ರೋಗ ತಡೆಯಲು ಲಸಿಕೆಯೇ ಕೀಲಿಕೈ!


Team Udayavani, Feb 18, 2021, 6:05 AM IST

ರೋಗ ತಡೆಯಲು ಲಸಿಕೆಯೇ ಕೀಲಿಕೈ!

ಡಾ| ರಾಜೀವ ಎಲ್‌.ಕರಂದಿಕರ್‌, ಚೆನ್ನೈ ಗಣಿತ ಸಂಸ್ಥೆ
ಡಾ| ಶೇಖರ್‌ ಸಿ. ಮಾಂಡೆ, ಮಹಾನಿರ್ದೇಶಕರು, ಸಿಎಸ್‌ಐಆರ್‌
ಡಾ| ಎಂ. ವಿದ್ಯಾಸಾಗರ್‌, ಐಐಟಿ ಹೈದರಾಬಾದ್‌

ಸೆಪ್ಟಂಬರ್‌ 2020ರಲ್ಲಿ ಭಾರತದಲ್ಲಿ ಕೋವಿಡ್‌ ಸೋಂಕು ಸಂಖ್ಯೆಯು ಉತ್ತುಂಗದಲ್ಲಿತ್ತು ಮತ್ತು ಅಂದಿನಿಂದಲೂ ನಿರಂತರವಾಗಿ ಕುಸಿಯುತ್ತಿದೆ. ಸೆಪ್ಟೆಂಬರ್‌ 11, 2020 ರಂದು ನಿತ್ಯ ಪ್ರಕರಣಗಳ ಸಂಖ್ಯೆ ಗರಿಷ್ಠ 97,655 ಇದ್ದದ್ದು, 2021 ಫೆಬ್ರವರಿ 16 ರಂದು 11,610ಕ್ಕೆ ಕುಸಿದಿದೆ. ಇದರಲ್ಲಿ ಅರ್ಧದಷ್ಟು ಪ್ರಕರಣಗಳು ಕೇರಳದಲ್ಲಿ ವರದಿಯಾಗಿವೆ. ಕೋವಿಡ್‌-19 ರಾಷ್ಟ್ರೀಯ ಸೂಪರ್‌ ಮಾಡೆಲ್‌ ಸಮಿತಿಯ ಅಂದಾಜಿನ ಪ್ರಕಾರ, ಮಾರ್ಚ್‌ ಅಂತ್ಯದ ವೇಳೆಗೆ ಸಕ್ರಿಯ ಪ್ರಕರಣಗಳು ಹತ್ತು ಸಾವಿರಕ್ಕೆ ಇಳಿಯುತ್ತವೆ.

ಇವೆಲ್ಲವೂ ವೈರಾಣು ವಿರುದ್ಧದ ನಮ್ಮ ಹೋರಾಟದ ಮೊದಲ ಹಂತದ ಅಂತ್ಯವನ್ನು ಮಾತ್ರ ಸೂಚಿಸುತ್ತವೆ. ಇಟಲಿ, ಇಂಗ್ಲೆಂಡ್‌, ಅಮೆರಿಕ ಮುಂತಾದ ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗದಂತೆ ಖಚಿತ ಪಡಿಸಿಕೊಳ್ಳುವುದು ಬಹಳ ಮುಖ್ಯ. ಸೆರೋಲಾಜಿಕಲ್‌ ಸಮೀಕ್ಷೆಗಳು ಮತ್ತು ಮಾದರಿ ಮುನ್ಸೂಚ‌ನೆಗಳ ಪ್ರಕಾರ, ಭಾರತದ ಜನಸಂಖ್ಯೆಯ ಗಣನೀಯ ಭಾಗವು ಬಹುಶಃ ಕೆಲವು ನೈಸರ್ಗಿಕ ಪ್ರತಿರಕ್ಷೆಯೊಂದಿಗೆ ಪ್ರಸ್ತುತ ವೈರಾಣು ವಿರುದ್ಧ ನಿರೋಧಕ ಶಕ್ತಿಯನ್ನು ಹೊಂದಿದೆ. ಸದ್ಯದ ಪುರಾವೆಗಳು ದೀರ್ಘ‌ಕಾಲೀನ ರೋಗನಿರೋಧಕತೆ ಸೂಚಿಸುತ್ತವೆಯಾದರೂ, ಪ್ರತಿಕಾಯಗಳಿಂದಾಗಿ ಬರುವ ನಿರೋಧಕ ಶಕ್ತಿ ಹಲವಾರು ತಿಂಗಳುಗಳವರೆಗೆ ಇರಬಹುದು, ಹೆಚ್ಚು ಕಾಲ ಉಳಿಯುವುದಿಲ್ಲ ಎನ್ನಲಾಗುತ್ತಿದೆ. ಅತ್ಯಂತ ವಿಶ್ವಾಸಾರ್ಹ ದೀರ್ಘಕಾಲೀನ ರಕ್ಷಣೆಯನ್ನು ಲಸಿಕೆಯ ಮೂಲಕ ಒದಗಿಸಲಾಗುತ್ತದೆ. ಲಸಿಕೆಯು ಹೆಚ್ಚು ಬಲವಾದ ಪ್ರತಿರಕ್ಷಣೆಯನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಆದ್ದರಿಂದ ರೋಗದ ಹರಡುವಿಕೆ ನಿಯಂತ್ರಿಸಲು ಲಸಿಕೆಯು ಕೀಲಿಯಾಗಿದೆ. ಲಸಿಕೆಗೆ ಹೋಲಿಸಿದರೆ ಪ್ರತಿಕಾಯಗಳು (ಹಿಂದಿನ ಸೋಂಕಿನಿಂದ ಉಂಟಾಗಿದ್ದು) ರೂಪಾಂತರಗೊಂಡ ವೈರಾಣು ವಿರುದ್ಧ ಕಡಿಮೆ ರಕ್ಷಣೆ ನೀಡುತ್ತವೆ ಎಂದು ಕೆಲವು ವೈದ್ಯಕೀಯ ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಆದ್ದರಿಂದ ಅನುಮೋದಿತ ಲಸಿಕೆಗಳೊಂದಿಗೆ ರಾಷ್ಟ್ರವ್ಯಾಪಿ ಲಸಿಕಾ ಕಾರ್ಯಕ್ರಮವನ್ನು ಆದಷ್ಟು ಬೇಗ ಪೂರ್ಣಗೊಳಿಸುವುದು ಅವಶ್ಯವಾಗಿದೆ. ಕುತೂಹಲಕಾರಿ ವಿಷಯವೆಂದರೆ ಪ್ರೊಟೀನ್‌ ಆಧಾರಿತ ಲಸಿಕೆಗಳಿಗಿಂತ, ನಿಷ್ಕ್ರಿಯಗೊಂಡ ವೈರಾಣುವಿನಿಂದ ತಯಾರಿಸಿದ ಲಸಿಕೆಯಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು ರೂಪಾಂತರಿ ವೈರಾಣುಗಳ ವಿರುದ್ಧ ಹೆಚ್ಚಿನ ರಕ್ಷಣೆ ನೀಡುವ ಸಾಧ್ಯತೆಯಿದೆ.

ಯಾವುದೇ ಲಸಿಕೆ ತುರ್ತು ಅನುಮೋದನೆಗಾಗಿ ಅನುಮತಿ ಪಡೆಯಲು ಶೇ.50ರಷ್ಟು ಪರಿಣಾಮಕಾರಕವನ್ನು ಹೊಂದಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಕೆಲವು ಲಸಿಕೆಗಳು ಶೇ.40ರಷ್ಟು ಪರಿಣಾಮ ಕಾರಿತ್ವದಲ್ಲೂ ರಕ್ಷಣೆ ನೀಡುತ್ತವೆ ಮತ್ತು ಕೆಲವು ಶೇ.80ರಷ್ಟು ಪರಿಣಾಮಕಾರಕದಲ್ಲೂ ಲಸಿಕೆ ಪಡೆದವರಿಗೆ ರಕ್ಷಣೆ ಕೊಟ್ಟಿಲ್ಲ. ಆದ್ದರಿಂದ, ನಿಯಂತ್ರಕ ಸಂಸ್ಥೆಗಳು ಇಂತಹ ಅಸಂಬದ್ಧ ಮಾರ್ಗಸೂಚಿಗಳ ಬದಲು ತಿಳಿವಳಿಕೆಯ ನಿರ್ಧಾರ ತೆಗೆದುಕೊಳ್ಳುತ್ತವೆ ಎಂದು ನಮಗೆ ನಂಬಿಕೆ ಇದೆ.

ಇದರಿಂದ ನಮಗೆ ಮನವರಿಕೆಯಾಗುವ ಸಂಗತಿಯೆಂದರೆ, ಉದ್ದೇಶಿತ ಜನಸಂಖ್ಯೆಯ ಪ್ರತಿಯೊಬ್ಬರಿಗೂ ಲಸಿಕೆ ಹಾಕಿದರೂ ಸಹ ಸಾರ್ವಜನಿಕರು ಸುರಕ್ಷತ ಶಿಷ್ಟಾ ಚಾರಗಳನ್ನು ಪಾಲಿಸುವುದು ಕಡ್ಡಾಯ. ಇದು ವರೆಗೆ SARS-CoV-2ನಲ್ಲಿ ಸಾವಿರಾರು ರೂಪಾಂತರಗಳು ಕಂಡುಬಂದರೂ ಯುಕೆ ರೂಪಾಂತರ ಎಂದು ಕರೆಯಲಾಗುವ ವೈರಾಣು ಹೆಚ್ಚಿನ ಹರಡುವಿಕೆ ಮತ್ತು ಸೋಂಕಿನ ಅನಂತರ ಹೆಚ್ಚಿನ ಮಾರಕತೆಯನ್ನು ತೋರಿಸಿದೆ. ಈ ವಿಷಯದಲ್ಲಿ ಜಗತ್ತು ಇಲ್ಲಿಯವರೆಗೆ ಅದೃಷ್ಟಶಾಲಿಯಾಗಿದೆ.

ಆದರೆ ಅಸುರಕ್ಷಿತ ಸಾರ್ವಜನಿಕರ ಮೂಲಕ ವೈರಾಣು ಹರಡಿದರೆ, ವೈರಾಣು ರೂಪಾಂತರ ಗೊಳ್ಳುವ ಅವಕಾಶಗಳು ಹೆಚ್ಚಾಗಿರುತ್ತವೆ. ಈ ಕಾರಣದಿಂದಾಗಿ ಲಭ್ಯವಿರುವ ಎಲ್ಲ ಸಂಪನ್ಮೂಲ ಗಳೊಂದಿಗೆ ಲಸಿಕಾ ಕಾರ್ಯಕ್ರಮ ಸಾಗಬೇಕಿದೆ.

ಟಾಪ್ ನ್ಯೂಸ್

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

doctor 2

Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್‌ ಕೇರ್‌ ವಿಭಾಗ ಆರಂಭ

Beer

Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

India: ಭಾರತದಲ್ಲಿ ರಹಸ್ಯ ವಾಸ್ತವ್ಯ, ಬಿಗಿ ಭದ್ರತೆ…ಶೇಖ್‌ ಹಸೀನಾ ಆಶ್ರಯ ಪಡೆದು 100 ದಿನ!

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ಯಕ್ಷಗಾನದ ಕನ್ನಡ ಭಾಷಾ ಸಂಪದ ಉಳಿಸಿ, ಬೆಳೆಸೋಣ

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ರಾಷ್ಟ್ರೀಯ ಆರ್ಥಿಕ ಉತ್ಥಾನದ ಪದದರ್ಶಿ ಸಹಕಾರಿ ಸಂಸ್ಥೆಗಳು

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಇಂದು ತುಳಸೀ ಪೂಜೆ: ಭಕ್ತಿ, ಶುದ್ಧತೆಯ ಮಹತ್ವ ಸಾರುವ ತುಳಸೀ ವಿವಾಹ

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

ಶಾಸ್ತ್ರೀಯ ಸಂಗೀತದಲ್ಲಿ ಕನ್ನಡದ ಕೃತಿಗಳು ಕೇಳಿಬರಲಿ…

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Yadiyurappa (2)

B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ

K L RAhul

K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ

1-siddu

BJP ಸರಕಾರ ಕಾಲದ ಕೋವಿಡ್‌, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Mangaluru: ಸಮಾಜದ ಕರುಳು ಹಿಂಡುವ “ಆತ್ಮಹ*ತ್ಯೆ’  

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.