ನಿಮ್ಮ ಬಳಿಗೇ ಬರಲಿದೆ ಲಸಿಕೆ ಟ್ರಕ್: ರಾಜ್ಯಕ್ಕೆ 30 ಲಕ್ಷ ಲಸಿಕೆ ಲಭ್ಯ ಸಾಧ್ಯತೆ
Team Udayavani, Dec 25, 2020, 6:55 AM IST
ಬೆಂಗಳೂರು: ಕೊರೊನಾ ಎರಡನೇ ಅಲೆ ಮತ್ತು ಬ್ರಿಟನ್ ರೂಪಾಂತರ ವೈರಸ್ ಸದ್ದು ಮಾಡುತ್ತಿರುವ ನಡುವೆಯೇ ಕೋವಿಡ್ ಲಸಿಕೆ ವಿತರಣೆಗೆ ದಿನಗಣನೆಯೂ ಆರಂಭವಾಗಿದ್ದು, ಪ್ರಧಾನಿ ಘೋಷಣೆ ಬೆನ್ನಲ್ಲೇ ತುರ್ತು ಆದ್ಯತಾ ವಲಯಕ್ಕೆ ಲಸಿಕೆ ಹಂಚಲು ರಾಜ್ಯ ಸರಕಾರ ಸನ್ನದ್ಧವಾಗಿದೆ.
ಇದಕ್ಕಾಗಿಯೇ ಶೀತಲೀಕರಣ/ ಚುಚ್ಚುಮದ್ದು ಕೋಣೆಯನ್ನು ಒಳಗೊಂಡ ಅತ್ಯಾಧುನಿಕ ಫೀಲ್ಡ್ ವ್ಯಾಕ್ಸಿನೇಷನ್ ವೆಹಿಕಲ್(ಟ್ರಕ್)ಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ.
ಜನವರಿ 3ನೇ ವಾರ ದೇಶಾದ್ಯಂತ ಮೊದಲ ಹಂತದ ಲಸಿಕೆ ವಿತರಣೆಗೆ ಚಾಲನೆ ನೀಡುವ ಸಾಧ್ಯತೆ ಇದೆ. ಆ ವೇಳೆ ವಿತರಣೆಗೆ ಉದ್ದೇಶಿಸಿರುವ 30 ಕೋಟಿ ಲಸಿಕೆಗಳಲ್ಲಿ ಕರ್ನಾಟಕಕ್ಕೆ 30 ಲಕ್ಷ ಲಭ್ಯವಾಗಲಿವೆ. ಸದ್ಯ ಅವುಗಳ ಸಂಗ್ರಹಕ್ಕೆ ಬೆಂಗಳೂರು, ಕಲಬುರಗಿಯಲ್ಲಿ ಲಸಿಕೆ ಸಂಗ್ರಹಣ ಕೇಂದ್ರ ಘಟಕ ಮತ್ತು ಐದು ಕಡೆ ವಿಭಾಗೀಯ ಘಟಕಗಳನ್ನು ಗುರುತಿಸಲಾಗಿದೆ. ಇಲ್ಲಿಂದ ಲಸಿಕೆ ಯನ್ನು ವೈದ್ಯಕೀಯ ಸಿಬಂದಿ ಇರುವ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಿಗೆ ವಿತರಿಸಲೆಂದು ಖಾಸಗಿ ಶೀತಲೀಕರಣ ಕಂಪೆನಿಯೊಂದಿಗೆ ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಫೀಲ್ಡ್ ವ್ಯಾಕ್ಸಿನೇಷನ್ ವೆಹಿಕಲ್‌ಗಳನ್ನು ಬಳಸಲಾಗುತ್ತದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಹಿರಿಯರಿಗೆ ಮೊದಲು
ಆದ್ಯತಾ ವಲಯದ ಫಲಾನುಭವಿಗಳ ಪಟ್ಟಿಯಲ್ಲಿ ಹಿರಿಯ ವೈದ್ಯರಿಗೆ ಮೊದಲ ಸ್ಥಾನ. ಬಳಿಕ ಕಿರಿಯ ವೈದ್ಯರು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು, ನರ್ಸ್‌ಗಳು ಸೇರಿದಂತೆ ಇತರ ಸಿಬಂದಿಗೆ ನೀಡಲಾಗುತ್ತದೆ. ಬಳಿಕ ಪೊಲೀಸ್, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು ಇರುತ್ತಾರೆ. ಎಲ್ಲ ಕಡೆಯೂ ಹಿರಿಯರಿಗೆ ಮೊದಲ ಪ್ರಾಶಸ್ತ್ಯ.
ಬೆಂಗಳೂರಿಗರಿಗೆ ಮೊದಲು ಲಸಿಕೆ
ಸೋಂಕು ಹೆಚ್ಚಿರುವ ನಗರದಲ್ಲಿಯೇ ತುರ್ತು ಲಸಿಕೆ ವಿತರಣೆಗೆ ಉದ್ದೇಶಿಸಲಾಗಿದೆ. ಈ ಪೈಕಿ ಮೊದಲು ಬೆಂಗಳೂರಿನ ವೈದ್ಯರು ಮತ್ತು ಆರೋಗ್ಯ ಸಿಬಂದಿ ಲಸಿಕೆ ಪಡೆಯಲಿದ್ದಾರೆ. ಅನಂತರ ಸೋಂಕು ಹೆಚ್ಚಿರುವ ಪ್ರದೇಶಗಳಾದ ಮೈಸೂರು, ದಕ್ಷಿಣ ಕನ್ನಡ, ತುಮಕೂರು… ಹೀಗೆ ಸೋಂಕಿನ ತೀವ್ರತೆ ಆಧರಿಸಿ ವಿತರಿಸಲು ಉದ್ದೇಶಿಸಲಾಗಿದೆ.
ಡಿ. 23ರ ಅಂತ್ಯಕ್ಕೆ ರಾಜ್ಯದಲ್ಲಿ ಸರಕಾರಿ ಆರೋಗ್ಯ ಕೇಂದ್ರಗಳ 2,55,331 ಸಿಬಂದಿ, 2,65,129 ಖಾಸಗಿ ಆರೋಗ್ಯ ಕೇಂದ್ರಗಳ ಸಿಬಂದಿ ಸೇರಿದಂತೆ ಒಟ್ಟು 5,20,460 ಆರೋಗ್ಯ ಕಾರ್ಯಕರ್ತರ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗಿದೆ. ಇದರಲ್ಲಿ ದ.ಕ. ಜಿಲ್ಲೆಯ 39 ಸಾವಿರ, ಉಡುಪಿಯ 18.5 ಸಾವಿರ ಮಂದಿ ಸೇರಿದ್ದಾರೆ.
– ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.