ಕೋವಿಡ್ :3 ತಿಂಗಳಲ್ಲೇ ಗರಿಷ್ಠ ಏರಿಕೆ ಕಂಡ ಭಾರತ, 24 ಗಂಟೆಗಳಲ್ಲಿ 25,000ಕ್ಕೂ ಅಧಿಕ ಪ್ರಕರಣ


Team Udayavani, Mar 14, 2021, 7:58 PM IST

ಕೋವಿಡ್ :3 ತಿಂಗಳಲ್ಲೇ ಗರಿಷ್ಠ ಏರಿಕೆ ಕಂಡ ಭಾರತ, 24 ಗಂಟೆಗಳಲ್ಲಿ 25,000ಕ್ಕೂ ಅಧಿಕ ಪ್ರಕರಣ

ನವದೆಹಲಿ: ಕೊರೊನಾ ಹಾವಳಿ ಮುಗಿಯುತ್ತಾ ಬಂತು ಎಂದು ಎಲ್ಲರೂ ನಿಟ್ಟುಸಿರು ಬಿಡುತ್ತಿರುವಂತೆಯೇ; ಆಘಾತಕಾರಿ ಬೆಳವಣಿಗೆಯೊಂದು ದಾಖಲಾಗಿದೆ. ಹಿಂದಿನ 24 ಗಂಟೆಗಳಲ್ಲಿ (ಭಾನುವಾರದ ಲೆಕ್ಕಾಚಾರದನ್ವಯ) ಭಾರತದಲ್ಲಿ 25,320 ಹೊಸ ಪ್ರಕರಣಗಳು ದಾಖಲಾಗಿವೆ. ಇದು ಕಳೆದ 3 ತಿಂಗಳಲ್ಲಿಯೇ ದಿನವೊಂದರಲ್ಲಿ ದಾಖಲಾದ ಗರಿಷ್ಠ ಏರಿಕೆ. ಈ ಬೆಳವಣಿಗೆ, ಮೈಮರೆಯಲು ಇದು ಸಮಯವಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ದೇಶವಾಸಿಗಳಿಗೆ ರವಾನಿಸಿದೆ.

ಭಾನುವಾರ ಹೊತ್ತಿಗಿನ ಅಂಕಿಅಂಶಗಳನ್ನೇ ಪರಿಗಣಿಸಿದರೆ, ಈ ಏರಿಕೆಯಿಂದ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆಯನ್ನು 1.13 ಕೋಟಿಗೆ ಮುಟ್ಟಿಸಿದೆ. ಇಲ್ಲಿಯವರೆಗೆ ಒಟ್ಟು 1,58,607 ಸಾವುಗಳು ಸಂಭವಿಸಿದೆ. ಇದರಲ್ಲಿ ನಿನ್ನೆ ಒಂದೇ ದಿನ ಸಂಭವಿಸಿದ 161 ಸಾವುಗಳೂ ಸೇರಿವೆ. ಕಳೆದ 44 ದಿನಗಳಲ್ಲೇ ಇದು ದಿನವೊಂದರಲ್ಲಿ ಸಂಭವಿಸಿದ ಗರಿಷ್ಠ ಸಾವಿನ ಸಂಖ್ಯೆಯಾಗಿದೆ ಎಂದು ಸರ್ಕಾರಿ ದಾಖಲೆಗಳು ಹೇಳಿವೆ.

ಕೊರೊನಾಕ್ಕೆ ಲಸಿಕೆಯೂ ಬಂದು, ಭಾರತೀಯರು ವ್ಯಾಪಕವಾಗಿ ಅದನ್ನು ಸ್ವೀಕರಿಸುತ್ತಿರುವಾಗಲೇ, ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರನೆ ಏರಿಕೆ ಕಂಡಿರುವುದು ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ. ಮತ್ತೂಮ್ಮೆ ದಿಗ್ಬಂಧನದಂತಹ ಕ್ರಮಗಳತ್ತ ದೇಶ ಹೊರಳಿಕೊಳ್ಳಲಿದೆಯಾ ಎಂಬ ಪ್ರಶ್ನೆಯೂ ಇದೆ.

ಭಾರತವನ್ನು ಮೀರಿಸಿದ ಬ್ರೆಜಿಲ್‌: ವಿಶ್ವದಲ್ಲೇ 2ನೇ ಗರಿಷ್ಠ ಕೊರೊನಾ ಬಾಧಿತ ದೇಶ ಎಂಬ ಕುಖ್ಯಾತಿಗೆ ಈಗ ಬ್ರೆಜಿಲ್‌ ತುತ್ತಾಗಿದೆ. ಈಗ ಅಲ್ಲಿನ ಪ್ರಕರಣಗಳ ಸಂಖ್ಯೆ ಒಟ್ಟು 1.14 ಕೋಟಿಗೇರಿದೆ. ಸಾವಿನ ಸಂಖ್ಯೆ 2,77,216ಕ್ಕೇರಿದೆ. ಭಾರತದಲ್ಲಿ ಪ್ರಕರಣಗಳ ಸಂಖ್ಯೆ 1.13 ಕೋಟಿ.

56 ವಿದ್ಯಾರ್ಥಿಗಳಿಗೆ ಸೋಂಕು: ತಮಿಳುನಾಡಿನ ತಂಜಾವೂರು ಸಮೀಪದ ಅಮ್ಮಾಟಿಪೆಟಾಯಿ ಹಳ್ಳಿಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ 56 ವಿದ್ಯಾರ್ಥಿನಿಯರು ಮತ್ತು ಒಬ್ಬ ಶಿಕ್ಷಕಿಗೆ ಕೊರೊನಾ ಕಾಣಿಸಿಕೊಂಡಿದೆ.

ಇದನ್ನೂ ಓದಿ :ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ; ಸುಳ್ಳು ಸುದ್ದಿ ಸೃಷ್ಟಿಸಿದವರ ವಿರುದ್ಧ ಕ್ರಿಮಿನಲ್ ಕೇಸ್

ಗುಜರಾತ್‌ ಶಾಲಾ, ಕಾಲೇಜು ಸಂಕಷ್ಟದಲ್ಲಿ: ಗುಜರಾತ್‌ನ ಸೂರತ್‌ ನಗರದ ಎರಡು ಪ್ರಾಥಮಿಕ ಶಾಲೆಗಳು, ಒಂದು ಕಾಲೇಜನ್ನು ಎರಡು ವಾರಗಳ ಕಾಲ ಬಂದ್‌ ಮಾಡಲಾಗಿದೆ. ಫೆಬ್ರವರಿಯಲ್ಲಿ ಸೂರತ್‌ ಶಿಕ್ಷಣಸಂಸ್ಥೆಗಳನ್ನು ಮತ್ತೆ ತೆರೆಯಲಾಗಿತ್ತು. ಈ ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು 20 ಪ್ರಕರಣಗಳು ದಾಖಲಾಗಿರುವುದರಿಂದ ಈ ಕ್ರಮಕ್ಕೆ ಅಲ್ಲಿನ ನಗರಪಾಲಿಕೆ ಮುಂದಾಗಿದೆ.

ಕಠಿಣ ಕ್ರಮದತ್ತ ಮಹಾರಾಷ್ಟ್ರ: ಮೊನ್ನೆ ಶನಿವಾರ ಮಹಾರಾಷ್ಟ್ರದ ನಾಗ್ಪುರದಲ್ಲಿ 1,828, ಮುಂಬೈನಲ್ಲಿ 1709, ಪುಣೆಯಲ್ಲಿ 1,667 ಪ್ರಕರಣಗಳು ದಾಖಲಾಗಿದ್ದವು. ಇದರ ಪರಿಣಾಮ ಮಂಗಳವಾರದಿಂದ ಮಹಾರಾಷ್ಟ್ರದ ಆಯ್ದಭಾಗಗಳಲ್ಲಿ ಕೆಲವು ಕಠಿಣ ನಿರ್ಬಂಧಗಳನ್ನು ಹೇರುವ ಸಾಧ್ಯತೆಯಿದೆ.

7 ರಾಜ್ಯಗಳಲ್ಲಿ ಶೇ. 87ರಷ್ಟು ಸೋಕಿಂತರು
ಕೊರೊನಾ ಪ್ರಕರಣಗಳ ಏರಿಕೆಯಲ್ಲಿ ಕರ್ನಾಟಕ ಸೇರಿ ದೇಶದ 7 ರಾಜ್ಯಗಳ ಪಾಲು ಗರಿಷ್ಠವಾಗಿದೆ. ಮಹಾರಾಷ್ಟ್ರ, ಕೇರಳ, ಪಂಜಾಬ್‌, ಕರ್ನಾಟಕ, ಗುಜರಾತ್‌, ತಮಿಳುನಾಡು, ಮಧ್ಯಪ್ರದೇಶಗಳು ಸೇರಿ ಹೊಸ ಪ್ರಕರಣಗಳ ಸಂಖ್ಯೆ ಶೇ.87.73ರಷ್ಟಿದೆ.
ತೆಲಂಗಾಣದಲ್ಲಿ 228: ಶನಿವಾರ ಎಂಟು ಗಂಟೆಯಷ್ಟೊತ್ತಿಗೆ ತೆಲಂಗಾಣದಲ್ಲಿ 228 ಹೊಸ ಪ್ರಕರಣಗಳು ಕಾಣಿಸಿಕೊಂಡಿವೆ. ದೀರ್ಘ‌ಕಾಲದ ಬಳಿಕ ಸತತ ಎರಡನೇ ದಿನ 200ಕ್ಕಿಂತ ಅಧಿಕ ಪ್ರಕರಣಗಳು ದಾಖಲಾಗಿ ಆತಂಕ ಮೂಡಿಸಿದೆ.

ಟಾಪ್ ನ್ಯೂಸ್

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

army

Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ

RG ಕರ್‌ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್‌ ಶಿಕ್ಷೆ ಪ್ರಕಟ

RG ಕರ್‌ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್‌ ರಾಯ್ ಗೆ ಜೀವಾವಧಿ ಶಿಕ್ಷೆ

ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ

CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

crime

Padubidri: ಸ್ಕೂಟಿಗೆ ಈಚರ್‌ ವಾಹನ ಢಿಕ್ಕಿ; ಸವಾರನಿಗೆ ಗಾಯ

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.