ಸೇನೆ ಬಗ್ಗೆ ರಾಜಕೀಯ, ಕೈ ನಡೆಗೆ ಟೀಕೆ
ಲಡಾಖ್ ಘಟನೆಯ ಬಗ್ಗೆ ದೇಶವ್ಯಾಪಿ ಹರಡಿದ ಕಿಚ್ಚಿನ ನಡುವೆ ಕಾಂಗ್ರೆಸ್ ಆಕ್ಷೇಪಾರ್ಹ ನಡೆ
Team Udayavani, Jun 21, 2020, 6:20 AM IST
ರಾಹುಲ್‌ಗಾಂಧಿ ಟ್ವೀಟ್ ವಾರ್
ರಾಹುಲ್ ಗಾಂಧಿ ಕೆಲ ದಿನಗಳಿಂದ ಚೀನ- ಭಾರತ ಬಿಕ್ಕಟ್ಟಿನ ವಿಷಯದಲ್ಲಿ ನಿರಂತರವಾಗಿ ಕೇಂದ್ರದ ವಿರುದ್ಧ ಟ್ವೀಟ್ ದಾಳಿ ಮುಂದುವರಿಸಿದ್ದಾರೆ. “ಗಾಲ್ವಾನ್‌ನಲ್ಲಿ ನಡೆದ ದಾಳಿಯು ಪೂರ್ವಯೋಜಿತವಾಗಿತ್ತು, ಕೇಂದ್ರ ಸರ್ಕಾರ ನಿದ್ದೆ ಮಾಡುತ್ತಿತ್ತು, ಇದರಿಂದಾಗಿ ನಮ್ಮ ಸೈನಿಕರು ಬೆಲೆ ತೆರುವಂತಾಯಿತು” ಎಂದು ಶುಕ್ರವಾರ ಟ್ವೀಟ್ ಮಾಡಿರುವ ಅವರು, ಈ ಹಿಂದೆ ಸೈನಿಕರು ಮೃತಪಟ್ಟ ಸುದ್ದಿ ಹೊರಬಂದಾಗಲೂ, “ನಮ್ಮ ನೆಲವನ್ನು ಕಬಳಿಸಲು, ನಮ್ಮ ಸೈನಿಕರನ್ನು ಸಾಯಿಸಲು ಚೀನಕ್ಕೆಷ್ಟು ಧೈರ್ಯ? ಪ್ರಧಾನಿಯೇಕೆ ಮೌನವಾಗಿದ್ದಾರೆ?’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಮೋದಿ,””ಯಾರೂ ನಮ್ಮ ಪ್ರದೇಶದಲ್ಲಿ ನುಸುಳಿಲ್ಲ, ನಮ್ಮ ಯಾವುದೇ ಪೋಸ್ಟ್ ಅನ್ನೂ ಆಕ್ರಮಿಸಿಲ್ಲ” ಎಂದರೂ, ರಾಹುಲ್ ಮಾತ್ರ “ಪ್ರಧಾನಿಗಳು ನಮ್ಮ ಪ್ರದೇಶವನ್ನು ಚೀನದ ಆಕ್ರಮಣಶೀಲತೆಗೆ ಒಪ್ಪಿಸಿದ್ದಾರೆ. ಸೈನಿಕರೇಕೆ ಸತ್ತರು?” ಎಂದಿದ್ದಾರೆ.
ಗಡಿ ಭಾಗದಲ್ಲಿ ಚೀನ ಸೇನೆಯ ಜತೆಗೆ ಭಾರೀ ಬಿಕ್ಕಟ್ಟು ಸೃಷ್ಟಿಯಾಗಿರುವ ಈ ಸಮಯದಲ್ಲಿ ದೇಶವಾಸಿಗಳಷ್ಟೇ ಅಲ್ಲದೇ, ರಾಜಕೀಯ ಪಕ್ಷಗಳೂ ಕೂಡ ಏಕಧ್ವನಿಯಲ್ಲಿ ಸರಕಾರಕ್ಕೆ ಬೆಂಬಲ ಸೂಚಿಸುವ ಮಾತನಾಡುತ್ತಿವೆ. ಆದರೆ, ಇದೇ ವೇಳೆಯಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ನಾಯಕಿ ಸೋನಿಯಾ ಗಾಂಧಿಯವರು ಮಾತ್ರ ಭಾರತೀಯ ಸೈನಿಕರನ್ನು ಬೆಂಬಲಿಸುವ ಹೆಸರಲ್ಲಿ ಈ ವಿಷಯದಲ್ಲಿ ಅನವಶ್ಯಕ ರಾಜಕೀಯ ಮಾಡುತ್ತಿದ್ದಾರೆ ಎನ್ನುವ ಟೀಕೆಯೂ ಎದುರಾಗುತ್ತಿದೆ.
ಸರ್ವಪಕ್ಷಗಳ ಸಭೆಯಲ್ಲಿ ಸೋನಿಯಾ ಒಂಟಿ
ಗಡಿಭಾಗದಲ್ಲಿ ಚೀನ-ಭಾರತ ಸೇನೆಯ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಕುರಿತು ಶುಕ್ರವಾರ ಆಯೋಜನೆಯಾಗಿದ್ದ ಸರ್ವಪಕ್ಷಗಳ ಸಭೆಯಲ್ಲಿ ಬಹುತೇಕ ವಿಪಕ್ಷಗಳು ಕೇಂದ್ರದ ಜತೆ ನಿಲ್ಲುವ ಮಾತನಾಡಿದರೆ, ಸೋನಿಯಾಗಾಂಧಿ ಹಾಗೂ ಕಮ್ಯೂನಿಸ್ಟ್ ಪಕ್ಷಗಳು ಕೇಂದ್ರ ಸರಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ, ಉದ್ಧವ್ ಠಾಕ್ರೆ, ಡಿಎಂಕೆಯ ಎಂ.ಕೆ. ಸ್ಟಾಲಿನ್, ತೆಲಂಗಾಣ ಸಿಎಂ ಕೆ.ಸಿ.ಆರ್, ಮೋದಿಯವರ ಕಟು ವಿರೋಧಿ ಮಮತಾ ಬ್ಯಾನರ್ಜಿಯವಂಥವರೇ ಬಿಕ್ಕಟ್ಟಿನ ಸಮಯದಲ್ಲಿ ಕೇಂದ್ರ ಸರಕಾರದ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಲ್ಲುವ ಭರವಸೆ ಮಾತನಾಡಿದರು. ಆದರೆ, ಸೋನಿಯಾ ಬೆಂಬಲ ವ್ಯಕ್ತಪಡಿಸಿದರಾದರೂ, ಈ ಘಟನೆಯಲ್ಲಿ ಇಂಟೆಲಿಜೆನ್ಸ್ ವೈಫಲ್ಯ ಇದೆಯೇ ಎಂದು ಪ್ರಶ್ನೆಯೊಡ್ಡಿದರು. “”ಭಾರತ ಪಂಚಶೀಲತತ್ವವನ್ನು ಪಾಲಿಸಬೇಕು” ಎಂದು ಸಲಹೆ ಕೊಡಲು ಮುಂದಾದ, ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಬಗ್ಗೆ ವ್ಯಾಪಕ ಟೀಕೆ ಬಂದಿವೆ.
ಚೀನದ ರಾಜತಾಂತ್ರಿಕರ ಭೇಟಿಯಾಗಿದ್ದರು!
ಕೆಲ ವರ್ಷಗಳ ಹಿಂದೆ ಚೀನ-ಭಾರತದ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದ್ದ ಸಮಯದಲ್ಲಿ ರಾಹುಲ್ ಗಾಂಧಿ ಚೀನದ ರಾಜತಾಂತ್ರಿಕರನ್ನು ಭೇಟಿಯಾಗಿದ್ದ ಸುದ್ದಿ ಹೊರಬಿದ್ದಿತ್ತು. ಆದಾಗ್ಯೂ, ಈ ವಿಚಾರವನ್ನು ಆರಂಭದಲ್ಲಿ ಕಾಂಗ್ರೆಸ್ ನಾಯಕರು ಅಲ್ಲಗಳೆದರಾದರೂ ಕೊನೆಗೆ ರಾಹುಲ್ ಅವರೇ ಈ ಭೇಟಿ ನಡೆದಿದ್ದು ಸತ್ಯವೆಂದು ಒಪ್ಪಿಕೊಂಡರು. ನಂತರ ಕಾಂಗ್ರೆಸ್ ಅದನ್ನು ಸಮರ್ಥಿಸಿತು.
ರಾಜಕೀಯ ಮಾಡಬೇಡಿ: ರಾಹುಲ್‌ಗೆ ಹೆತ್ತಕರುಳ ಮನವಿ
ಕೇಂದ್ರ ಸರಕಾರದ ವಿರುದ್ಧ ರಾಹುಲ್‌ರ ಟ್ವೀಟ್ ದಾಳಿಗಳು ಮುಂದುವರಿದಿರುವ ವೇಳೆಯಲ್ಲೇ, ಗಾಲ್ವಾನ್ ಕಣಿವೆಯ ಕಲಹದಲ್ಲಿ ಗಾಯಗೊಂಡಿರುವ ಯೋಧರೊಬ್ಬರ ತಂದೆ, ರಾಹುಲ್‌ರ ಉದ್ದೇಶವನ್ನು ಪ್ರಶ್ನಿಸಿದ್ದಾರೆ. “ಭಾರತೀಯ ಸೇನೆಯು ಬಲಿಷ್ಠವಾಗಿದ್ದು, ಚೀನವನ್ನು ಸೋಲಿಸಬಲ್ಲದು. ರಾಹುಲ್ ಗಾಂಧಿ, ದಯವಿಟ್ಟು ರಾಜಕೀಯ ಮಾಡಬೇಡಿ. ನನ್ನ ಮಗ ಭಾರತೀಯ ಸೇನೆಗಾಗಿ ಹೋರಾಡಿದ್ದಾನೆ, ಮುಂದೆಯೂ ಹೋರಾಡಲಿದ್ದಾನೆ” ಎಂದಿದ್ದಾರೆ ಸೈನಿಕನ ತಂದೆ.
ಚೀನಾ ಚರ್ಚೆಯಲ್ಲಿ ನೆಹರೂ ನೆನಪು!
ಕಾಂಗ್ರೆಸ್ ಪಕ್ಷ ಕೇಂದ್ರದ ಮೇಲೆ ಹರಿಹಾಯುತ್ತಿರುವ ಸಮಯದಲ್ಲೇ, “ಗಡಿ ಸಮಸ್ಯೆ ನಿರ್ಮಾಣವಾಗುವುದಕ್ಕೆ ಕಾಂಗ್ರೆಸ್ಸೇ ಕಾರಣ’ ಎಂಬ ಪ್ರತಿವಾದ ಜೋರಾಗಿದೆ. ಅದರಲ್ಲೂ “ಹಿಂದಿ ಚೀನಿ ಭಾಯ್ ಭಾಯ್’ ಎನ್ನುತ್ತಾ, ಚೀನದ ಆಕ್ರಮಣಶೀಲವನ್ನು ಕಡೆಗಣಿಸಿದ ನೆಹರೂ ಆಡಳಿತ ದಿಂದಾಗಿಯೇ, ಇಂದು ಗಡಿ ಭಾಗದಲ್ಲಿ ಬಗೆಹರಿಯದ ಸಮಸ್ಯೆ ಸೃಷ್ಟಿಯಾಗಿಬಿಟ್ಟಿದೆ ಎನ್ನಲಾಗುತ್ತಿದೆ.
ಚೀನ ಅಕ್ಸಾಯ್‌ಚಿನ್ ಭಾಗವನ್ನು ಆಕ್ರಮಿಸಿಕೊಳ್ಳಲು ಆರಂಭಿಸಿದಾಗ,ನೆಹರೂ ಅವರು “ಅಲ್ಲಿ ಒಂದು ಹುಲ್ಲು ಕಡ್ಡಿಯೂ ಹುಟ್ಟುವುದಿಲ್ಲ’ ಎಂದಿದ್ದರು. ಚೀನ ಮುಖ್ಯಸ್ಥ ಮಾವೋ, ಟಿಬೆಟ್ ಮೇಲೆ ಆಕ್ರಮಣ ಘೋಷಿಸಿದಾಗ, ಭಾರತದ ಸಹಾಯ ಯಾಚಿಸಿ ಟಿಬೆಟಿಯನ್ ನಿಯೋಗವೊಂದು ಭಾರತಕ್ಕೆ ಬಂದಿತ್ತು. ನೆಹರೂ ಅವರು, “ಸ್ವಾಯತ್ತತೆ ಬೇಕಿದ್ದರೆ ಬೀಜಿಂಗ್‌ಗೆ ಹೋಗಿ ಕೇಳಿ’ ಎಂದು ಸಾಗಹಾಕಿದ್ದರು. ಅಕ್ಸಾಯ್ ಚಿನ್ ಪ್ರದೇಶದಲ್ಲಿ ಚೀನದ ಕುತಂತ್ರದ ಬಗ್ಗೆ ಭಾರತೀಯ ಸೇನೆಯು ನೆಹರೂ ಮತ್ತು ಅಂದಿನ ವಿದೇಶಾಂಗ ಸಚಿವ ಕೃಷ್ಣ ಮೆನನ್‌ಗೆ ಎಚ್ಚರಿಸಿದಾಗಲೂ ಇವರಿಬ್ಬರೂ ತಲೆಕೆಡಿಸಿಕೊಂಡಿರಲಿಲ್ಲ ಎಂದು ಚೀನ ಸಂಘರ್ಷದ ವೇಳೆ ಮತ್ತೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ.
ಕೋವಿಡ್-19 ವಿಷಯದಲ್ಲೂ ಕೊಂಕು
ದೇಶದಲ್ಲಿ ಕೋವಿಡ್-19 ಮರಣ ದರ ಅಧಿಕವಿರುವುದು ಗುಜರಾತ್‌ನಲ್ಲಿ. ಈ ವಿಷಯವನ್ನೇ ಆಧಾರವಾಗಿಟ್ಟುಕೊಂಡ ರಾಹುಲ್, “Gujarat Model exposed ‘ ”ಎಂದು ಟ್ವೀಟ್ ಮಾಡಿದ್ದು ಸಹ ಟೀಕೆಗೆ ಗುರಿಯಾಯಿತು. “ಸಾವಿನಲ್ಲೂ ರಾಜಕೀಯ ಮಾಡುವುದೇಕೆ? ಅದೇಕೆ ರಾಹುಲ್ ಮಹಾರಾಷ್ಟ್ರದ ಬಗ್ಗೆ ತುಟಿಪಿಟಕ್ ಅನ್ನುವುದಿಲ್ಲ? ಮಹಾರಾಷ್ಟ್ರದಲ್ಲಿ ತಮ್ಮ ಮೈತ್ರಿ ಸರಕಾರ ಅಧಿಕಾರದಲ್ಲಿ ಇದೆ ಎನ್ನುವ ಕಾರಣಕ್ಕಾಗಿಯೇ?” ಎಂದು ಅನೇಕ ಟ್ವೀಟಿಗರು ಪ್ರಶ್ನೆಯೆತ್ತಿದ್ದರು. ಇದಕ್ಕೂ ಮುನ್ನ, ಲಾಕ್‌ಡೌನ್ ಸಮಯದಲ್ಲಿ ಭಾರತದ ಕೊರೊನಾ ಪ್ರಮಾಣವನ್ನು ಸ್ಪೇನ್, ಇಟಲಿ, ಬ್ರಿಟನ್‌ಗೆ ಹೋಲಿಸಿದ್ದ ರಾಹುಲ್ “ಒಂದು ವಿಫಲ ಲಾಕ್‌ಡೌನ್ ಹೇಗೆ ಕಾಣಿಸುತ್ತದೋ ನೋಡಿ” ಎಂದು ಬರೆದಿದ್ದರು. ಆದರೆ 137 ಕೋಟಿ ಜನಸಂಖ್ಯೆಯ ರಾಷ್ಟ್ರವನ್ನು ಈ ಪುಟ್ಟ ಜನಸಂಖ್ಯೆಯ ದೇಶಗಳಿಗೆ ಹೋಲಿಸಿದ್ದಷ್ಟೇ ಅಲ್ಲದೇ, ಆ ರಾಷ್ಟ್ರಗಳಲ್ಲಿನ ಮರಣ ಪ್ರಮಾಣದ ಬಗ್ಗೆ ರಾಹುಲ್ ಏಕೆ ಮಾತನಾಡುವುದಿಲ್ಲ ಎನ್ನುವ ಪ್ರಶ್ನೆ ಎದುರಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.