ಧವನ್ – ಪೃಥ್ವಿ ಶಾ ಪ್ರಚಂಡ ಬ್ಯಾಟಿಂಗ್ ಪರಾಕ್ರಮ ; ಡೆಲ್ಲಿ ಜಯಭೇರಿ
Team Udayavani, Apr 10, 2021, 11:29 PM IST
ಮುಂಬಯಿ: ಶಿಖರ್ ಧವನ್ ಮತ್ತು ಪೃಥ್ವಿ ಶಾ ಜೋಡಿಯ ಪ್ರಚಂಡ ಬ್ಯಾಟಿಂಗ್ ಪರಾಕ್ರಮದಿಂದ ಕಳೆದ ಬಾರಿಯ ರನ್ನರ್ ಅಪ್ ಡೆಲ್ಲಿ ಕ್ಯಾಪಿಟಲ್ಸ್ 2021ರ ಐಪಿಎಲ್‌ನಲ್ಲಿ ಅಮೋಘ ಆರಂಭ ಪಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಶನಿವಾರದ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದು ಮೆರೆದಾಡಿದೆ.
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಚೆನ್ನೈ 7 ವಿಕೆಟಿಗೆ 188 ರನ್ ಪೇರಿಸಿ ಸವಾಲೊಡ್ಡಿದರೆ, ಡೆಲ್ಲಿ 18.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 190 ರನ್ ಬಾರಿಸಿತು.
ಶಿಖರ್ ಧವನ್- ಪೃಥ್ವಿ ಶಾ ಚೆನ್ನೈ ಸೂಪರ್‌ಕಿಂಗ್ಸ್ ಬೌಲಿಂಗ್ ದಾಳಿಯನ್ನು ನಿರ್ದಯವಾಗಿ ದಂಡಿಸುತ್ತ ಸಾಗಿ 13.3 ಓವರ್‌ಗಳಲ್ಲಿ 138 ರನ್ ಪೇರಿಸಿದರು. ಧವನ್ 54 ಎಸೆತಗಳಿಂದ 85 ರನ್ ಸಿಡಿಸಿದರೆ (10 ಬೌಂಡರಿ, 2 ಸಿಕ್ಸರ್), ಶಾ ಕೇವಲ 38 ಎಸೆತಗಳಿಂದ 72 ರನ್ ಬಾರಿಸಿದರು (9 ಫೋರ್, 3 ಸಿಕ್ಸರ್). ಈ ಆರ್ಭಟದ ವೇಳೆ ಧವನ್ ಚೆನ್ನೈ ವಿರುದ್ಧ ಅತ್ಯಧಿಕ 909 ರನ್ ಪೇರಿಸಿದ ದಾಖಲೆ ಸ್ಥಾಪಿಸಿದರು.
ಶಾದೂìಲ್ ಠಾಕೂರ್ ಎಸೆತವನ್ನು ಬೌಂಡರಿಗೆ ಬಡಿದಟ್ಟುವ ಮೂಲಕ ರಿಷಭ್ ಪಂತ್ ಡೆಲ್ಲಿ ಗೆಲುವನ್ನು ಸಾರಿದರು; ತಮ್ಮ ನಾಯಕತ್ವದ ಮೊದಲ ಐಪಿಎಲ್ ಪಂದ್ಯದಲ್ಲೇ ಗೆಲುವಿನ ಸವಿ ಅನುಭವಿಸಿದರು.
ಮಿಂಚಿದ ರೈನಾ
ಚೆನ್ನೈ ಸರದಿಯಲ್ಲಿ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಅವರ ಭರ್ಜರಿ ಪುನರಾಗಮನ ಗಮನ ಸೆಳೆಯಿತು. ಮೊಯಿನ್ ಅಲಿ ಮತ್ತು ಸ್ಯಾಮ್ ಕರನ್ ಕೂಡ ತಂಡದ ಸವಾಲಿನ ಮೊತ್ತದಲ್ಲಿ ಗಮನಾರ್ಹ ಕೊಡುಗೆ ಸಲ್ಲಿಸಿದರು.
ಸುರೇಶ್ ರೈನಾ ಅವರ ಬ್ಯಾಟಿಂಗ್ ಆರ್ಭಟ ಕಂಡಾಗ ಅವರು ಒಂದು ಐಪಿಎಲ್‌ನಿಂದ ಹೊರಗಿದ್ದರು ಎಂಬುದನ್ನು ಊಹಿಸಲೂ ಸಾಧ್ಯವಿರಲಿಲ್ಲ. ಸ್ಟೋಯಿನಿಸ್ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟಿದ ರೈನಾ, ಈ ಋತುವಿನ ಮೊದಲ ಅರ್ಧ ಶತಕದ ಸಂಭ್ರಮವನ್ನು ಆಚರಿಸಿದರು. 36 ಎಸೆತ ಎದುರಿಸಿದ ರೈನಾ ಕೊಡುಗೆ 54 ರನ್ (3 ಬೌಂಡರಿ, 4 ಸಿಕ್ಸರ್).
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಚೆನ್ನೈ ಪವರ್ ಪ್ಲೇ ಅವಧಿಯಲ್ಲೇ ಆರಂಭಿಕರಾದ ಫಾ ಡು ಪ್ಲೆಸಿಸ್ (0) ಮತ್ತು ಋತುರಾಜ್ ಗಾಯಕ್ವಾಡ್ (5) ಅವರನ್ನು ಅಗ್ಗಕ್ಕೆ ಕಳೆದುಕೊಂಡಿತು. ಆವೇಶ್ ಖಾನ್ ತಮ್ಮ ಮೊದಲ ಓವರ್‌ನಲ್ಲೇ ಆವೇಶ ತೋರಿ ಡು ಪ್ಲೆಸಿಸ್ ಅವರನ್ನು ಲೆಗ್ ಬಿಫೋರ್ ಬಲೆಗೆ ಬೀಳಿಸಿದರು. ಗಾಯಕ್ವಾಡ್ ವಿಕೆಟ್ ವೋಕ್ಸ್ ಪಾಲಾಯಿತು. ಆಗ ಸ್ಕೋರ್ ಕೇವಲ 7 ರನ್ ಆಗಿತ್ತು.
ವನ್‌ಡೌನ್‌ನಲ್ಲಿ ಬಂದ ಮೊಯಿನ್ ಅಲಿ ಮುನ್ನುಗ್ಗಿ ಬೀಸತೊಡಗಿದರು. ರೈನಾ ಉತ್ತಮ ಲಯದಲ್ಲಿ ಸಾಗಿದರು. 3ನೇ ವಿಕೆಟಿಗೆ 6.2 ಓವರ್‌ಗಳಿಂದ 53 ರನ್ ಒಟ್ಟುಗೂಡಿತು. ಸ್ಕೋರ್ 70ಕ್ಕೆ ಏರಿದಾಗ ಅಶ್ವಿನ್ ಅವರ ಸ್ಪಿನ್ ಮೋಡಿಗೆ ಸಿಲುಕಿದ ಅಲಿ ವಿಕೆಟ್ ಕೈಚೆಲ್ಲಿದರು. ಅಲಿ ಗಳಿಕೆ 24 ಎಸೆತಗಳಿಂದ 36 ರನ್ (4 ಫೋರ್, 2 ಸಿಕ್ಸರ್). ಆ ಓವರ್‌ನಲ್ಲಿ ಅಶ್ವಿನ್ 3 ಸಿಕ್ಸರ್ ನೀಡಿ ಬಹಳ ದುಬಾರಿಯಾಗಿದ್ದರು. ಅವರ 4 ಓವರ್‌ಗಳಿಂದ 47 ರನ್ ಸೋರಿ ಹೋಯಿತು.
ಪವರ್ ಪ್ಲೇ ವೇಳೆ ಚೆನ್ನೈ 2 ವಿಕೆಟಿಗೆ ಕೇವಲ 33 ರನ್ ಮಾಡಿದರೆ, 10 ಓವರ್ ಅಂತ್ಯಕ್ಕೆ 3ಕ್ಕೆ 77 ರನ್ ಗಳಿಸಿತ್ತು. ರೈನಾ-ರಾಯುಡು ಜತೆಗೂಡಿದ ಬಳಿಕ ಚೆನ್ನೈ ಬ್ಯಾಟಿಂಗ್ ಬಿರುಸು ಪಡೆಯತೊಡಗಿತು. 4ನೇ ವಿಕೆಟಿಗೆ 33 ಎಸೆತಗಳಿಂದ 63 ರನ್ ಹರಿದು ಬಂತು. ರಾಯುಡು 16 ಎಸೆತ ಎದುರಿಸಿ 23 ರನ್ ಮಾಡಿದರು (1 ಫೋರ್, 2 ಸಿಕ್ಸರ್).
ರೈನಾ ರನೌಟಾದ ಬೆನ್ನಲ್ಲೇ ಧೋನಿ ಸೊನ್ನೆಗೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ ಸ್ಯಾಮ್ ಕರನ್ ಸಿಡಿದು ನಿಂತರು. ಸೋದರ ಟಾಮ್ ಕರನ್‌ಗೂ ಬಿಸಿ ಮುಟ್ಟಿಸಿದರು. ಅಂತಿಮ ಎಸೆತದಲ್ಲಿ ಔಟಾದ ಕರನ್ ಗಳಿಕೆ 15 ಎಸೆತಗಳಿಂದ 34 ರನ್ (4 ಬೌಂಡರಿ, 2 ಸಿಕ್ಸರ್). ಜಡೇಜ ಅಜೇಯ 26 ರನ್ ಮಾಡಿದರು.
ಸ್ಕೋರ್ ಪಟ್ಟಿ
ಚೆನ್ನೈ ಸೂಪರ್‌ಕಿಂಗ್ಸ್
ಗಾಯಕ್ವಾಡ್ ಸಿ ಧವನ್ ಬಿ ವೋಕ್ಸ್ 5
ಫಾ ಡು ಪ್ಲೆಸಿಸ್ ಎಲ್‌ಬಿಡಬ್ಯು ಬಿ ಆವೇಶ್ 0
ಮೊಯಿನ್ ಅಲಿ ಸಿ ಧವನ್ ಬಿ ಅಶ್ವಿನ್ 36
ಸುರೇಶ್ ರೈನಾ ರನೌಟ್ 54
ರಾಯುಡು ಸಿ ಧವನ್ ಬಿ ಟಾಮ್ 23
ರವೀಂದ್ರ ಜಡೇಜ ಔಟಾಗದೆ 26
ಎಂ. ಎಸ್. ಧೋನಿ ಬಿ ಅವೇಶ್ 0
ಸ್ಯಾಮ್ ಕರನ್ ಬಿ ವೋಕ್ಸ್ 34
ಇತರ 10
ಒಟ್ಟು (7 ವಿಕೆಟಿಗೆ) 188
ವಿಕೆಟ್ ಪತನ: 1-7, 2-7, 3-60, 4-123, 5-137, 6-137, 7-188.
ಬೌಲಿಂಗ್
ಕ್ರಿಸ್ ವೋಕ್ಸ್ 3-0-18-2
ಆವೇಶ್ ಖಾನ್ 4-0-23-2
ಆರ್. ಅಶ್ವಿನ್ 4-0-47-1
ಟಾಮ್ ಕರನ್ 4-0-40-1
ಅಮಿತ್ ಮಿಶ್ರಾ 3-0-27-0
ಮಾರ್ಕಸ್ ಸ್ಟೋಯಿನಿಸ್ 2-0-26-0
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಸಿ ಅಲಿ ಬಿ ಬ್ರಾವೊ 72
ಶಿಖರ್ ಧವನ್ ಎಲ್‌ಬಿಡಬ್ಲ್ಯು ಬಿ ಶಾದೂìಲ್ 85
ರಿಷಭ್ ಪಂತ್ ಔಟಾಗದೆ 15
ಸ್ಟೋಯಿನಿಸ್ ಸಿ ಸ್ಯಾಮ್ ಬಿ ಶಾದೂìಲ್ 14
ಹೆಟ್‌ಮೈರ್ ಔಟಾಗದೆ 0
ಇತರ 4
ಒಟ್ಟು(18.4 ಓವರ್‌ಗಳಲ್ಲಿ 3 ವಿಕೆಟಿಗೆ) 190
ವಿಕೆಟ್ ಪತನ: 1-138, 2-167, 3-186.
ಬೌಲಿಂಗ್:
ದೀಪಕ್ ಚಹರ್ 4-0-36-0
ಸ್ಯಾಮ್ ಕರನ್ 2-0-24-0
ಶಾದೂìಲ್ ಠಾಕೂರ್ 3.4-0-53-2
ರವೀಂದ್ರ ಜಡೇಜ 2-0-16-0
ಮೊಯಿನ್ ಅಲಿ 3-0-33-0
ಡ್ವೇನ್ ಬ್ರಾವೊ 4-0-28-1
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Cricket; ಮಹಿಳಾ ಅಂಡರ್-19 ಏಕದಿನ ಟ್ರೋಫಿ: ಅಸ್ಸಾಂ ವಿರುದ್ಧ ಕರ್ನಾಟಕಕ್ಕೆ ಜಯ
NZ vs SL: ಮಳೆ ಪಂದ್ಯದಲ್ಲಿ ಎಡವಿದ ಲಂಕಾ ; ಏಕದಿನ ಸರಣಿ ಗೆದ್ದ ನ್ಯೂಜಿಲ್ಯಾಂಡ್
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.