Daily Dose: ಟಿಕೆಟ್ ಹೇಗೆ ಸಿಕ್ತು ಎನ್ನೋದೇ ಮುಖ್ಯವಲ್ಲ…
ಫಸ್ಟ್ ಡೇ ಫಸ್ಟ್ ಷೋ ನೋಡೋದಷ್ಟೇ ಮುಖ್ಯ
Team Udayavani, Apr 10, 2023, 7:44 AM IST
ತನ್ನ ಸ್ಟಾರ್ ಸಿನೆಮಾನಾ ಫಸ್ಟ್ ಡೇ ಫಸ್ಟ್ ಷೋ ನೇ ನೋಡಬೇಕೂ ಅಂತ ಈ ಸೀತಾರಾಮು ಬೆಳಗ್ಗೆ 7ಕ್ಕೇ ಹೋಗಿ ಥಿಯೇಟರ್‌ನಲ್ಲಿ ಸಾಲಿನಲ್ಲಿ ನಿಂತುಕೊಂಡಿದ್ದ. ಅಂದಾಜಿನಲ್ಲಿ ಹೇಳುವುದಾದರೆ ಇವನದ್ದು 45 ನೆ ನಂಬರ್ ಇರಬಹುದು.
ಥಿಯೇಟರ್‌ನಲ್ಲಿ 200 ಕ್ಕೂ ಹೆಚ್ಚು ಸೀಟುಗಳಿವೆ. ಸೀತಾರಾಮು ಸಿನಿಮಾದ ಪೋಸ್ಟರ್ ನೋಡ್ತಾ ನಿಂತ. ಒಂದು ಗಂಟೆಯ ಬಳಿಕ ಟಿಕೆಟ್ ಕೊಡಲಾರಂಭಿಸಿದರು. ಮಧ್ಯೆ ಪೊಲೀಸರೂ ಬಂದು ಸರದಿ ಸಾಲು ಸರಿ ಮಾಡುತ್ತಿದ್ದರು. ಅಂದಾಜು 20 ಟಿಕೆಟ್ ಕೊಟ್ಟಿರಬಹುದು, ಟಿಕೆಟ್ ಕ್ಲೋಸ್ ಎಂದರು. ಒಮ್ಮೆಲೆ ಜನರೆಲ್ಲ ಕೌಂಟರ್‌ಗೆ ಮುತ್ತಿಗೆ ಹಾಕಿ, ಕೊಟ್ಟಿದ್ದೇ 20 ಟಿಕೆಟ್, ಅಷ್ಟರಲ್ಲಿ ಹೇಗೆ ಕ್ಲೋಸ್, ಮೋಸ ಎಂದೆಲ್ಲ ದಬಾಯಿಸತೊಡಗಿದರು. ಇದನ್ನೆಲ್ಲ ಕಂಡ ಸೀತಾರಾಮು ಕಷ್ಟ ಎಂದುಕೊಂಡು ವಾಪಸು ಹೊರಟಾಗ ಊರಿನವನೇ ಮತ್ತೂಬ್ಬ ಥಿಯೇಟರ್ ಒಳಗೆ ನುಗ್ಗುತ್ತಿದ್ದ. “ಲೋ, ಎಷ್ಟೊತ್ತಿಗೆ ಬಂದೆಯೋ, ಎಲ್ಲಿ ಟಿಕೆಟ್ ಸಿಕ್ತು’ ಎಂದು ಕೇಳಿದ ಸೀತಾರಾಮು. “ಲೋ, ಬ್ಲಾಕ್‌ನಲ್ಲಿ ಟಿಕೆಟ್ ಸಿಗೋವಾಗ ಬೇಗ ಯಾಕೋ ಬರಬೇಕು? 50 ರೂ ಜಾಸ್ತಿ ಕೊಡಬೇಕಷ್ಟೇ’ ಎಂದ ನಿರಾಯಾಸವಾಗಿ.
ನಾವೆಲ್ಲ ಸೂರ್ಯ ಹುಟ್ಟೋ ಮೊದಲೇ ಕೆಲಸ ಬಿಟ್ಟು ನಮ್ಮ ಸ್ಟಾರ್ ನೋಡೋದಿಕ್ಕೆ ಬಂದ್ರೆ ಇವರದ್ದು ಈ ಕಳ್ಳಾಟ ಎಂದು ಮನೆಗೆ ಹೊರಟ.
ಇಲ್ಲಿ ಸಾಹೇಬ್ರು ಮನೆ ಮುಂದೆ ಜನ ಜಮಾಯಿಸಿದ್ದರು. ಅಭಿಮಾನಿಗಳಿಗೆ ನಾಯಕರು ತಮ್ಮ ಟಿಕೆಟ್ ಪ್ರಹಸನ ವಿವರಿಸಿ, “ಕೊನೆಗೂ ಟಿಕೆಟ್ ಗಿಟ್ಟಿಸಿಕೊಂಡೆ. ನನ್ನನ್ನು ಗೆಲ್ಲಿಸಲೇಬೇಕು. ಈಗ ಗೆಲ್ಸಿದ್ದರೆ ಮಂದಿನ ಎಲೆಕ್ಷನ್‌ನಲ್ಲಿ ಮತ್ತೆ ಟಿಕೆಟ್ ಕೊಡ್ತಾರೆ, ಆಗ ನಿಮಗೇ ಒಳ್ಳೆಯದಾಗುತ್ತದೆೆ’ ಎಂದರು. ಎನರು ಮುಖ ಮುಖ ನೋಡ್ಕೊಂಡರು.
ಈ ಗುಂಪಿನ ಮಧ್ಯೆ ಇಣುಕಿ ನೋಡಿದ ಸೀತಾರಾಮು ಪಕ್ಕದವರಲ್ಲಿ, “ಸ್ವಾಮಿ, ಇದೂ ಬ್ಲಾಕಾ? ಒರಿಜಿನಲಾ?’ ಎಂದು ಕೇಳಿದ.
ಸಾಹೇಬ್ರ ಭಾಷಣ ಜೋರಾಗಿತ್ತು- “ಟಿಕೆಟ್ ಯಾರು ಕೊಡಿಸಿದರು, ಹೇಗೆ ಸಿಕ್ತು ಎಲ್ಲ ಮುಖ್ಯವಲ್ಲ, ಟಿಕೆಟ್ ಗಿಟ್ಟಿಸಿಕೊಳ್ಳೋದು ಹಾಗೂ ಗೆಲ್ಲೋದಷ್ಟೇ ಮುಖ್ಯ’ ಎಂದರು. ಜನರೆಲ್ಲ ಜೋರಾಗಿ ಚಪ್ಪಾಳೆ ತಟ್ಟಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.