29 ಸಾವಿರಕ್ಕೂ ಅಧಿಕ ಡೋಸ್ ಲಸಿಕೆ ಪೋಲು! ಪೋಲು ಪ್ರಮಾಣ ಶೇ. 6ರಷ್ಟು
Team Udayavani, Feb 14, 2021, 6:05 AM IST
ಬೆಂಗಳೂರು: ರಾಜ್ಯದಲ್ಲಿ ಈವರೆಗೆ 29 ಸಾವಿರಕ್ಕೂ ಅಧಿಕ ಡೋಸ್ ಕೊರೊನಾ ಲಸಿಕೆ ವ್ಯರ್ಥವಾಗಿವೆ! ಫೆ.12ರ ವರೆಗೆ 4,91,490 ಡೋಸ್ ನೀಡಲಾಗಿದ್ದು, 29,489 ಡೋಸ್ ಲಸಿಕೆ ಪೋಲಾಗಿದೆ. ದೇಶದಲ್ಲಿ ಲಸಿಕೆ ಪೋಲು ಪ್ರಮಾಣದಲ್ಲಿ ರಾಜ್ಯ ಟಾಪ್ 10ರಲ್ಲಿದೆ.
ಲಸಿಕೆಯನ್ನು ಸೀಸೆಗಳಲ್ಲಿ ತುಂಬಿಸಿಡಲಾಗಿರು ತ್ತದೆ. ಒಂದು ಸೀಸೆಯಲ್ಲಿ 10 ಅಥವಾ 20 ಡೋಸ್ ಲಸಿಕೆ ಇರುತ್ತದೆ. ಈ ಸೀಸೆಯ ಅವಧಿ 4 ಗಂಟೆ ಮಾತ್ರವಾಗಿದ್ದು, ಅದರೊಳಗೆ ಫಲಾನುಭವಿಗಳು ಬರದೆ ಬಾಕಿಯಾದ ಲಸಿಕೆಯನ್ನು ಬಳಸುವಂತಿಲ್ಲ.
ಉಳಿದಂತೆ ಸಿರಿಂಜ್‌ಗೆ ಲಸಿಕೆ ತುಂಬಿಸಿಕೊಳ್ಳುವಾಗ ಹೆಚ್ಚು ಪಡೆದಿರುವುದು, ಲಸಿಕೆ ಕೈಜಾರುವುದು, ಸಾಗಿಸುವಾಗ ಹಾನಿಯಾಗಿರುವುದು ಮುಂತಾ ದವುಗಳಿಂದಲೂ ಲಸಿಕೆ ಪೋಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋವ್ಯಾಕ್ಸಿನ್ ಪ್ರಮಾಣವೇ ಹೆಚ್ಚು
ರಾಜ್ಯದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬೆರಡು ಲಸಿಕೆಯನ್ನು ನೀಡಲಾಗುತ್ತಿದೆ. ಕೋವಿಶೀಲ್ಡ್‌ನ ಒಂದು ಸೀಸೆಯಲ್ಲಿ 10 ಡೋಸ್ ಹಾಗೂ ಕೋವ್ಯಾಕ್ಸಿನ್‌ನಲ್ಲಿ 20 ಡೋಸ್‌ಗಳಿರುತ್ತವೆ. ಜಾಸ್ತಿ ಡೋಸ್ ಹೊಂದಿರುವ ಕಾರಣ ಇದು ಪೋಲಾಗುವುದೂ ಹೆಚ್ಚು.
ಪೋಲು ಹೇಗೆ ಪತ್ತೆ?
ನಿತ್ಯ ಬಳಕೆಯಾಗುವ ಲಸಿಕೆ ಮಾಹಿತಿಯನ್ನು ಇವಿನ್ (ಎಲೆಕ್ಟ್ರಿಕ್ ವ್ಯಾಕ್ಸಿನ್ ಇಂಟೆಲಿಜನ್ಸ್ ನೆಟ್‌ವರ್ಕ್) ತಂತ್ರಾಂಶಕ್ಕೆ ದಾಖಲಿಸಬೇಕು. ಲಸಿಕೆ ವಿತ ರಣೆ ಕೇಂದ್ರಕ್ಕೆ ನೀಡಿರುವ ಲಸಿಕೆ ಮಾಹಿತಿಯನ್ನು ಪ್ರತಿ ಜಿಲ್ಲಾ ಉಗ್ರಾಣ ಸಿಬಂದಿಯು ತಂತ್ರಾಂಶಕ್ಕೆ ನೀಡುತ್ತಾರೆ. ಮಹಾರಾಷ್ಟ್ರ, ತಮಿಳುನಾಡು, ಹರಿಯಾಣ, ಬಿಹಾರ್ ಹಾಗೂ ಅಸ್ಸಾಂನಲ್ಲಿ ಹೆಚ್ಚು ಪ್ರಮಾಣದ ಲಸಿಕೆ ಪೋಲಾಗುತ್ತಿದೆ.
ಸಾಮಾನ್ಯ ವಿದ್ಯಮಾನ
ಸಾರ್ವತ್ರಿಕ ಲಸಿಕೆ ವಿತರಣೆ ಸಂದರ್ಭ ಲಸಿಕೆ ಪೋಲಾಗುವುದು ಸಾಮಾನ್ಯ. ಅದರಲ್ಲೂ ಕೊರೊನಾ ಲಸಿಕೆ ಸೀಸೆಗಳ ಕಾಲಾವಧಿ 4 ಗಂಟೆ ಮಾತ್ರವಾಗಿದ್ದು, ಶೀಘ್ರದಲ್ಲೇ ಸೀಸೆಯಲ್ಲಿರುವುದನ್ನು ಫಲಾನುಭವಿಗಳಿಗೆ ನೀಡಬೇಕು. ಪ್ರಮಾಣ ಕಡಿಮೆ ಮಾಡÛಲು ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಲಸಿಕೆ ಪ್ರಕ್ರಿಯೆ ಉಪ ನಿರ್ದೇ ಶಕಿ ಡಾ| ಬಿ.ಎನ್. ರಜನಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾ ಲಸಿಕೆ ಪೋಲು ಪ್ರಮಾಣ ಶೇ.6ರಷ್ಟಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ನಿಯಂತ್ರಣದಲ್ಲಿದ್ದು, ಪೋಲು ಪ್ರಮಾಣ ಕಡಿಮೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.
– ಪಂಕಜ್‌ಕುಮಾರ್ ಪಾಂಡೆ, ನಿಕಟ ಪೂರ್ವ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
– ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.