ಪಾಕಿಸ್ಥಾನ ಕ್ರಿಕೆಟ್‌ನಲ್ಲಿ ಕೋವಿಡ್ ನಾಟಕ!
ಗೊಂದಲಕ್ಕೆ ಸಿಲುಕಿದ ಹಫೀಜ್ ವರದಿ; ಸ್ವಯಂ ಪರೀಕ್ಷೆಗೂ ಮುನ್ನ ಪಿಸಿಬಿಗೆ ತಿಳಿಸದ ಆರೋಪ
Team Udayavani, Jun 28, 2020, 5:45 AM IST
ಕರಾಚಿ: ಪಾಕಿಸ್ಥಾನ ಕ್ರಿಕೆಟ್‌ನಲ್ಲಿ “ಕೋವಿಡ್ ನಾಟಕ’ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ಇಂಗ್ಲೆಂಡ್ ಪ್ರವಾಸಕ್ಕೆ ಸಜ್ಜಾದ 10 ಮಂದಿ ಕ್ರಿಕೆಟಿಗರಿಗೆ ಕೋವಿಡ್-19 ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಇವರಲ್ಲಿ ಆಲ್‌ರೌಂಡರ್ ಮೊಹಮ್ಮದ್ ಹಫೀಜ್ ಕೂಡ ಸೇರಿದ್ದರು.
ಬಳಿಕ ಮೊಹಮ್ಮದ್ ಹಫೀಜ್ ಸ್ವಯಂ ಪರೀಕ್ಷೆ ಮಾಡಿಕೊಂಡಾಗ ನೆಗೆಟಿವ್ ಫಲಿತಾಂಶ ಕಂಡುಬಂದಿತ್ತು. ಇದನ್ನು ಅವರು ಟ್ವೀಟ್ ಮಾಡಿದಾಗ ಪಿಸಿಬಿ ಗೊಂದಲಕ್ಕೆ ಸಿಲುಕಿತು. ಇದೀಗ ಪಿಸಿಬಿ ಮತ್ತೊಮ್ಮೆ ಹಫೀಜ್ ಅವರನ್ನು ಪರೀಕ್ಷೆಗೆ ಗುರಿಪಡಿಸಿದೆ. ಇಲ್ಲಿನ “ಶೌಕತ್ ಖಾನುಮ್ ಮೆಮೋರಿಯಲ್ ಹಾಸ್ಪಿಟಲ್’ನಲ್ಲಿ ಪರೀಕ್ಷಿಸಿದಾಗ ಮತ್ತೆ ಪಾಸಿಟಿವ್ ಬಂದಿದೆ ಎಂದು ವರದಿಯಾಗಿತ್ತು. ಆದರೆ ಶನಿವಾರ ಸಂಜೆ ಪ್ರಕಟನೆ ನೀಡಿದ ಪಿಸಿಬಿ, ಹಫೀಜ್ ಸೇರಿದಂತೆ 6 ಮಂದಿಯ ದ್ವಿತೀಯ ಟೆಸ್ಟ್ ಫಲಿತಾಂಶ ನೆಗೆಟಿವ್ ಬಂದಿದೆ ಎಂಬುದಾಗಿ ಹೇಳಿದೆ.
ಪಿಸಿಬಿಯ ದ್ವಿತೀಯ ಕೋವಿಡ್-19 ಪರೀಕ್ಷೆಯಲ್ಲಿ ಫಕಾರ್ ಜಮಾನ್, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ರಿಜ್ವಾನ್, ಶಾದಾಬ್ ಖಾನ್ ಮತ್ತು ವಹಾಬ್ ರಿಯಾಜ್ ಅವರಿಗೆ ನೆಗೆಟಿವ್ ಬಂದಿದೆ. ಹೈದರ್ ಅಲಿ, ಹ್ಯಾರಿಸ್ ರವೂಫ್, ಕಾಶಿಫ್ ಭಟ್ಟಿ ಮತ್ತು ಇಮ್ರಾನ್ ಖಾನ್ ಅವರ ಫಲಿತಾಂಶ ಪುನಃ ಪಾಸಿಟಿವ್ ಬಂದಿದೆ.
ದ್ವಿತೀಯ ಟೆಸ್ಟ್ ವೇಳೆ ನೆಗೆಟಿವ್ ಕಂಡುಬಂದ 6 ಮಂದಿ ಕ್ರಿಕೆಟಿಗರನ್ನು ಮುಂದಿನ ವಾರ 3ನೇ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಪಿಸಿಬಿ ತಿಳಿಸಿದೆ. ಇವರ ಫಲಿತಾಂಶ ಮತ್ತೆ ನೆಗೆಟಿವ್ ಬಂದರೆ ಈ ಕ್ರಿಕೆಟಿಗರನ್ನು ಇಂಗ್ಲೆಂಡಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದಿದೆ.
ಹಫೀಜ್ ವಿರುದ್ಧ ಶಿಸ್ತುಕ್ರಮ?
ಮೊಹಮ್ಮದ್ ಹಫೀಜ್ ಮತ್ತು ವಹಾಬ್ ರಿಯಾಜ್ ತಾವೇ ಸ್ವತಃ ಖಾಸಗಿ ಕೋವಿಡ್ ಟೆಸ್ಟ್ ಮಾಡಿಕೊಂಡಿದ್ದರು. ಆಗ ಇದರ ಫಲಿತಾಂಶ ನೆಗೆಟಿವ್ ಬಂದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಸಿಬಿ ಹಫೀಜ್ ವಿರುದ್ಧ ಶಿಸ್ತು ಕ್ರಮ ತೆಗೆದು ಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿತ್ತು. ಇಂಥ ನಿರ್ಧಾರಕ್ಕೆ ಬರುವ ಮುನ್ನ, ಫಲಿತಾಂಶವನ್ನು ಪ್ರಕಟಿಸುವ ಮೊದಲು ಅವರು ಪಿಸಿಬಿ ಅನುಮತಿ ಪಡೆ ಯಬೇಕಿತ್ತು. ಅವರು ಕೋವಿಡ್-19 ಪರೀಕ್ಷಾ ನಿಯಮವನ್ನು ಸಂಪೂರ್ಣವಾಗಿ ಉಲ್ಲಂ ಸಿದ್ದಾರೆ ಎಂದು ಸಿಇಒ ವಾಸಿಂ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದರು.
“ನಾನು ಈಗಾಗಲೇ ಹಫೀಜ್ ಅವ ರೊಂದಿಗೆ ಮಾತಾಡಿದ್ದೇನೆ. ಅವರು ವೈಯಕ್ತಿಕವಾಗಿ ಪರೀಕ್ಷೆ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ ಇದನ್ನು ಮುಂಚಿತವಾಗಿ ನಮಗೆ ತಿಳಿಸಬೇಕಿತ್ತು. ಅವರೀಗ ಕ್ರಿಕೆಟ್ ಮಂಡಳಿಯನ್ನು ಸಮಸ್ಯೆಗೆ ತಳ್ಳಿದ್ದಾರೆ’ ಎಂದರು.
ಪಾಕ್ ತಂಡದಿಂದ 10 ಮಂದಿ ಔಟ್!
ಇಂಗ್ಲೆಂಡ್ ಪ್ರವಾಸಕ್ಕಾಗಿ ಸಜ್ಜಾದ ಪಾಕಿಸ್ಥಾನ ತಂಡದಿಂದ ಎಲ್ಲ 10 ಮಂದಿ ಕೋವಿಡ್-19 ಸೋಂಕಿತರನ್ನು ಕೈಬಿಡಲಾಗಿದೆ. ಪಿಸಿಬಿ ಶನಿವಾರ ಈ ನಿರ್ಧಾರ ತೆಗೆದುಕೊಂಡಿತು. 20 ಕ್ರಿಕೆಟಿಗರು ಮತ್ತು 11 ಮಂದಿ ಸಹಾಯಕ ಸಿಬಂದಿ ರವಿವಾರ ಲಂಡನ್ ವಿಮಾನ ಏರಲಿದ್ದಾರೆ.
ಮ್ಯಾಂಚೆಸ್ಟರ್‌ಗೆ ಬಂದಿಳಿದ ಬಳಿಕ ಪಾಕ್ ಕ್ರಿಕೆಟಿಗರು ವೂರ್ಸೆಸ್ಟರ್‌ಶೈರ್‌ಗೆ ತೆರಳುವರು. ಇಲ್ಲಿ ಇಸಿಬಿಯಿಂದಲೂ ಕೋವಿಡ್ ಪರೀಕ್ಷೆ ಇದೆ. ಬಳಿಕ 14 ದಿನಗಳ ಐಸೊಲೇಶನ್‌ಗೆ ಒಳಗಾಗಲಿದ್ದಾರೆ. ಅನಂತರವೇ ಅಭ್ಯಾಸ ಆರಂಭಿಸಲಾಗುವುದು. ಜು. 13ರಂದು ತಂಡ ಡರ್ಬಿಶೈರ್‌ಗೆ ತೆರಳಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.