ಕೋವಿಡ್ ಸಂಕಷ್ಟ : ಜಗತ್ತಿನ 10 ಕೋಟಿ ಜನರಿಗೆ ಬಡತನದ ಭೀತಿ
Team Udayavani, Aug 22, 2020, 11:55 AM IST
ಮಣಿಪಾಲ: ಕೋವಿಡ್ ಮಹಾಮಾರಿಯಿಂದ ಉದ್ಭವಿಸಿರುವ ತುರ್ತು ಪರಿಸ್ಥಿತಿಯಲ್ಲಿ ಪ್ರಪಂಚದಾದ್ಯಂತ 10 ಕೋಟಿಗೂ ಅಧಿಕ ಜನರು ಬಡತನದಲ್ಲಿ ಕಾಲ ಕಳೆಯುವಂತಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಕೋವಿಡ್ 19 ಮಹಾಮಾರಿಯಿಂದ ಸುಮಾರು 6 ಕೋಟಿಗೂ ಹೆಚ್ಚು ಜನರು ತೀವ್ರ ಸಂಕಷ್ಟ ಅನುಭವಿಸಲಿದ್ದಾರೆ. ಇವರು ಬಡವರಾಗುತ್ತಾರೆ ಎಂದು ವಿಶ್ವ ಬ್ಯಾಂಕ್ ಈ ಹಿಂದೆ ಅಂದಾಜಿಸಿತ್ತು.
ಆದರೆ ಇದೀಗ ಬದಲಾದ ಕಾಲಘಟ್ಟದಲ್ಲಿ ವಿಶ್ವ ಬ್ಯಾಂಕ್ ತನ್ನ ಈ ಸಂಖ್ಯೆಯನ್ನು ಪರಿಷ್ಕರಿಸಿದೆ. ನಿರೀಕ್ಷೆಯಂತೆ ಕೋವಿಡ್ ತನ್ನ ಹತೋಟಿಗೆ ಬರದೇ ಇರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ತನ್ನ ವರದಿಯನ್ನು ಪರಿಷ್ಕರಿಸಿದೆ. 10 ಕೋಟಿಗಿಂತ ಅಧಿಕ ಜನರು ಬಡತನದಲ್ಲಿ ಕಾಲ ಕಳೆಯುವಂತಾಗಿದೆ ಎಂದು ಹೇಳಿದೆ. ಸಾಂಕ್ರಾಮಿಕ ರೋಗವು ದೀರ್ಘಕಾಲದ ವರೆಗೆ ಮುಂದುವರಿದರೆ, ಈ ಅಂಕಿ-ಅಂಶಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಸಿದೆ.
ಜಗತ್ತಿನ ಶ್ರೀಮಂತ ರಾಷ್ಟ್ರಗಳು ವಿಶ್ವದ ಬಡ ರಾಷ್ಟ್ರಗಳ ನೆರವಿಗೆ ಬರುವ ಆವಶ್ಯಕತೆ ಇದೆ. ಆಗ ಮಾತ್ರ ಇಷ್ಟೊಂದು ದೊಡ್ಡ ಜನಸಂಖ್ಯೆಯನ್ನು ಇದರ ಪ್ರಭಾವದಿಂದ ಪಾರುಮಾದಬಹುದು. ಆದರೆ ಇದಕ್ಕಾಗಿ ಶ್ರೀಮಂತ ರಾಷ್ಟ್ರಗಳು ಬಡ ರಾಷ್ಟ್ರಗಳ ಮೇಲೆ ಶೋಷಣೆ ಮಾಡುವ ಸಾಧ್ಯತೆಯ ಆತಂಕವೂ ಇದೆ. ವಿಶ್ವದ ಸುಮಾರು 20ಕ್ಕೂ ಅಧಿಕ ಶ್ರೀಮಂತ ರಾಷ್ಟ್ರಗಳು ಸಾಲಪಡೆದ ದೇಶಗಳಿಂದ ಹಣ ವಸೂಲಿಯನ್ನು ಪ್ರಸ್ತುತ ನಿಲ್ಲಿಸಿವೆ. ಬದಲಾಗಿ ಆ ದೇಶಗಳಿಗೆ ಸಹಾಯ ಕೂಡ ಮಾಡುತ್ತಿವೆ. ಆದರೆ ಈ ನೆರವು ಸಾಕಾಗುವುದಿಲ್ಲ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ವಿಶ್ವ ಬ್ಯಾಂಕ್ 2021ರ ವರೆಗೆ ಸುಮಾರು 100 ಬಡರಾಷ್ಟ್ರಗಳಿಗೆ ಸುಮಾರು 1.60 ಬಿಲಿಯನ್ ಡಾಲರ್ ನೆರವು ಘೋಷಿಸಿದೆ.
ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆ 3ನೇ ಹಂತದ ಪ್ರಯೋಗ
ವಾಷಿಂಗ್ಟನ್: ಕೋವಿಡ್ ವೈರಸ್ ಸೋಂಕಿನ ವಿರುದ್ಧ ಜಾನ್ಸನ್ ಆಂಡ್ ಜಾನ್ಸನ್ ಅಭಿವೃದ್ಧಿಪಡಿಸಿರುವ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಸಿದ್ಧತೆ ನಡೆದಿದೆ. ಸುಮಾರು 60,000 ಸ್ವಯಂಸೇವಕರು ಪ್ರಯೋಗದಲ್ಲಿ ಪಾಲ್ಗೊಳ್ಳಲಿ¨ªಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ಹೇಳಿದೆ. ಅಮೆರಿಕ, ಬ್ರೆಜಿಲ್, ಮೆಕ್ಸಿಕೊ ಸೇರಿದಂತೆ 180 ಕಡೆಗಳಲ್ಲಿ ಪ್ರಯೋಗ ನಡೆಯಲಿದ್ದು, ಸೆಪ್ಟೆಂಬರ್‌ನಲ್ಲಿ ಪ್ರಯೋಗ ಆರಂಭಗೊಳ್ಳುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.