ್ದೆವು. ಆದರೆ 150 ರಿಂದ 175 ಜನ ಬಂದಿರುವ ಸಾಧ್ಯತೆ ಇದೆ. ಈ ಕುರಿತು ಈಗಾಗಲೇ ನೋಡಲ್ ಅಧಿಕಾರಿಯಿಂದ ವರದಿ ಬಂದ ನಂತರ ತಿಳಿಯಲಿದೆ ಎಂದರು.
ಭಟ್ಕಳದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಐದು ಕಡೆಗಳಲ್ಲಿ ಫಿವರ್ ಕ್ಲಿನಿಕ್ ಸ್ಥಾಪಿಸುತ್ತಿದ್ದು ಜನರು ಸ್ವಯಂ ಆಗಿ ಬಂದು ಜ್ವರ ತಪಾಸಣೆ ಮಾಡಿಸಿಕೊಳ್ಳಬೇಕು. 60 ಕ್ಕಿಂತ ಹೆಚ್ಚು ವಯಸ್ಸಾದವರು ಕಡ್ಡಾಯವಾಗಿ ಎರಡು ದಿನಕ್ಕೊಮ್ಮೆಯಾದರೂ ಪರೀಕ್ಷಿಸಿಕೊಳ್ಳಬೇಕು. ಈಗಾಗಲೇ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸರ್ವೇ ಮಾಡಿದಂತೆ ನಾವು ಎಲ್ಲರ ವಿವರಗಳನ್ನು ಹೊಂದಿದ್ದು ಅದರಂತೆ ಕೋವಿಡ್ ಕ್ಲಿನಿಕ್‌ಗೆ ಅವರನ್ನು ಕರೆಸಲಾಗುವುದು ಎಂದರು. ತಹಶೀಲ್ದಾರ್ ಎಸ್. ರವಿಚಂದ್ರ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Karnataka BJP; ಬಣ ಸಂಘರ್ಷ ತೀವ್ರ…;ಶಿಸ್ತುಕ್ರಮಕ್ಕೆ ವಿಜಯೇಂದ್ರ ಪಟ್ಟು?
BJP: ಇಂದು ಅಶೋಕ್ ನೇತೃತ್ವದ ಸಭೆ; ಡಿ. 7ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ
ಮಕ್ಕಳ ಶಿಕ್ಷಿಸಲು ಅವಕಾಶ ಕೊಡಿ: ಸಿಎಂ ಸಿದ್ದರಾಮಯ್ಯಗೆ ಪತ್ರ
Karnataka: ವಕ್ಫ್: ಡಿ. 4ರಿಂದ ಬಿಜೆಪಿ ಅಧಿಕೃತ ಹೋರಾಟ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಾಸರಗೋಡು: ಬೈಕ್ ಢಿಕ್ಕಿ; ವಿದ್ಯಾರ್ಥಿಗೆ ಗಂಭೀರ ಗಾಯ
Cardamom: ಜಾಗತಿಕ ಉತ್ಪಾದನೆ ಕುಸಿತ : ಏಲಕ್ಕಿಗೂ ಶುಕ್ರದೆಸೆ: ಕೆ.ಜಿ.ಗೆ 3,000 ರೂ.!
Adani Group: ಸಾಲ ಅಗತ್ಯವಿಲ್ಲ: ಅದಾನಿ “ಆರ್ಥಿಕ ಶಕ್ತಿ’ ಪ್ರದರ್ಶನ
Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.