ವನಿತಾ ಡೇ-ನೈಟ್ ಸರಣಿಗೆ ಆಗ್ರಹ :ಚೊಚ್ಚಲ ಪಿಂಕ್‌ಬಾಲ್ ಟೆಸ್ಟ್ ಆಡಲಿರುವ ಭಾರತದ ವನಿತೆಯರು
Team Udayavani, May 21, 2021, 11:30 PM IST
ಹೊಸದಿಲ್ಲಿ: ಭಾರತದ ವನಿತೆಯರು 7 ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ಆಡಲಿಳಿಯಲಿದ್ದಾರೆ. ಇಂಗ್ಲೆಂಡ್‌ನಲ್ಲಿ ಏಕೈಕ ಟೆಸ್ಟ್ ಬಳಿಕ ವರ್ಷಾಂತ್ಯ ಆಸ್ಟ್ರೇಲಿಯ ಪ್ರವಾಸದ ವೇಳೆಯೂ ಒಂದು ಟೆಸ್ಟ್ ಆಡಲಿದೆ. ಇದು ಡೇ-ನೈಟ್ ಪಂದ್ಯ ಆಗಿರುವುದು ವಿಶೇಷ.
ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಆಟಗಾರ್ತಿ, ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸದಸ್ಯೆ ಶಾಂತಾ ರಂಗಸ್ವಾಮಿ, “ವನಿತಾ ಟೆಸ್ಟ್ ಕ್ರಿಕೆಟ್ ಮತ್ತೆ ಆರಂಭವಾಗುತ್ತಿರುವುದು ಸ್ವಾಗರ್ತಾಹ. ಭಾರತ ತಂಡ ಇದೇ ವರ್ಷ ಆಸ್ಟ್ರೇಲಿಯದಲ್ಲಿ ಪಿಂಕ್ ಬಾಲ್ ಟೆಸ್ಟ್ ಆಡಲಿರುವುದು ಉತ್ತಮ ಬೆಳವಣಿಗೆ. ಆದರೆ ಅಲ್ಲಿಗೆ ತೆರಳುವ ಮುನ್ನ ದೇಶಿ ಕ್ರಿಕೆಟ್‌ನಲ್ಲಿ ಹೊನಲು ಬೆಳಕಿನ ಪಂದ್ಯಗಳನ್ನು ಆಯೋಜಿಸಬೇಕು’ ಎಂದು ಸಲಹೆ ನೀಡಿದ್ದಾರೆ.
ಭಾರತ ತಂಡ ಮುಂದಿನ ತಿಂಗಳು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಆಡಲಿದೆ. ಕಳೆದ 7 ವರ್ಷಗಳ ಬಳಿಕ ಭಾರತದ ವನಿತೆಯರು ಆಡಲಿರುವ ಮೊದಲ ಟೆಸ್ಟ್ ಇದಾಗಿದೆ. ಜತೆಗೆ 2018ರಿಂದ ವನಿತೆಯರ ದೇಶಿ ಕ್ರಿಕೆಟ್ ಟೂರ್ನಿಗಳೂ ಹೆಚ್ಚು ನಡೆದಿಲ್ಲ. ಕಳೆದ ವರ್ಷ ಮಹಿಳೆಯರಿಗಾಗಿ ಕೆಲವು ಟೂರ್ನಿಗಳನ್ನು ಆಯೋಜಿಸಲು ಬಿಸಿಸಿಐ ಚಿಂತನೆ ಮಾಡಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಎಲ್ಲ ಯೋಜನೆಗಳು ತಲೆಕೆಳಗಾದವು.
ಇದನ್ನೂ ಓದಿ :ಬಾಯ್ಡ್ ರ್‍ಯಾಂಕಿನ್ ಕ್ರಿಕೆಟ್ ವಿದಾಯ: ಐರ್ಲೆಂಡ್, ಇಂಗ್ಲೆಂಡ್ ಪರ ಆಡಿದ ಹೆಗ್ಗಳಿಕೆ
ಪಿಂಕ್‌ಬಾಲ್ ಅನುಭವವಿಲ್ಲ
“ವನಿತಾ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಬಳಿಕ ಆಸ್ಟ್ರೇಲಿಯ ವಿರುದ್ಧದ ಹೊನಲು ಬೆಳಕಿನ ಟೆಸ್ಟ್ ಪಂದ್ಯದಲ್ಲಿಯೂ ಪಾಲ್ಗೊಳ್ಳಲಿದೆ. ದೀರ್ಘ ಮಾದರಿಯ ಕ್ರಿಕೆಟ್‌ಗೆ ಹೆಚ್ಚಿನ ಉತ್ತೇಜನ ಕೊಡಬೇಕು. ಪಿಂಕ್‌ಬಾಲ್ ಕ್ರಿಕೆಟ್‌ನಲ್ಲಿ ಭಾರತದ ಆಟಗಾರ್ತಿಯರು ಹೆಚ್ಚಿನ ಅನುಭವ ಹೊಂದಿಲ್ಲ. ಆದ್ದರಿಂದ ಹಗಲು-ರಾತ್ರಿ ದೇಶಿ ಟೂರ್ನಿಗಳನ್ನು ಆಯೋಜಿಸಬೇಕು’ ಎಂದು ಶಾಂತಾ ರಂಗಸ್ವಾಮಿ ಬಿಸಿಸಿಐಗೆ ಸಲಹೆ ನೀಡಿದರು.
ಪಿಂಕ್‌ಬಾಲ್ ಟೆಸ್ಟ್
ಭಾರತ-ಆಸ್ಟ್ರೇಲಿಯ ವನಿತಾ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಪ್ರಕಟವಾಗಿದೆ. ಈ ಸರಣಿಯಲ್ಲಿ ಮೂರು ಏಕದಿನ (ಸೆ. 19-24), ಮೂರು ಟಿ20 (ಅ. 7-11) ಮತ್ತು ಒಂದು ಪಿಂಕ್‌ಬಾಲ್ ಟೆಸ್ಟ್ ಪಂದ್ಯವನ್ನು ಆಡಲಾಗುವುದು. ಇದು ಭಾರತದ ವನಿತೆಯರು ಆಡುತ್ತಿರುವ ಚೊಚ್ಚಲ ಅಹರ್ಶಿನಿ ಟೆಸ್ಟ್ ಆಗಿದ್ದು, ಅಕ್ಟೋಬರ್ 30ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಪರ್ತ್ ಡೇ-ನೈಟ್ ಪಂದ್ಯವನ್ನು ಆಯೋಜಿಸುತ್ತಿರುವುದು ಕೂಡ ಇದೇ ಮೊದಲು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್ ಹೆಡ್? Video
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.