ಐಐಟಿಯನ್ನರ ಕೋಟಿ ಪ್ಯಾಕೇಜ್ ಕನಸಿಗೆ ಕೋವಿಡ್ “ಕನ್ನ’
Team Udayavani, Nov 28, 2020, 6:30 AM IST
ಮುಂಬಯಿ: ಕೊರೊನಾ ಆರ್ಥಿಕ ಬಿಕ್ಕಟ್ಟು, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಪ್ರತಿಭೆಗಳ ಕ್ಯಾಂಪಸ್ ಸೆಲೆಕ್ಷನ್ ಕನಸುಗಳನ್ನು ಭಗ್ನಗೊಳಿಸಿದೆ. ಇಷ್ಟು ವರ್ಷ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಅಭ್ಯರ್ಥಿಗಳು ಅಮೆರಿದ ದೈತ್ಯ ಕಂಪೆನಿಗಳಿಂದ ಕೋಟಿ ಪ್ಲಸ್ ಪ್ಯಾಕೇಜ್ ಪಡೆಯುತ್ತಿದ್ದರು. ಈ ಬಾರಿ ಯುಎಸ್ ಕಂಪೆನಿಗಳು ಐಐಟಿಯತ್ತ ಮುಖಮಾಡದೇ ನಿರಾಶೆ ಮೂಡಿಸಿವೆ.
ಕಳೆದವರ್ಷ ಐಐಟಿ ಪ್ರತಿಭಾನ್ವಿತರಿಗೆ ಕೋಟಿ ರೂ. ಪ್ಯಾಕೇಜ್ ನೀಡಿ ನೇಮಿಸಿಕೊಂಡಿದ್ದ ಅಮೆರಿಕದ ಮೈಕ್ರೋ ಸಾಫ್ಟ್, ಊಬರ್ ಮತ್ತು ಸೇಲ್ಸ್ಫೋರ್ಸ್ಗಳು ಕೊರೊನಾ ಆರ್ಥಿಕ ಹಿಂಜರಿತದ ನೆಪವೊಡ್ಡಿ, ಇನ್ನೂ ಐಐಟಿ ಕ್ಯಾಂಪಸ್ಗೆ ಆಗಮಿಸಿಲ್ಲ.
ದೇಶೀ ಸಂಸ್ಥೆಗಳಿಗಷ್ಟೇ ಬೇಡಿಕೆ: ಭಾರತದ ಹಳೇ ಐಐಟಿಗಳಾದ ಖರ ಗುºರ, ಕಾನ್ಪುರ, ರೂಕೀ, ಮದ್ರಾಸ್, ಬಾಂಬೆ, ಬಿಎಚ್ಯು- ಕ್ಯಾಂಪಸ್ಗಳಿಗೆ ಅಮೆರಿಕ ಕಂಪೆನಿಗಳು ಈ ಬಾರಿ ಕಾಲಿಟ್ಟಿಲ್ಲ. ದೇಶೀ ಸಂಸ್ಥೆಗಳಿಂದಷ್ಟೇ ಐಐಟಿ ಪ್ರತಿಭೆಗಳಿಗೆ ಬೇಡಿಕೆ ಹುಟ್ಟಿದೆ. “ಹಲವು ಐಐಟಿ ಪ್ರತಿಭೆಗಳು ದೇಶೀ ಸಂಸ್ಥೆಗಳ ಮೂಲಕ ಕೆಲವುಕಾಲ ತರಬೇತಿ ಪಡೆದು, ಕೊರೊನಾ ನಿಯಂತ್ರಣಕ್ಕೆ ಬಂದ ಮೇಲೆ ಅಮೇರಿಕದ ದೈತ್ಯ ಸಂಸ್ಥೆಗಳ ಆಫರ್ ಪಡೆಯುವ ಆಲೋಚನೆಯಲ್ಲಿದ್ದಾರೆ’ ಎಂದು ತಿಳಿದುಬಂದಿದೆ.
ಕ್ಯಾಲಿಫೋರ್ನಿಯಾ ಮೂಲದ ಐಟಿ ಸಂಸ್ಥೆ ಕೊಹೆಸಿಟಿ ಮಾತ್ರವೇ ಅಮೆರಿಕದಲ್ಲಿ ಉದ್ಯೋಗ ನೀಡಲು ಮುಂದಾ ಗಿದ್ದು, ಭಾರತದ ಅತ್ಯುನ್ನತ ಐಐಟಿಗಳಲ್ಲಿ ಮುಂದಿನ ಮಂಗಳವಾರದಿಂದ ಅಂತಿಮ ಹಂತದ ಕ್ಯಾಂಪಸ್ ಸೆಲೆಕ್ಷನ್ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.