![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Apr 18, 2021, 11:36 PM IST
ಮುಂಬಯಿ: ಪಂಜಾಬ್ ಕಿಂಗ್ಸ್ ಎದುರಿನ ರವಿವಾರದ ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್‌ಗಳ ಜಯ ಸಾಧಿಸಿದೆ. ಇದರಿಂದ ಪಂಜಾಬ್ ನಾಯಕ ಕೆ.ಎಲ್. ರಾಹುಲ್ ಅವರಿಗೆ ಬರ್ತ್‌ಡೇ ಗಿಫ್ಟ್ ಒಂದು ತಪ್ಪಿಹೋಯಿತು.
ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ 4 ವಿಕೆಟಿಗೆ 195 ರನ್ ಗಳಿಸಿದರೆ, ಡೆಲ್ಲಿ ಯಾವುದೇ ಒತ್ತಡಕ್ಕೆ ಸಿಲುಕದೆ 18.2 ಓವರ್‌ಗಳಲ್ಲಿ 4 ವಿಕೆಟಿಗೆ 198 ರನ್ ಬಾರಿಸಿತು.
ಆರಂಭಕಾರ ಶಿಖರ್ ಧವನ್ 92 ರನ್ ಬಾರಿಸಿ (49 ಎಸೆತ, 13 ಬೌಂಡರಿ, 2 ಸಿಕ್ಸರ್) ಡೆಲ್ಲಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಪೃಥ್ವಿ ಶಾ 32, ಕೊನೆಯಲ್ಲಿ ಮಾರ್ಕಸ್ ಸ್ಟೋಯಿನಿಸ್ ಔಟಾಗದೆ 27 ರನ್ ಹೊಡೆದು ಗೆಲುವು ತಂದಿತ್ತರು.
ಪಂಜಾಬ್ ಪರ ರಾಹುಲ್-ಅಗರ್ವಾಲ್ ಮೊದಲ ವಿಕೆಟಿಗೆ ಶತಕದ ಜತೆಯಾಟ ದಾಖಲಿಸಿದರು. 12.4 ಓವರ್‌ಗಳಿಂದ 122 ರನ್ ಬಂತು. ಇಬ್ಬರೂ 60ರ ಗಡಿ ದಾಟುವಲ್ಲಿ ಯಶಸ್ವಿಯಾದರು. ಇವರಲ್ಲಿ ಅಗರ್ವಾಲ್ ಹೆಚ್ಚು ಆಕ್ರಮಣಕಾರಿಯಾಗಿದ್ದರು. 36 ಎಸೆತಗಳಿಂದ 69 ರನ್ ಸಿಡಿಸಿದರು. ಇದು 4 ಸಿಕ್ಸರ್, 7 ಬೌಂಡರಿಗಳನ್ನೊಳಗೊಂಡಿತ್ತು. ರಾಹುಲ್ 51 ಎಸೆತ ಎದುರಿಸಿ 61 ರನ್ ಹೊಡೆದರು (7 ಫೋರ್, 2 ಸಿಕ್ಸರ್).
ಈ ಜೋಡಿ ಬೇರ್ಪಟ್ಟ ಬಳಿಕ ಪಂಜಾಬ್ ರನ್‌ರೇಟ್ ಕುಸಿತ ಕಾಣತೊಡಗಿತು. ವನ್‌ಡೌನ್‌ನಲ್ಲಿ ಬಂದ ಕ್ರಿಸ್ ಗೇಲ್ ಸಿಡಿಯಲು ವಿಫಲರಾದರು. 9 ಎಸೆತಗಳಿಂದ 11 ರನ್ ಮಾಡಿ ಡೆತ್ ಓವರ್‌ನಲ್ಲಿ ವಾಪಸಾದರು. ನಿಕೋಲಸ್ ಪೂರಣ್ ಸತತ 2 ಸೊನ್ನೆಗಳ ಬಳಿಕ ಖಾತೆ ತೆರೆದರೂ ಎರಡಂಕೆಯ ಗಡಿ ತಲುಪಲಿಲ್ಲ (9).
ದೀಪಕ್ ಹೂಡಾ ಮತ್ತು ಶಾರೂಖ್ ಖಾನ್ ಕೊನೆಯ ಹಂತದಲ್ಲಿ ರನ್ ಗತಿ ಏರಿಸಲು ಗರಿಷ್ಠ ಪ್ರಯತ್ನ ನಡೆಸಿದರು. ಆದರೆ ತಂಡದ ಮೊತ್ತವನ್ನು ಇನ್ನೂರರ ಗಡಿ ತಲುಪಿಸಲು ಸಾಧ್ಯವಾಗಲಿಲ್ಲ. ಹೂಡಾ 13 ಎಸೆತಗಳಿಂದ 22 ರನ್ (2 ಸಿಕ್ಸರ್), ಶಾರೂಖ್ 5 ಎಸೆತಗಳಿಂದ 15 ರನ್ (2 ಬೌಂಡರಿ, 1 ಸಿಕ್ಸರ್) ಮಾಡಿ ಅಜೇಯರಾಗಿ ಉಳಿದರು.
ಸ್ಕೋರ್ ಪಟ್ಟಿ
ಪಂಜಾಬ್ ಕಿಂಗ್ಸ್
ಕೆ. ಎಲ್. ರಾಹುಲ್ ಸಿ ಸ್ಟೋಯಿನಿಸ್ ಬಿ ರಬಾಡ 61
ಅಗರ್ವಾಲ್ ಸಿ ಧವನ್ ಬಿ ಮೆರಿವಾಲಾ 69
ಕ್ರಿಸ್ ಗೇಲ್ ಬಿ ಪಟೇಲ್ ಸಿ ವೋಕ್ಸ್ 11
ದೀಪಕ್ ಹೂಡಾ ಔಟಾಗದೆ 22
ನಿಕೋಲಸ್ ಪೂರಣ್ ಸಿ ರಬಾಡ ಬಿ ಅವೇಶ್ 9
ಶಾರೂಖ್ ಖಾನ್ ಔಟಾಗದೆ 15
ಇತರ 8
ಒಟ್ಟು (4 ವಿಕೆಟಿಗೆ) 195
ವಿಕೆಟ್ ಪತನ: 1-122, 2-141, 3-158, 4-179.
ಬೌಲಿಂಗ್;
ಕ್ರಿಸ್ ವೋಕ್ಸ್ 4-0-42-1
ಲುಕ್ಮನ್ ಮೆರಿವಾಲಾ 3-0-32-1
ಆರ್. ಅಶ್ವಿನ್ 4-0-28-0
ಕಾಗಿಸೊ ರಬಾಡ 4-0-43-1
ಲಲಿತ್ ಯಾದವ್ 1-0-11-0
ಅವೇಶ್ ಖಾನ್ 4-0-33-1
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಸಿ ಗೇಲ್ ಬಿ ಆರ್ಷದೀಪ್ 32
ಶಿಖರ್ ಧವನ್ ಬಿ ರಿಚರ್ಡ್‌ಸನ್ 92
ಸ್ಟಿವನ್ ಸ್ಮಿತ್ ಸಿ ರಿಚರ್ಡಸನ್ ಬಿ ಮೆರೆಡಿತ್ 9
ರಿಷಭ್ ಪಂತ್ ಸಿ ಹೂಡಾ ಬಿ ರಿಚರ್ಡ್‌ಸನ್ 15
ಮಾರ್ಕಸ್ ಸ್ಟೋಯಿನಿಸ್ ಔಟಾಗದೆ 27
ಲಲಿತ್ ಯಾದವ್ ಔಟಾಗದೆ 12
ಇತರ 11
ಒಟ್ಟು(18.2 ಓವರ್‌ಗಳಲ್ಲಿ) 198
ವಿಕೆಟ್ ಪತನ: 1-59, 2-107, 3-152, 4-180.
ಬೌಲಿಂಗ್; ಆರ್ಷದೀಪ್ ಸಿಂಗ್ 3-0-22-1
ಮೊಹಮ್ಮದ್ ಶಮಿ 4-0-53-0
ಜಲಜ್ ಸಕ್ಸೇನಾ 3-0-27-0
ಜೇ ರಿಚರ್ಡ್‌ಸನ್ 4-0-41-2
ದೀಪಕ್ ಹೂಡಾ 2-0-18-0
ರೀಲೆ ಮೆರೆಡಿತ್ 2.2-0-31-1
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.