ಎಂಸಿಡಿಯಲ್ಲಿ ಮುಂದುವರಿದ ಆಪ್ ಮತ್ತು ಬಿಜೆಪಿ ಕದನ ; ಹೊಡೆದಾಟ
Team Udayavani, Feb 24, 2023, 8:03 PM IST
ನವದೆಹಲಿ : ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲು ರೋಚಕ ಕದನವು ಶುಕ್ರವಾರ ದೆಹಲಿ ಮಹಾನಗರಪಾಲಿಕೆಯಲ್ಲಿ ಗದ್ದಲಕ್ಕೆ ಕಾರಣವಾಗಿ ಎಎಪಿ ಮತ್ತು ಬಿಜೆಪಿ ಕೌನ್ಸಿಲರ್‌ಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಸದನದಲ್ಲಿ ಇದು ಮೂರನೇ ದಿನವೂ ಗದ್ದಲ ನಡೆದಿದ್ದು, ಹೊಸದಾಗಿ ಆಯ್ಕೆಯಾದ ಮೇಯರ್ ಶೆಲ್ಲಿ ಒಬೆರಾಯ್ ಅವರು ಸ್ಥಾಯಿ ಸಮಿತಿ ಸದಸ್ಯರಿಗೆ ಮತಗಳನ್ನು ಮರು ಎಣಿಕೆ ಮಾಡಲು ಆದೇಶ ನೀಡಿದ ನಂತರ ಗದ್ದಲ ನಡೆಯಿತು. ಎಂಸಿಡಿಯ ಅಪೆಕ್ಸ್ ನಿರ್ಧಾರ ತೆಗೆದುಕೊಳ್ಳುವ ಸ್ಥಾಯಿ ಸಮಿತಿಯ ಆರು ಸದಸ್ಯರನ್ನು ಆಯ್ಕೆ ಮಾಡುವ ಮತದಾನ ಶುಕ್ರವಾರ ಮುಕ್ತಾಯಗೊಂಡ ನಂತರ, ಮೇಯರ್ ಅವರು ಅಸಿಂಧು ಎಂದು ಘೋಷಿಸಿದ ಒಂದು ಮತದ ಬಗ್ಗೆ ಕೌನ್ಸಿಲರ್‌ಗಳಲ್ಲಿ ಗಲಾಟೆ ಸ್ಫೋಟಗೊಂಡಿತು.
ಮೇಯರ್ ಒಂದು ಮತ ಅಸಿಂಧು ಎಂದು ಘೋಷಿಸಿದ್ದಕ್ಕೆ ಬಿಜೆಪಿ ಕೌನ್ಸಿಲರ್‌ಗಳು ಆಕ್ಷೇಪ ವ್ಯಕ್ತಪಡಿಸಿದರು. ಸದನದಲ್ಲಿ ಒಟ್ಟು 250 ಕೌನ್ಸಿಲರ್‌ಗಳಲ್ಲಿ 242 ಕೌನ್ಸಿಲರ್‌ಗಳು ಸಮಿತಿಯ ಸದಸ್ಯರಿಗೆ ಮತ ಚಲಾಯಿಸಿದರು. ಸ್ಥಾಯಿ ಸಮಿತಿ ಸದಸ್ಯರ ಮತದಾನ ಪ್ರಕ್ರಿಯೆಗೆ ಕಾಂಗ್ರೆಸ್ ಕೌನ್ಸಿಲರ್‌ಗಳು ಗೈರು ಹಾಜರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.