ಡೈಲಿ ಡೋಸ್: ಮತದಾರ ಪ್ರಬುದ್ಧ ; ಕೊಟ್ಟಿದ್ದನ್ನು ವಾಪಾಸು ಕೇಳಿಯೇ ಕೇಳುತ್ತಾನೆ
Team Udayavani, Mar 11, 2023, 7:25 AM IST
ಹಲವು ಬಾರಿ ಪ್ರತಿ ಕ್ಷೇತ್ರದಲ್ಲೂ ಕೆಲವು ಯೋಜನೆಗಳ ಕಡತಗಳಿಗೂ ಸುವರ್ಣ ವರ್ಷದ ದುಃಖಾಚರಣೆಯ ಹೊತ್ತಾಗಿರುತ್ತದೆ. ಈ ಮಾತು ಚುನಾವಣಾ ಸ್ಥಳೀಯ ಪ್ರಣಾಳಿಕೆಗೂ ಅನ್ವಯವಾಗುತ್ತದೆ. ಕೆಲವೊಮ್ಮೆ ಪೂರ್ಣ ಬಹುಮತದೊಂದಿಗೆ ಸರಕಾರಗಳು ಬಂದು, ಸ್ಥಳೀಯವಾಗಿಯೂ ಅದೇ ಪಕ್ಷಗಳ ಶಾಸಕ ರಿದ್ದಾಗಲೂ ಆ ಯೋಜನೆಗಳಿಗೆ ಮುಕ್ತಿ ಸಿಗುವು ದಿಲ್ಲ. ಇದು ಅನೂಚಾನವಾಗಿ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ನಡೆದು ಬಂದಿರುವ ಸಂಗತಿ. ಹಾಗಾಗಿ ಅನುಷ್ಠಾನಕ್ಕೆ ವರ್ಷಗಳು ಕಳೆದು, ಜನರು ಸಮಸ್ಯೆ ಅನುಭವಿಸುತ್ತಾರೆ.
ಇಂತಹ ಅನೇಕ ಯೋಜನೆಗಳು ಎಲ್ಲ ಜಿಲ್ಲೆ ಗಳಲ್ಲೂ ಇವೆ, ನಮ್ಮಲ್ಲೂ ಇವೆ. ತಾಂತ್ರಿಕ ಕಾರಣದ ನೆಪವೊಡ್ಡಿ ಯೋಜನೆಯನ್ನೇ ಮೂಲೆಗುಂಪು ಮಾಡುವುದೂ ಇದೆ. ಇನ್ನು ಕೆಲವು ಚುನಾವಣೆ ಸಂದರ್ಭದಲ್ಲಿ ವೇಗ ಸಿಕ್ಕು, ಶಿಲಾನ್ಯಾಸವಾಗಿ ಬಿಡುತ್ತವೆ. ಆದರೆ ಅವುಗಳ ಭವಿಷ್ಯ ನಿರ್ಧ ರಿಸುವುದು ಅನಂತರದ ಅವಧಿಯಲ್ಲಿ ಬರುವ ಪಕ್ಷ, ಸರಕಾರ ಹಾಗೂ ಪ್ರತಿನಿಧಿಗಳು. ಅದರಿಂದಲೇ ನಮ್ಮಲ್ಲಿ ಎಷ್ಟೋ ಯೋಜನೆಗಳು ಕಡತದಲ್ಲೇ ಸಂಭ್ರಮಾಚರಣೆಯನ್ನು ಅನುಸರಿಸುವಂತಾಗಿದೆ.
ರಸ್ತೆ, ನೀರು, ಸಂಪರ್ಕ ಸೇತುವೆ, ಒಳಚರಂಡಿ ನಿರ್ಮಾಣ, ನದಿದಂಡೆ ನಿರ್ಮಾಣ, ಕಡಲ್ಕೊರೆತ ತಡೆ ಹತ್ತಾರು ಯೋಜನೆಗಳನ್ನು ಪಟ್ಟಿ ಮಾಡಬಹುದು. ಇವು ಚುನಾವಣೆಯಲ್ಲಿ ಆಶ್ವಾಸನೆಯಷ್ಟೇ ಎನಿಸಿಬಿಡುತ್ತವೆ. ಹೀಗಾಗುವುದಕ್ಕೆ ಮೂರೇ ಕಾರಣಗಳು. ಒಂದು ಆ ಯೋಜನೆಯ ಕಾರ್ಯ ಸಾಧ್ಯತೆ ಬಗ್ಗೆ ಸಮರ್ಪಕವಾಗಿ ಯೋಚಿಸದೇ ಘೋಷಿಸಿಬಿಡುವುದು. ಬಳಿಕ ತಾಂತ್ರಿಕವಾಗಿ ಅಪ್ರಯೋಜಯಕ ಎಂದಾಗ ಸುಮ್ಮನಾಗುವುದು, ಎರಡನೆಯದಾಗಿ ಇಚ್ಛಾಶಕ್ತಿಯ ಕೊರತೆ ಹಾಗೂ ಆ ಯೋಜನೆ ಆದ್ಯತೆಯ ಪಟ್ಟಿಯಲ್ಲಿ ಇಲ್ಲದಿ ರುವುದು. ಮೂರನೆಯದಾಗಿ ಸರಕಾರಗಳು ಬದ ಲಾದಾಗ, ಪಕ್ಷಗಳೂ ಬದಲಾದಾಗ ಆ ಪಕ್ಷದ ಯೋಜನೆ ನಾವೇಕೆ ಜಾರಿಗೊಳಿಸಬೇಕು ಎಂದು ಕಡೆಗಣಿಸವುದು. ಇದಕ್ಕೆ ಎಂದಾದರೂ ಒಂದು ದಿನ ಮುಕ್ತಿ ಸಿಗಲೇಬೇಕು, ಆದ ಇನ ಇಂದೇ ಆಗಲಿ.
ಕೊನೆಯ ಡೋಸ್ ಎಂದರೆ, ಯೋಜನೆಗಳು ಘೋಷಣೆಗೆ ಸೀಮಿತವಾಗದೇ ನಿರ್ದಿಷ್ಟ ಕಾಲ ಮಿತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವೂ ಆಗಬೇಕು. ಇದರಿಂದ ಮಾತ್ರ ಜನ ಮನ್ನಣೆ ಗಳಿಸಲು ಸಾಧ್ಯ. ಮತದಾರರು ಪ್ರಬುದ್ಧರು, ಒಂದು ದಿನ “ಕೊಟ್ಟದ್ದನ್ನು” ವಾಪಸು ಕೇಳಿಯೇ ಕೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.