ದಿಲ್ಲಿಯಲ್ಲಿ 2048ರ ಒಲಿಂಪಿಕ್ಸ್ : ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯ ಕನಸು
Team Udayavani, Mar 10, 2021, 10:45 PM IST
ಹೊಸದಿಲ್ಲಿ: ದಿಲ್ಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯ ತಮ್ಮ ಬೃಹತ್ ಕನಸೊಂದನ್ನು ತೆರೆದಿಟ್ಟಿದ್ದಾರೆ. ಕೇಂದ್ರ ಸರಕಾರ ಭಾರತದಲ್ಲಿ ಒಲಿಂಪಿಕ್ಸ್ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿರುವಾಗಲೇ, ರಾಜಧಾನಿಯಲ್ಲಿ 2048ರ ಒಲಿಂಪಿಕ್ಸ್ ಆಯೋಜಿಸುವ ಕನಸು ಹೊಂದಿದ್ದೇವೆಂದು ಪ್ರಕಟಿಸಿದ್ದಾರೆ.
“1896ರಂದು ಏಥೆನ್ಸ್‌ನಲ್ಲಿ ಒಲಿಂಪಿಕ್ಸ್ ಆರಂಭವಾದಾಗಿನಿಂದ ಇಲ್ಲಿಯವರೆಗೆ ಒಮ್ಮೆಯೂ ಈ ಕ್ರೀಡಾಕೂಟ ನಮ್ಮಲ್ಲಿ ನಡೆದಿಲ್ಲ. ಇದನ್ನು ಭಾರತಕ್ಕೆ ತರಲು ನಾವು ನಿರ್ಧರಿಸಿದ್ದೇವೆ. 2048 ಬಹಳ ದೂರದ ಮಾತಾದರೂ, ಇದಕ್ಕೆ ದೊಡ್ಡ ಮಟ್ಟದ ಪೂರ್ವಸಿದ್ಧತೆ ಆರಂಭಿಸಬೇಕಾಗುತ್ತದೆ. 2048ರ ಕೂಟಕ್ಕೂ 10 ವರ್ಷ ಮುನ್ನ ಒಲಿಂಪಿಕ್ಸ್ ಆಯೋಜಿಸಲು ಅರ್ಜಿ ಸಲ್ಲಿಸಬೇಕಾಗುತ್ತದೆ. ಅದಕ್ಕೂ 15 ವರ್ಷಗಳ ಮೊದಲೇ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಕ್ರಮ ತೆಗೆದು ಕೊಳ್ಳಬೇಕು. ಎಲ್ಲ ಕಡೆಗೆ ಕ್ರೀಡಾ ವಾತಾವರಣ ನಿರ್ಮಿಸಬೇಕು. ನಮ್ಮ ಕ್ರೀಡಾಪಟುಗಳನ್ನು ವಿಶ್ವದರ್ಜೆಗೆ ತಕ್ಕಂತೆ ಸಿದ್ಧಪಡಿಸಬೇಕು’ ಎಂದು ಸಿಸೋಡಿಯ ಹೇಳಿದ್ದಾರೆ.
2048ರಂದು ನಡೆಯುವುದು 39ನೇ ಒಲಿಂಪಿಕ್ಸ್ ಆಗಿರಲಿದೆ.
ಇದನ್ನೂ ಓದಿ :ಐಸಿಸಿ ಸಿಇಒ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ಮನು ಸಾಹ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.