ಬಾಂಗ್ಲಾದ ಮೂವರು ಕ್ರಿಕೆಟಿಗರಿಗೆ ಕೋವಿಡ್-19 ಪಾಸಿಟಿವ್
Team Udayavani, Jun 21, 2020, 5:55 AM IST
ಬಾಂಗ್ಲಾದೇಶದ ಕ್ರಿಕೆಟಿಗರು ಕೋವಿಡ್ ಭೀತಿಗೆ ಸಿಲುಕಿದ್ದಾರೆ. ಮಾಜಿ ನಾಯಕ ಮಶ್ರಫೆ ಮೊರ್ತಜಾ, ಸ್ಪಿನ್ನರ್ ನಜ್ಮುಲ್ ಇಸ್ಲಾಮ್ ಮತ್ತು ಮಾಜಿ ಆರಂಭಕಾರ ನಫೀಸ್ ಇಕ್ಬಾಲ್ಅವರಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿದೆ.
ಮೊದಲು ಸ್ವತಃ ನಫೀಸ್ ಇಕ್ಬಾಲ್ ಅವರೇ ಇದನ್ನು ತಿಳಿಸಿದರು. ಸದ್ಯ ಅವರು ಚಿತ್ತಗಾಂಗ್ ನಿವಾಸದಲ್ಲಿ ಐಸೊಲೇಶನ್ನಲ್ಲಿದ್ದಾರೆ ಎಂದು “ದ ಡೈಲಿ ಸ್ಟಾರ್’ ವರದಿ ಮಾಡಿದೆ.
ಬಳಿಕ ಮಶ್ರಫೆ ಮೊರ್ತಜಾ ಅವರ ಫಲಿತಾಂಶವೂ ಪಾಸಿಟಿವ್ ಬಂದಿ ರುವುದು ದೃಢಪಟ್ಟಿತು. ಅವರೀಗ ಢಾಕಾದಲ್ಲಿರುವ ನಿವಾಸದಲ್ಲಿ ಸೆಲ್ಫ್ -ಐಸೊಲೇಶನ್ನಲ್ಲಿದ್ದಾರೆ ಎಂದು ಕಿರಿಯ ಸಹೋದರ ಮೊರ್ಸಲಿನ್ ಬಿನ್ ಮೊರ್ತಜಾ ತಿಳಿಸಿದರು.
“ಕಳೆದೆರಡು ದಿನಗಳಿಂದ ಅಣ್ಣನ ಆರೋಗ್ಯ ಸರಿ ಇರಲಿಲ್ಲ. ಕೋವಿಡ್ ಟೆಸ್ಟ್ಗೆ ಒಳಗಾದಾಗ ಪಾಸಿಟಿವ್ ಇರುವುದು ಕಂಡುಬಂತು’ ಎಂಬು ದಾಗಿ ಮೊರ್ಸಲಿನ್ ಹೇಳಿದರು.
ತಮಿಮ್ ಇಕ್ಬಾಲ್ ಸೋದರ
ಬಲಗೈ ಆರಂಭಿಕ ಆಟಗಾರನಾಗಿ ರುವ ನಫೀಸ್ ಇಕ್ಬಾಲ್ 2003ರಲ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರವೇ ಶಿಸಿದ್ದರು. ನಫೀಸ್ ಬಾಂಗ್ಲಾದ ಸ್ಟಾರ್ ಆರಂಭಕಾರ ತಮಿಮ್ ಇಕ್ಬಾಲ್ ಅವರ ಸಹೋದರ.
ಕಳೆದ ವಾರ ಬಾಂಗ್ಲಾದೇಶ ತಂಡದ ಡೆವಲಪ್ಮೆಂಟ್ ಕೋಚ್ ಹಾಗೂ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗನೂ ಆಗಿರುವ ಆಶಿಕ್ ಉರ್ ರೆಹಮಾನ್ ಅವರಲ್ಲೂ ಕೋವಿಡ್ ಪಾಸಿಟಿವ್ ಕಂಡುಬಂದಿತ್ತು. ಈಗ ಇವರೆಲ್ಲ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಾಂಗ್ಲಾ ಮಂಡಳಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.