CSK V/s SRH: ಚೆನ್ನೈ ಗೆಲುವಿನ ಉತ್ಸಾಹಕ್ಕೆ ಸ್ಟೋಕ್ಸ್ ಬಲ
Team Udayavani, Apr 21, 2023, 7:49 AM IST
ಚೆನ್ನೈ: ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಶುಕ್ರವಾರದ ಐಪಿಎಲ್ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಗಾಯದಿಂದ ಚೇತರಿಸಿಕೊಂಡಿರುವ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಶುಕ್ರವಾರದ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ. ಸ್ಟೋಕ್ಸ್ ಸೇರ್ಪಡೆಯ ಬಲದಿಂದ ಚೆನ್ನೈ ಗೆಲುವಿನ ಉತ್ಸಾಹದಲ್ಲಿದೆ.
ಕಾಲ್ಬೆ ರಳು ಗಾಯದಿಂದ ಬಳಲುತ್ತಿದ್ದ ಸ್ಟೋಕ್ಸ್ ಕಳೆದ ಮೂರು ಐಪಿಎಲ್ ಪಂದ್ಯಗಳಲ್ಲಿ ಆಡಿರಲಿಲ್ಲ. ಫಿಟ್‌ನೆಸ್‌ಗೆ ಮರಳಿದ ಬಳಿಕ ಅವರು ಬುಧವಾರ ನೆಟ್ ಅಭ್ಯಾಸ ನಡೆಸಿದ್ದು ಆಯ್ಕೆಗೆ ಲಭ್ಯವಿರುವುದನ್ನು ಖಚಿತಪಡಿಸಿದ್ದಾರೆ.
ಸ್ಟೋಕ್ಸ್ ಆಗಮನದಿಂದ ಚೆನ್ನೈಯ ಬ್ಯಾಟಿಂಗ್ ಶಕ್ತಿಗೆ ಇನ್ನಷ್ಟು ಬಲ ಬಂದಿದೆ. ತವರಿನಲ್ಲಿಯೇ ಈ ಪಂದ್ಯ ನಡೆಯುವ ಕಾರಣ ಆಟಗಾರರೆಲ್ಲರೂ ಸಿಡಿಯುವ ಸಾಧ್ಯತೆಯಿದೆ. ಆರ್‌ಸಿಬಿ ವಿರುದ್ಧದ ಈ ಹಿಂದಿನ ಪಂದ್ಯದಲ್ಲಿಯೂ ಚೆನ್ನೈ ಬೃಹತ್ ಮೊತ್ತ ಪೇರಿಸಿತ್ತು. ಆದರೆ ಆರ್‌ಸಿಬಿ ಸ್ಫೋಟಕವಾಗಿ ಆಡಿದ್ದರೂ ಅಂತಿಮವಾಗಿ ಅಲ್ಪ ಮೊತ್ತದಿಂದ ಸೋತಿತ್ತು. ಇದೇ ವೇಳೆ ಚೆನ್ನೈಯ ಎದುರಾಳಿ ಹೈದರಾಬಾದ್ ಈ ಹಿಂದಿನ ಪಂದ್ಯದಲ್ಲಿ ಮುಂಬೈಗೆ ಶರಣಾಗಿತ್ತು.
ಬ್ಯಾಟಿಂಗ್ ಬಲಿಷ್ಠ
ಚೆನ್ನೈಯ ಬ್ಯಾಟಿಂಗ್ ಬಲಿಷ್ಠವಾಗಿದೆ. ಸ್ಟೋಕ್ಸ್ ಸೇರ್ಪಡೆಯಿಂದ ಆನೆ ಬಲ ಬಂದಂತಾಗಿದೆ. ಅಗ್ರ ಕ್ರಮಾಂಕದಲ್ಲಿ ಡೇವನ್ ಕಾನ್ವೇ, ರುತುರಾಜ್ ಗಾಯಕ್ವಾಡ್ ಭರ್ಜರಿ ಆರಂಭ ಒದಗಿಸಿದ್ದರೆ ಹಿಟ್ಟರ್ ಶಿವಂ ದುಬೆ, ಅಜಿಂಕ್ಯ ರಹಾನೆ, ಧೋನಿ ಮತ್ತು ರವೀಂದ್ರ ಜಡೇಜ ಬಿರುಸಿನ ಬ್ಯಾಟಿಂಗ್ ನಡೆಸಲು ಸಮರ್ಥರಿದ್ದಾರೆ. ಚೆನ್ನೈಯ ಬೌಲರ್‌ಗಳ ನಿರ್ವಹಣೆ ಸ್ಥಿರವಾಗಿಲ್ಲ ಮತ್ತು ಫೀಲ್ಡಿಂಗ್ ನಿರೀಕ್ಷಿತ ಮಟ್ಟದಲ್ಲಿ ಇರದಿರುವುದು ಚಿಂತೆಯ ವಿಷಯವಾಗಿದೆ.
ಇನ್ನೊಂದು ಕಡೆ ಹೈದರಾಬಾದ್ ಕೂಡ ತನ್ನ ಬ್ಯಾಟಿಂಗ್ ಶಕ್ತಿಯನ್ನು ನಂಬಿಕೊಂಡಿದೆ. ನಾಯಕ ಐಡೆನ್ ಮಾರ್ಕ್ ರಮ್ ಸಹಿತ ಅಗ್ರ ಆಟಗಾರರು ಬ್ಯಾಟಿಂಗ್‌ನಲ್ಲಿ ಮಿಂಚಿ ದರೆ ಹೈದರಾಬಾದ್ ತಂಡ ಚೆನ್ನೈಯನ್ನು ಮಣಿಸುವ ಸಾಧ್ಯತೆಯಿದೆ. ಸ್ಫೋಟಕ ಖ್ಯಾತಿಯ ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಅಭಿಷೇಕ್ ಶರ್ಮ ಅವರಿಂದ ಉತ್ತಮ ಬ್ಯಾಟಿಂಗ್ ನಿರೀಕ್ಷಿಸಲಾಗಿದೆ.
ಈ ಹಿಂದಿನ ಪಂದ್ಯದಲ್ಲಿ ಪವರ್‌ಪ್ಲೇಯಲ್ಲಿ ಕೆಲವು ವಿಕೆಟ್ ಕಳೆದುಕೊಂಡಿರುವುದು ತಂಡಕ್ಕೆ ಹಿನ್ನೆಡೆ ಯಾಗಿತ್ತು. ಮಧ್ಯಮ ಕ್ರಮಾಂಕದ ಆಟಗಾರರು ಆಳವಾದ ಬ್ಯಾಟಿಂಗ್ ಪ್ರದರ್ಶಿಸಿ ಪಂದ್ಯವನ್ನು ಜಯದ ಕಡೆಗೆ ಕೊಂಡೊಯ್ಯಲು ಪ್ರಯತ್ನಿಸುವ ಅಗತ್ಯವಿದೆ ಎಂದು ತಂಡದ ಮುಖ್ಯ ಕೋಚ್ ಬ್ರ್ಯಾನ್ ಲಾರಾ ಹೇಳಿದ್ದಾರೆ.
ಸ್ಥಳೀಯ ಹೀರೋ ವಾಷಿಂಗ್ಟನ್ ಸುಂದರ್ ತವರು ಮೈದಾನದಲ್ಲಿ ಮಿಂಚು ಹರಿಸುವ ಉತ್ಸಾಹದಲ್ಲಿದ್ದಾರೆ. ಅವರ ಈ ಉತ್ಸಾಹಕ್ಕೆ ತಂಡದ ಇತರ ಆಟಗಾರರೆಲ್ಲರೂ ಬೆಂಬಲವಾಗಿ ನಿಂತರೆ ಹೈದರಾಬಾದ್ ಗೆಲುವಿನ ಸಂಭ್ರಮವನ್ನು ನಿರೀಕ್ಷಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.