4 ದಿನ ಲಸಿಕೆ ಉತ್ಸವ : ಗರಿಷ್ಠ ಜನರು ಲಸಿಕೆ ಪಡೆಯಲು ಪ್ರೋತ್ಸಾಹ
Team Udayavani, Apr 11, 2021, 7:20 AM IST
ಹೊಸದಿಲ್ಲಿ: ಲಸಿಕೆ ಪಡೆಯಲು ಜನರಲ್ಲಿ ಇರುವ ಹಿಂಜರಿಕೆ ದೂರ ಮಾಡಿ, ಹೆಚ್ಚು ಮಂದಿ ಲಸಿಕೆ ಹಾಕಿಸಲು ಉತ್ತೇಜಿಸುವುದಕ್ಕಾಗಿ ಎ. 11ರಿಂದ 4 ದಿನ ದೇಶಾದ್ಯಂತ “ಲಸಿಕೆ ಉತ್ಸವ’ ನಡೆಯಲಿದೆ.
ಬಹುತೇಕ ರಾಜ್ಯಗಳು ಲಸಿಕೆ ಅಭಿಯಾನಕ್ಕೆ ಸಿದ್ಧತೆ ಮಾಡಿದ್ದು, ಬುಧವಾರದ ವರೆಗೆ ನಡೆಯಲಿದೆ.
ಇಂದು ಮಹಿಳೆಯರಿಗೆ ಆದ್ಯತೆ
ಎಪ್ರಿಲ್ 11 ಜ್ಯೋತಿಬಾ ಫುಲೆ ಅವರ ಜನ್ಮದಿನವಾಗಿದ್ದು, ಮಹಿಳೆಯ ರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡ ಲಾಗುತ್ತದೆ. ಎ. 14ರಂದು ಡಾ| ಅಂಬೇಡ್ಕರ್ ಜಯಂತಿಯಾಗಿದ್ದು, ಅಂದು ಯುವಜನತೆ, ಶೋಷಿತ ವರ್ಗಗಳು, ಕಾನೂನು ವಲಯದ ವೃತ್ತಿಪರರಿಗೆ ಪ್ರಾಶಸ್ತ್ಯ ನೀಡುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಸ್ಥಳದಲ್ಲೇ ನೋಂದಣಿ ಅವಕಾಶ
ಅರ್ಹರು ಕೋವಿನ್ ಪೋರ್ಟಲ್, ಆರೋಗ್ಯ ಸೇತು ಆ್ಯಪ್‌ನಲ್ಲಿ ನೋಂದಾಯಿಸಿ, ಲಸಿಕೆಗೆ ಅಪಾಯಿಂಟ್‌ಮೆಂಟ್ ಪಡೆಯಬಹುದು. ಸ್ಥಳದಲ್ಲೇ ನೋಂದಣಿಗೂ ವ್ಯವಸ್ಥೆ ಕಲ್ಪಿಸಲಾಗಿದೆ.
ಎಷ್ಟು ಸಾಧ್ಯವೋ ಅಷ್ಟು ಮಂದಿಗೆ ಲಸಿಕೆ ನೀಡುವುದು ಮತ್ತು ಲಸಿಕೆ ವ್ಯರ್ಥವಾಗುವುದನ್ನು ತಡೆಯುವುದೇ ಈ ಉತ್ಸವದ ಪ್ರಮುಖ ಉದ್ದೇಶವಾಗಿದೆ.
ರಾಜ್ಯದಲ್ಲಿ ಲಸಿಕೆ ಕೊರತೆ?
ರಾಜ್ಯದಲ್ಲಿ ಲಸಿಕೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಲಸಿಕೆ ಕೊರತೆ ಎದುರಾಗಿದೆ. ಇನ್ನೆರಡು ದಿನಗಳಿಗೆ ಸಾಕಾಗುವಷ್ಟು ಲಸಿಕೆ ಇದ್ದು, ಶೀಘ್ರ ದಾಸ್ತಾನು ರವಾನಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಆರೋಗ್ಯ ಇಲಾಖೆ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.