ಟೀಕಿಸಿದ ಕ್ರಿಕೆಟ್ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವ ಅರ್ಪಿಸಿದ ದೀಪಕ್ ಚಹರ್ !
Team Udayavani, Apr 18, 2021, 6:55 AM IST
ಮುಂಬಯಿ: ಚೆನ್ನೈ ತಂಡದ ಮಧ್ಯಮ ವೇಗಿ ದೀಪಕ್ ಚಹರ್ ತಮ್ಮ ಪಂದ್ಯಶ್ರೇಷ್ಠ ಗೌರವವನ್ನು ಟೀಕಿಸಿದ ಕ್ರಿಕೆಟ್ ಅಭಿಮಾನಿಯೊಬ್ಬರಿಗೆ ಅರ್ಪಿಸಿದ್ದಾರೆ!
ಶುಕ್ರವಾರದ ಪಂದ್ಯದಲ್ಲಿ ಚಹರ್ 13ಕ್ಕೆ 4 ವಿಕೆಟ್ ಉಡಾಯಿಸಿ ಪಂಜಾಬ್ ತಂಡವನ್ನು ಅಲ್ಪ ಮೊತ್ತಕ್ಕೆ ಕುಸಿಯುವಂತೆ ಮಾಡಿದ್ದರು. ಇದರಲ್ಲಿ 3 ವಿಕೆಟ್‌ಗಳನ್ನು ಪವರ್ ಪ್ಲೇ ಆವಧಿಯಲ್ಲೇ ಉಡಾಯಿಸಿದ್ದರು. ಅಗರ್ವಾಲ್, ಗೇಲ್ ಮತ್ತು ಪೂರಣ್ ಅವರ ಬಿಗ್ ವಿಕೆಟ್ ಇದರಲ್ಲಿ ಸೇರಿತ್ತು. ಒಂದು ಮೇಡನ್ ಓವರ್ ಸೇರಿದಂತೆ ಒಟ್ಟು 18 ಡಾಟ್ ಬಾಲ್ ಎಸೆದದ್ದು ಚಹರ್ ಸಾಧನೆ.
ಪಂದ್ಯದ ಬಳಿಕ ತಂಡದ ಸಹ ಆಟಗಾರ ಶಾರ್ದೂಲ್ ಠಾಕೂರ್ ಜತೆ ನಡೆಸಿದ ಚಾಟ್ ಶೋ ಒಂದರ ವೇಳೆ ದೀಪಕ್ ಚಹರ್ ಸ್ವಾರಸ್ಯಕರ ಘಟನೆಯೊಂದನ್ನು ಹೇಳಿದರು.
ಸಾಮಾನ್ಯವಾಗಿ ಚಹರ್ ಕ್ರಿಕೆಟ್ ಅಭಿಮಾನಿಗಳು ಕಳುಹಿಸುವ ಪ್ರತಿಯೊಂದು ಸಂದೇಶವನ್ನೂ ಓದುತ್ತಾರೆ. ಡೆಲ್ಲಿ ಎದುರಿನ ಮೊದಲ ಪಂದ್ಯದಲ್ಲಿ ವಿಕೆಟ್ ಉರುಳಿಸಲು ವಿಫಲರಾದಾಗ ಅಭಿಮಾನಿಯೊಬ್ಬ ವ್ಯಂಗ್ಯ ಧಾಟಿಯಲ್ಲಿ ಮೆಸೇಜ್ ಹಾಕಿದ್ದ.
“ನೀವು ಅತ್ಯುತ್ತಮ ಬೌಲರ್ ನಿಜ. ಆದರೆ ನನ್ನ ಕೋರಿಕೆ ಏನೆಂದರೆ, ದಯವಿಟ್ಟು ನೀವು ಮುಂದಿನ ಪಂದ್ಯದಲ್ಲಿ ಆಡಬೇಡಿ’ ಎಂದಿದ್ದ. ಚಹರ್ ಈ ಅಭಿಮಾನಿಗೆ ಪಂದ್ಯಶ್ರೇಷ್ಠ ಗೌರವವನ್ನು ಅರ್ಪಿಸಿದ್ದಾರೆ!
“ಒಬ್ಬ ಆಟಗಾರನ ವೈಫಲ್ಯವನ್ನು ಟೀಕಿಸುವ ಬದಲು ಆತನನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು’ ಎಂದೂ ದೀಪಕ್ ಚಹರ್ ಈ ಸಂದರ್ಭದಲ್ಲಿ ವಿನಂತಿಸಿಕೊಂಡರು.
ಕಪ್ತಾನ ಧೋನಿ ಪ್ರಶಂಸೆ
ದೀಪಕ್ ಚಹರ್ ಸಾಧನೆಯನ್ನು ನಾಯಕ ಎಂ.ಎಸ್. ಧೋನಿ ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. “ಚಹರ್ ಅತ್ಯುತ್ತಮ ಡೆತ್ ಓವರ್ ಬೌಲರ್ ಆಗಿ ರೂಪುಗೊಳ್ಳುತ್ತಿದ್ದಾರೆ. ಆದರೆ ಇಲ್ಲಿ ಅವರಿಗೆ ಪಿಚ್ ಬಹಳ ಸಹಕರಿಸುತ್ತಿದ್ದುದರಿಂದ ಆರಂಭದಲ್ಲೇ ಸತತ 4 ಓವರ್ ನೀಡಲು ನಿರ್ಧರಿಸಲಾಯಿತು. ಚಹರ್ ಇದರ ಭರಪೂರ ಲಾಭವೆತ್ತಿದರು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.