ಕೋವಿಡ್ ಭೀತಿ: ಮಲ್ಪೆ ಬೀಚ್, ಸೀವಾಕ್, ಐಲ್ಯಾಂಡ್‌ನಲ್ಲಿ ಪ್ರವಾಸಿಗರ ಸಂಖ್ಯೆ ಇಳಿಮುಖ
Team Udayavani, Apr 11, 2021, 5:53 PM IST
ಮಲ್ಪೆ: ಎಪ್ರಿಲ್, ಮೇ ತಿಂಗಳಲ್ಲಿ ಪ್ರವಾಸಿಗರ ದಂಡೇ ಹರಿದು ಬರುವ ಪ್ರವಾಸಿ ತಾಣಗಳಲ್ಲಿ ಇದೀಗ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. ಕಳೆದ 20 ದಿನಗಳಿಂದ ಮಲ್ಪೆ ಬೀಚ್ ಮತ್ತು ಸೈಂಟ್‌ಮೇರಿ ದ್ವೀಪಗಳಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಕೂಡ ಕಡಿಮೆಯಾಗಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಬಂದು ವಕ್ಕರಿಸಿದ ಮಹಾಮಾರಿ ಕೊರೊನಾದಿಂದಾಗಿ ಇಲ್ಲಿನ ಬೀಚ್ ಸಂಪೂರ್ಣ ಸ್ತಬ್ದವಾಗಿತ್ತು. ಇದೀಗ ಎರಡನೇಯ ಹಂತದ ಕೊರೊನಾ ಸೋಂಕು ಹರಡುತ್ತಿದೆ ಎಂಬ ಸುದ್ದಿ ಮಾದ್ಯಮಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಬರಲಾರಂಭಿಸುತ್ತಿದ್ದಂತೆ ಭಯ ಹುಟ್ಟಿಕೊಂಡಿದ್ದು, ವಿಪರೀತ ಸೆಕೆ ಇದ್ದರೂ ಜನರು ಹೊರಬರಲು ಹಿಂದೇಟು ಹಾಕುತ್ತಿದ್ದಾರೆನ್ನಲಾಗಿದೆ. ಕಳೆದ ಮೂರು ವಾರಗಳಿಂದ ಮಲ್ಪೆ ಬೀಚ್‌ಗೆ ಬರುವ ಪ್ರವಾಸಿಗರ ಸಂಖ್ಯೆ ಶೇ. 75ರಷ್ಟು ಕಡಿಮೆಯಾಗಿದ್ದು ಸ್ಥಳೀಯರಷ್ಟೆ ಬರುತ್ತಿದ್ದಾರೆ. ಇತ್ತ ಸೀವಾಕ್ ವೇ, ಉದ್ಯಾವನ, ಸೈಂಟ್ ಮೇರೀಸ್ ದ್ವೀಪಕ್ಕೂ ಜನ ಬರುತ್ತಿಲ್ಲ. ಸಾಮಾನ್ಯವಾಗಿ ವಿಕೆಂಡ್‌ಗಳಲ್ಲಿ ಬೀಚ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದು, ಸರಕಾರದ ನೈಟ್ ಕರ್ಫ್ಯೂನಿಂದಾಗಿ ರವಿವಾರವೂ ವಿರಳ ಸಂಖ್ಯೆಯಲ್ಲಿ ಕಂಡು ಬಂದಿದೆ.
ಇದನ್ನೂ ಓದಿ :ಕುಂಬಾರಿಕೆಯಲ್ಲೇ ಹೊಸತನ ಕಂಡುಕೊಂಡ ನಾಗರಾಜ
ವ್ಯಾಪಾರಕ್ಕೆ ಹೊಡೆತ
ಕಳೆದ ವರ್ಷ ಕೊರೊನಾದಿಂದಾಗ ಕರಾವಳಿಯ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ಬಿದ್ದಿತ್ತು. ಪ್ರವಾಸಿಗರಿಲ್ಲದೆ ಬೀಚ್‌ನಲ್ಲಿ ಹೊಟೇಲ್,ಅಂಗಡಿ ಸೇರಿದಂತೆ ಪ್ರವಾಸಿಗರ ಅವಲಂಬಿತ ಉದ್ಯಮಗಳಿಗೆ ಬಿಸಿ ತಟ್ಟಿದೆ. ಈ ನಡುವೆ ಕೊಂಚ ಚೇತರಿಕೆ ಕಂಡಿದ್ದ ಪ್ರವಾಸೋದ್ಯಮಕ್ಕೆ ಇದೀಗ ಮತ್ತೆ ಕೊರೊನಾ ಕಾಟ ಎದುರಾಗಿದ್ದು, ಪ್ರವಾಸಿಗರನ್ನೇ ನಂಬಿಕೊಂಡಿದ್ದ ಫಾಸ್ಟ್‌ಫುಡ್ ಅಂಗಡಿ, ಹೊಟೇಲುಗಳಿಗೆ ವ್ಯಾಪಾರ ಇಲ್ಲದೆ ನಷ್ಟ ಅನುಭವಿಸುವಂತಾಗಿದೆ.
ದೂರದ ಪ್ರವಾಸಿಗರು ಇದ್ದರೆ ಮಾತ್ರ ಒಂದಷ್ಟು ವ್ಯಾಪಾರ. ಕಳೆದ ಮೂರು ವಾರಗಳಿಂದ ಪ್ರವಾಸಿಗರು ಇತ್ತ ಬರುತ್ತಿಲ್ಲ. ಸ್ಥಳೀಯರಷ್ಟೆ ಬೀಚ್‌ಗೆ ಬರುತ್ತಾರೆ. ಈ ಹಿಂದೆ ಕೊರೊನದಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಇದೀಗ ವ್ಯಾಪಾರ ಸ್ವಲ್ಪ ಚೇತರಿಕೆ ಕಾಣುವ ಸಂದರ್ಭದಲ್ಲಿ ಸೃಷ್ಟಿಯಾದ ಸೋಂಕಿನ ಎರಡನೇಯ ಅಲೆ ಇನ್ನಷ್ಟು ಹೊಡೆತ ನೀಡುವ ಸಾಧ್ಯತೆ ಇದೆ.
– ರಿಯಾಜ್, ಲಿಂಬು ಪಾನೀಯ ವ್ಯಾಪಾರಿ
ಕಳೆದೊಂದು ತಿಂಗಳಿನಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಸ್ಥಳೀಯರಷ್ಟೆ ಇಲ್ಲಿ ಸೇರುತ್ತಾರೆ. ಜಿಲ್ಲಾಡಳಿತ ನೀಡಿದ ಸೂಚನೆಯಂತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಜಾಗೃತಿ ಮೂಡಿಸಲಾಗುತ್ತದೆ. ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಅಲ್ಲಲ್ಲಿ ಗುಂಪು ಸೇರದಂತೆ ನೋಡಿಕೊಳ್ಳಲಾಗುತ್ತದೆ. ಅಂತರ ಕಾಯ್ದುಕೊಳ್ಳಲು ಮತ್ತು ಮಾಸ್ಟ್ ಧರಿಸುವಂತೆ ನಮ್ಮ ಸಿಬಂದಿಗಳು ಪ್ರವಾಸಿಗರಿಗೆ ಸೂಚನೆಯನ್ನು ನೀಡುತ್ತಿದ್ದಾರೆ.
– ಪಾಂಡುರಂಗ ಮಲ್ಪೆ, ಅಧ್ಯಕ್ಷರು, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Editorial: ಪಾಕ್ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು
Kannada: ಕನ್ನಡನಾಡಲ್ಲಿ ಕನ್ನಡ ಕಲಿಕೆಯ ಹಾಡು-ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.