ಸೋಲು ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧದ ಜನಾಭಿಪ್ರಾಯವಲ್ಲ: ಬಿಜೆಪಿ
Team Udayavani, Dec 30, 2021, 4:58 PM IST
ಬೆಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಫಲಿತಾಂಶ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧದ ಜನಾಭಿಪ್ರಾಯ ಎಂದು ಪರಿಗಣಿಸುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ಬಿಜೆಪಿ ಹೇಳಿದೆ.
ಹಲವು ಪ್ರಭಾವಿ ಬಿಜೆಪಿ ನಾಯಕರು, ಸಚಿವರು ಪ್ರತಿನಿಧಿಸುವಲ್ಲೇ ಬಿಜೆಪಿಗೆ ಸೋಲಾಗಿದ್ದು,ಈ ಬಗ್ಗೆ ಸ್ಥಳೀಯ ಕಾರಣದಿಂದಾಗಿ ಪಕ್ಷಕ್ಕೆ ಸೋಲಾಗಿದೆ ಹೊರತು, ಸಚಿವರು ಮತ್ತು ಶಾಸಕರು ಪಕ್ಷದ ಪರವಾಗಿ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ.
2015ರಲ್ಲಿ 48 ಸ್ಥಳೀಯ ಸಂಸ್ಥೆಗಳಲ್ಲಿ ಗೆದ್ದಿದ್ದ ಪಕ್ಷ 2021ರಲ್ಲಿ 71ರಲ್ಲಿ ಗೆಲುವು ಸಾಧಿಸಿ 23 ಹೆಚ್ಚುವರಿ ಸ್ಥಳೀಯ ಸಂಸ್ಥೆಗಳನ್ನು ಗೆದ್ದಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಕಳೆದ 2 ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿ ನಿರಂತರವಾಗಿ ಜಯ ಸಾಧಿಸಿದ್ದು, ಒಂದೆರಡು ನಗರಸಭೆ, ಪಟ್ಟಣ ಪಂಚಾಯತಿಯ ಸೋಲು ಪಕ್ಷಕ್ಕೆ ಹಿನ್ನಡೆ ಎಂದು ವಿಶ್ಲೇಷಿಸಲಾಗದು. ಹಿನ್ನಡೆ ಆದಲ್ಲಿ ಪಕ್ಷ ಇನ್ನಷ್ಟು ಸಂಘಟನಾತ್ಮಕ ಕೆಲಸಕ್ಕೆ ಒಟ್ಟು ಕೊಡಲಿದ್ದು, ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಶಾಸಕರೇ ಆಯ್ಕೆಯಾಗುವಂತೆ ನೋಡಿಕೊಳ್ಳಲಿದ್ದೇವೆ ಎಂದು ಪ್ರಕಟಣೆಯಲ್ಲಿ ಹೇಳಿದೆ.
ಈ ಫಲಿತಾಂಶ ಮುಂಬರುವ ತಾ.ಪಂ, ಜಿ.ಪಂ. ಚುನಾವಣೆಯ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಮತ್ತು ಇದು ಮಾನದಂಡವೂ ಅಲ್ಲ. ಹಿನ್ನಡೆಯಾದಲ್ಲಿ ಅವಲೋಕನ ಸಭೆ ನಡೆಸಿ ಮುಂಬರುವ ಚುನಾವಣೆಗೆ ಪಕ್ಷವನ್ನು ಸನ್ನದ್ಧ ಗೊಳಿಸುತ್ತೇವೆ ಎಂದು ಬಿಜೆಪಿ ಹೇಳಿದೆ.
ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತ್ ಗಳಲ್ಲಿ ಆಡಳಿತಾರೂಢ ಬಿಜೆಪಿ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಸಂಭ್ರಮಿಸಿದೆ. ಹಲವೆಡೆ ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ.
ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ 194 ಕಾಂಗ್ರೆಸ್ 236 ಜೆಡಿಎಸ್ 12 ಇತರರು 135 ಸ್ಥಾನಗಳನ್ನು ಗೆದ್ದಿದ್ದಾರೆ. ಪುರಸಭೆಯಲ್ಲಿ ಬಿಜೆಪಿ 176 ಕಾಂಗ್ರೆಸ್ 201 ಜೆಡಿಎಸ್ 21 ಇತರರು 43 ಸ್ಥಾನಗಳನ್ನು ಗೆದ್ದಿದ್ದಾರೆ.ನಗರಸಭೆಯಲ್ಲಿ ಬಿಜೆಪಿ 67 ಕಾಂಗ್ರೆಸ್ 61 ಜೆಡಿಎಸ್ 12 ಇತರರು 26 ಸ್ಥಾನಗಳನ್ನು ಗೆದ್ದಿದ್ದಾರೆ.
ಒಟ್ಟು 1,184 ಸ್ಥಾನಗಳ ಪೈಕಿ ಬಿಜೆಪಿ 437 ಕಾಂಗ್ರೆಸ್ 498 ಜೆಡಿಎಸ್ 45 ಇತರರು 204 ಸ್ಥಾನಗಳನ್ನು ಗೆದ್ದಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.