ವಿಳಂಬ ರಿಟರ್ನ್ಸ್ ದಂಡ ವಿನಾಯಿತಿ
Team Udayavani, Jun 13, 2020, 6:40 AM IST
ಹೊಸದಿಲ್ಲಿ: ಕಳೆದ ಮೂರು ವರ್ಷಗಳಿಂದ ಜಿಎಸ್‌ಟಿ ಪಾವತಿಸದ ಉದ್ಯಮಗಳಿಗೆ ಕೇಂದ್ರ ಸರಕಾರ ವಿನಾಯಿತಿಯ ನೆಮ್ಮದಿ ನೀಡಿದೆ.
2017ರ ಜುಲೈಯಿಂದ 2020ರ ಜನವರಿ ವರೆಗಿನ ಅವಧಿಯಲ್ಲಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸದವರು ಇದೇ ಜು.1ರಿಂದ ಆ.30ರ ವರೆಗೆ ಸಲ್ಲಿಸಬಹುದು. ಇವರಿಗೆ ಲೇಟ್ ರಿಟರ್ನ್ಸ್ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಬಾಕಿ ತೆರಿಗೆ ಮೇಲಿನ ಬಡ್ಡಿಯನ್ನೂ ಮನ್ನಾ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 40ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜಿಎಸ್‌ಟಿ ಏರಿಕೆ ಪ್ರಸ್ತಾವವನ್ನೂ ಮುಂದೂಡಲಾಗಿದೆ.
2017ರ ಜುಲೈಯಿಂದ 2020ರ ಜನವರಿಯ ವರೆಗೆ ರಿಟರ್ನ್ಸ್ ಸಲ್ಲಿಸದವರಿಗೆ ದಂಡದಿಂದ ವಿನಾಯಿತಿ ಸಿಗಲಿದೆ. ಜತೆಗೆ “ಜಿಎಸ್‌ಟಿಆರ್- 3ಬಿ’ ಮೂಲಕ ರಿಟರ್ನ್ಸ್ ಸಲ್ಲಿಸದವರಿಗೆ ವಿಧಿಸಲಾಗುವ ದಂಡವನ್ನು ಗರಿಷ್ಠ 500 ರೂ.ಗೆ ಮಿತಗೊಳಿಸಲಾಗಿದೆ.
ದಂಡ ಪ್ರಮಾಣ ಇಳಿಕೆ
ತೆರಿಗೆ ಸಲ್ಲಿಸದಿರುವ ವಾರ್ಷಿಕ 5 ಕೋಟಿ ರೂ. ವಹಿವಾಟಿನ ಕಂಪೆನಿಗಳಿಗೂ ಹೊಸ ಅವಕಾಶ ಕಲ್ಪಿಸಲಾಗಿದೆ. ಫೆಬ್ರವರಿ, ಮಾರ್ಚ್, ಎಪ್ರಿಲ್‌ನಲ್ಲಿ ರಿಟರ್ನ್ಸ್ ಸಲ್ಲಿಸದ ಇಂಥ ಕಂಪೆನಿಗಳು ಸೆ. 30ರೊಳಗೆ ರಿಟರ್ನ್ಸ್ ಸಲ್ಲಿಸಿದರೆ ವಿಧಿಸುವ “ಲೇಟ್ ರಿಟರ್ನ್ಸ್’ ದಂಡವನ್ನು ಶೇ. 18ರಿಂದ ಶೇ. 9ಕ್ಕೆ ಇಳಿಸಲಾಗಿದೆ. ಜು. 31ರ ವರೆಗೆ ರದ್ದಾಗಿದ್ದ ಜಿಎಸ್‌ಟಿ ನೋಂದಣಿ ರೆಸ್ಟೋರೇಶನ್‌ಗೆಮರು ಚಾಲನೆ ನೀಡಲಾಗಿದ್ದು, ಅರ್ಜಿ ಸಲ್ಲಿಕೆಗೆ ಸೆ. 30ರ ವರೆಗೆ ಅವಕಾಶ ಇದೆ.
ಜಿಎಸ್‌ಟಿ ಪರಿಹಾರ: ಪ್ರತ್ಯೇಕ ಸಭೆ
ಕೇಂದ್ರದಿಂದ ರಾಜ್ಯಗಳಿಗೆ ಮರು ವಿತರಣೆ ಯಾಗಬೇಕಿರುವ ಜಿಎಸ್‌ಟಿ ಪರಿಹಾರ ಧನ ಬಗ್ಗೆ ತೀರ್ಮಾನಿಸಲು ಜುಲೈಯಲ್ಲಿ ಪ್ರತ್ಯೇಕ ಸಭೆ ನಡೆಯಲಿದೆ ಎಂದು ಸಚಿವೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.