ಮೃತಪಟ್ಟು 4 ತಿಂಗಳ ಬಳಿಕ ಕೋವಿಡ್ ಲಸಿಕೆ!
Team Udayavani, Jan 25, 2022, 10:50 AM IST
ಕುಷ್ಟಗಿ: ಕುಷ್ಟಗಿ ಪುರಸಭೆ ಉಪಾಧ್ಯಕ್ಷೆಯಾಗಿದ್ದ ದಿ. ತೋಟಮ್ಮ ಕಲಕಬಂಡಿ ನಿಧನ ಹೊಂದಿ 4 ತಿಂಗಳು ಕಳೆದ ಬಳಿಕ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದಿರುವ ಮೆಸೇಜ್ ಬಂದಿದೆ.
ತೋಟಮ್ಮ ಕಲಕಬಂಡಿ ಪುರಸಭೆ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಕಳೆದ 9ನೇ ಸೆಪ್ಟೇಬರ್ 2021ರಂದು ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರು ಮೊದಲ ಡೋಸ್ ಕೋವಿಶಿಲ್ಡ್ ಲಸಿಕೆ ಹಾಕಿಸಿಕೊಂಡಿದ್ದರು. ಆದರೆ ಅವರ ಪುತ್ರ ಅಮರೇಶ ಕಲಕಬಂಡಿ ಅವರ ಮೊಬೈಲ್ ಗೆ ಎರಡನೇ ಡೋಸ್ ಲಸಿಕೆ ತೋಟಮ್ಮ ಅವರಿಗೆ ಯಶಸ್ವಿಯಾಗಿರುವ ಮೆಸೇಜ್ ಬಂದಿದೆ.
ತೋಟಮ್ಮ ನಿಧನರಾಗಿ ನಾಲ್ಕು ತಿಂಗಳಾಗಿದ್ದು ಲಸಿಕೆ ಹಾಕಿಸಿಕೊಳ್ಳದೇ ಈ ರೀತಿಯ ಮೆಸೇಜ್ ಬಂದಿರುವುದು ಅಚ್ಚರಿಗೆ ಕಾರಣವಾಗಿದೆ.
ತೋಟಮ್ಮ ಪುತ್ರ ಅಮರೇಶ ಕಲಕಬಂಡಿ ಅವರು ಎರಡನೇ ಡೋಸ್ ಲಸಿಕೆ ಹಾಕಿಸಿಕೊಂಡಿಲ್ಲ ಆದರೆ ಸೋಮವಾರ ಲಸಿಕೆ ಹಾಕಿಸಿಕೊಂಡಿರುವ ಮೆಸೇಜ್ ಬಂದಿರುವುದು ಆರೋಗ್ಯ ಇಲಾಖೆಯ ತಾಂತ್ರಿಕ ಪವಾಡ ಎನ್ನುವಂತಾಗಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳದೇ ಈ ರೀತಿ ಮೆಸೇಜ್ ಗಳು ಬಂದರೆ ಹಾಕಿಸಿಕೊಳ್ಳದವರಿಗೆ ವರದಾನವಾಗುವುದರಲ್ಲಿ ಅಲ್ಲಗಳೆಯುವಂತಿಲ್ಲ. ಈ ಕಾರಣದಿಂದ ಆರೋಗ್ಯ ಇಲಾಖೆ ಈ ರೀತಿಯ ಯಡವಟ್ಟುಗಳನ್ನು ಮಾಡದಂತೆ ಅಮರೇಶ ಕಲಕಬಂಡಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.