DK Shivkumar; ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌: ಚತುರ ಸಂಘಟಕ, ಗಟ್ಟಿ ಬಂಡೆ


Team Udayavani, May 19, 2023, 8:20 AM IST

dk shi

ಕಾಂಗ್ರೆಸ್‌ ಸಂಘಟನೆಯಲ್ಲಿ ಮುಂಚೂಣಿ ಪಾತ್ರ ವಹಿಸಿದ್ದ, ಹಾಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರಾಜ್ಯದ ಮುಂದಿನ ಉಪಮುಖ್ಯಮಂತ್ರಿ. ಈ ಬಾರಿಯ ಕಾಂಗ್ರೆಸ್‌ ಗೆಲುವಿನಲ್ಲಿ ಇವರ ಪಾತ್ರ ದೊಡ್ಡದಿದೆ. ಹೀಗಾಗಿಯೇ ಉಪಮುಖ್ಯಮಂತ್ರಿ ಸ್ಥಾನವೂ ಒಲಿದು ಬಂದಿದೆ. ಅಲ್ಲದೆ ವಿದ್ಯಾರ್ಥಿ ದೆಸೆಯಲ್ಲಿಯೇ ರಾಜಕೀಯ ಪ್ರವೇಶ ಮಾಡಿದ್ದ ಡಿ.ಕೆ.ಶಿವಕುಮಾರ್‌, ಒಂದೊಂದೇ ಮೆಟ್ಟಿಲು ಏರುತ್ತಾ ಇಂದು ಈ ಸ್ಥಾನಕ್ಕೆ ಬಂದು ತಲುಪಿದ್ದಾರೆ.

ರಾಜ್ಯದ ಉದ್ದಗಲಕ್ಕೂ ತಮ್ಮದೇ ಆದ ಅಭಿಮಾನಿಗಳ ಪಡೆ, ಪಕ್ಷದ ಕಾರ್ಯಕರ್ತರ ಸೈನ್ಯದ ಜತೆ ನಿರಂತರ ಸಂಪರ್ಕ ಹೊಂದಿರುವ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ಪಕ್ಷಕ್ಕೆ ಅತ್ಯಂತ ನಿಷ್ಠರಾಗಿರುವ ಜತೆಗೆ ಸಂಘಟನ ಚತುರ ಎಂದೇ ಹೆಸರು ಗಳಿಸಿದವರು. ಲೀಡರ್‌ ಬೇಸ್ಡ್ ಪಕ್ಷವನ್ನು ಕೇಡರ್‌ ಬೇಸ್ಡ್ ಪಾರ್ಟಿ ಎಂದು ಬದಲಾಯಿಸಿರುವುದರಲ್ಲಿ ಶಿವಕುಮಾರ್‌ ಪರಿಶ್ರಮ ಅಪಾರವಾಗಿದೆ. ಡಿ.ಕೆ.ಶಿವಕುಮಾರ್‌ ಅವರ ಪಕ್ಷ ನಿಷ್ಠೆ ಕುರಿತು ಪ್ರತೀ ಕಾರ್ಯಕರ್ತರಲ್ಲೂ ಹೆಮ್ಮೆ ಇದೆ. ಅಷ್ಟೇ ಅಲ್ಲ, ಪಕ್ಷ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಅದರ ರಕ್ಷಣೆಗೆ ಹೋಗಿದ್ದಾರೆ.

ಅಂದ ಹಾಗೆ, ಡಿ.ಕೆ.ಶಿವಕುಮಾರ್‌ ಅವರಿಗೆ ನಾಯಕತ್ವ ತಾನಾಗಿಯೇ ಒಲಿದು ಬಂದಿಲ್ಲ. ಅದರ ಹಿಂದೆ ದೊಡ್ಡ ಪರಿಶ್ರಮವಿದೆ. ವಿದ್ಯಾರ್ಥಿ ದಿಸೆಯಿಂದಲೇ ಹೋರಾಟ ನಡೆಸುತ್ತಾ ಹಂತ ಹಂತವಾಗಿ ಮೇಲೇರಿದ್ದಾರೆ. 1985ರಲ್ಲಿ ಸಾತನೂರು ಕ್ಷೇತ್ರದಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿದ್ದ  ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ವಿರುದ್ಧ  ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ಅಲ್ಪ ಮತಗಳ ಅಂತರದಿಂದ ಸೋಲು ಅನುಭವಿಸಿದ ಡಿ.ಕೆ.ಶಿವಕುಮಾರ್‌ ಅನಂತರ ಬೆಂಗಳೂರು ಗ್ರಾಮಾಂತರ ಜಿÇÉೆ ಸಾತನೂರಿನಿಂದ ಜಿಲ್ಲಾ ಪಂಚಾಯತ್‌ ಸದಸ್ಯರಾಗಿ ರಾಜಕಾರಣ ಪ್ರವೇಶ ಮಾಡಿದರು. 1989ರ ಚುನಾವಣೆಯಲ್ಲಿ ಜನತಾಪಕ್ಷದ ಯು.ಕೆ. ಸ್ವಾಮಿ ವಿರುದ್ಧ ಗೆದ್ದು ಶಾಸಕರಾದರು.

ವೀರೇಂದ್ರ ಪಾಟೀಲರ ಬಳಿಕ ಮುಖ್ಯಮಂತ್ರಿಯಾದ ಎಸ್‌. ಬಂಗಾರಪ್ಪ ಸಂಪುಟದಲ್ಲಿ  ಬಂ¬ಧೀಖಾನೆ ಸಚಿವರಾದರು. ಬಂಗಾರಪ್ಪ ಅವರ ನೀಲಿಗಣ್ಣಿನ ಹುಡುಗ ಎಂಬ ಖ್ಯಾತಿಯೂ ಅವರಿಗಿತ್ತು. 1994ರಲ್ಲಿ ಪಕ್ಷದ ಟಿಕೆಟ್‌ ತಪ್ಪಿದಾಗಲೇ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು ಶಕ್ತಿ ಪ್ರದರ್ಶನ ಮಾಡಿದ್ದ ಶಿವಕುಮಾರ್‌, ಪರಿಸ್ಥಿತಿಗೆ ವಿರುದ್ಧವಾಗಿ ಈಜುವ ಕಲೆಯನ್ನು ಆರಂಭಿಕ ದಿನಗಳಲ್ಲೇ ರೂಢಿಸಿಕೊಂಡವರು. 1999ರಲ್ಲಿ ಮತ್ತೆ ಕಾಂಗ್ರೆಸ್‌ನಿಂದಲೇ ಗೆದ್ದು ಎಸ್‌.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಹಕಾರ ಸಚಿವರಾಗಿ ಅನಂತರ ನಗರಾಭಿವೃದ್ಧಿ ಸಚಿವರಾಗಿ ಕೃಷ್ಣ ಅವರಿಗೆ ತೀರಾ ನಿಕಟವರ್ತಿಯಾಗಿ ಕೆಲಸ ಮಾಡಿದರು. ರಾಜಕೀಯ ಸವಾಲುಗಳನ್ನು ಎದುರಿಸಲು ಕೃಷ್ಣ ನೆಚ್ಚಿಕೊಂಡಿದ್ದು ಶಿವಕುಮಾರ್‌ ಅವರನ್ನೇ.

ಸಾತನೂರಿನಿಂದ ಕೆಪಿಸಿಸಿವರೆಗೆ

ಕನಕಪುರದ ಬಂಡೆ ಎಂದೇ ಈಗ ಮಾಧ್ಯಮಗಳಲ್ಲಿ ಬಣ್ಣಿಸಲ್ಪಟ್ಟ ಶಿವಕುಮಾರ್‌ ಹುಟ್ಟಿದ್ದು ಕನಕಪುರದ ಸಾಮಾನ್ಯ ರೈತ ಕುಟುಂಬದಲ್ಲಿ. ದೊಡ್ಡಆಲಹಳ್ಳಿಯ ಕೆಂಪೇಗೌಡರು ಹಾಗೂ ಗೌರಮ್ಮ ದಂಪತಿ ಮಗನಾಗಿ 1962ರ ಮೇ 15ರಂದು ಜನಿಸಿದರು. ಸೋದರಿ ಮಂಜುಳಾ ಹಾಗೂ ಸೋದರ ಸುರೇಶ್‌ ಒಡನಾಡಿಗಳು. ಬಾಲ್ಯದಿಂದಲೂ ಅತ್ಯಂತ ಸೂಕ್ಷ್ಮ ಹಾಗೂ ಚುರುಕುಮತಿಯಾಗಿದ್ದರು. ಕೃಷಿಯ ಜೊತೆಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡರು. ಕಾಲೇಜು ದಿನಗಳಲ್ಲೇ ವಿದ್ಯಾರ್ಥಿ ನಾಯಕನಾಗಿ ಹೊರಹೊಮ್ಮಿದರು. ಪ್ರಾಥಮಿಕ ಮತ್ತು ಹೈಸ್ಕೂಲ್‌ ದಿನಗಳಲ್ಲೂ ಉತ್ತಮ ಕ್ರೀಡಾಪಟುವಾಗಿದ್ದರು.

ದೊಡ್ಡ ಆಲಹಳ್ಳಿ ಪಕ್ಕದ ಕೃಷ್ಣಯ್ಯನದೊಡ್ಡಿಯ ಸರಕಾರಿ ಶಾಲೆಯಲ್ಲಿ ಕಲಿಕೆ ಆರಂಭಿಸಿ ಬೆಂಗಳೂರಿನ ನ್ಯಾಶನಲ್‌ ಪಬ್ಲಿಕ್‌ ಸ್ಕೂಲ್‌, ಕಾರ್ಮೆಲ್‌ ಸ್ಕೂಲ್‌ ಹಾಗೂ ವಿದ್ಯಾವರ್ಧಕ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದರು. ಕಬಡ್ಡಿ, ವಾಲಿಬಾಲ್‌, ಕ್ರಿಕೆಟ್‌ ಅವರ ಆಸಕ್ತಿಯ ಕ್ರೀಡೆಗಳು. ಆರ್‌.ಸಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಪ್ರದೇಶ ಯುವ ಕಾಂಗ್ರೆಸ್‌ ಸೇರಿ ಪ್ರಧಾನ ಕಾರ್ಯದರ್ಶಿಯಾದರು.

ಅನಂತರ ಬೆಂಗಳೂರು ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆಯಾದರು. ಪದವಿ ಓದುವಾಗಲೇ ಅಂದರೆ 1985ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗುವ ಅವಕಾಶ ಅವರಿಗೆ ಲಭಿಸಿತು. ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಮೊದಲ ಚುನಾವಣೆಯನ್ನು ಎದುರಿಸಿ ಅಲ್ಪಮತಗಳ ಅಂತರದಿಂದ ಪರಾಭವಗೊಂಡರೂ 1989ರಲ್ಲಿ ಎರಡನೇ ಬಾರಿಗೆ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದು ಭದ್ರವಾಗಿ ಬೇರೂರಿದ್ದ ಜನತಾದಳದ ಪ್ರಾಬಲ್ಯವನ್ನು ಮುರಿದರು. ಇದಾದ ಬಳಿಕ ಅವರು ಚುನಾವಣ ರಾಜಕಾರಣದಲ್ಲಿ ಸೋಲು ಕಂಡೇ ಇಲ್ಲ. 2008ರಲ್ಲಿ ಪಕ್ಷದ ಜವಾಬ್ದಾರಿ ನಿರ್ವಹಿಸುವ ಅವಕಾಶ ಅವರಿಗೆ ಮೊದಲ ಬಾರಿಗೆ ಲಭಿಸಿತು. 2008ರಿಂದ 2010ರ ವರೆಗೆ ಪಕ್ಷದ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯ ಸಾಧನೆ ಮಾಡಿದಾಗ ಅಂದಿನ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಸಿದ್ದರಾಮಯ್ಯ ಸೇರಿದಂತೆ ಯಾರೊಬ್ಬರೂ ಪಕ್ಷದ ಸಾರಥ್ಯ ಒಪ್ಪಿಕೊಳ್ಳಲು ಮುಂದೆ ಬಾರದೇ ಇದ್ದಾಗ ಕೆಪಿಸಿಸಿ ಅಧ್ಯಕ್ಷ ಗಾದಿ ಏರಿದ ಡಿ.ಕೆ.ಶಿವಕುಮಾರ್‌ ಈ ಅವಕಾಶವನ್ನು ಸವಾಲಾಗಿ ಸ್ವೀಕರಿಸಿ ಪಕ್ಷ ಸಂಘಟಿಸಿ ಇಂದು 135 ಸ್ಥಾನಗಳ ಪ್ರಚಂಡ ವಿಜಯಕ್ಕೆ ಕಾರಣರಾಗಿದ್ದಾರೆ.

ಮೈತ್ರಿ ಸರಕಾರದಲ್ಲಿ ಸಚಿವ

2018ರಲ್ಲಿ ನಡೆದ ರಾಜ್ಯ ರಾಜಕಾರಣದಲ್ಲಿನ ಪಲ್ಲಟದಿಂದ ಕಾಂಗ್ರೆಸ್‌ ಅಧಿಕಾರ ಕಳೆದುಕೊಂಡಿತು. ಬಿಜೆಪಿ ಅತೀ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದರೂ  ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಸರಕಾರ ರಚನೆಯಾಯಿತು. ಈ ಸರಕಾರದ ರಚನೆ ಹಾಗೂ ಅದು ಕೆಲವು ತಿಂಗಳು ಅಸ್ತಿತ್ವದಲ್ಲಿ ಉಳಿಯುವುದರಲ್ಲಿ ಶಿವಕುಮಾರ್‌ ಮಹತ್ವದ ಪಾತ್ರ ವಹಿಸಿದ್ದರು. ಕುಮಾರಸ್ವಾಮಿ ಸಂಪುಟದಲ್ಲಿ ಜಲಸಂಪನ್ಮೂಲ ಹಾಗೂ ಕನ್ನಡ -ಸಂಸ್ಕೃತಿ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ವ್ಯಕ್ತಿಪೂಜೆಯಿಲ್ಲ, ಪಕ್ಷ ಪೂಜೆ

ಕೆಪಿಸಿಸಿ ಅಧ್ಯಕ್ಷರಾದ ಬಳಿಕ “ನಾನು ವ್ಯಕ್ತಿಪೂಜೆ ಮಾಡುವವನ್ನಲ್ಲ, ಪಕ್ಷ ಪೂಜೆ ಮಾಡುವವನು’ ಎಂದು ಡಿ.ಕೆ.ಶಿವಕುಮಾರ್‌ ಬಿಟ್ಟ  ಬಾಣವು ಈ ಕ್ಷಣವೂ ಎಲ್ಲಿ ನಾಟಬೇಕೋ ಅಲ್ಲಿ ನಾಟುತ್ತಿದೆ. ರಾಜಕಾರಣದಲ್ಲಿ ಯಶಸ್ವಿಯಾಗಬೇಕಿದ್ದರೆ, ಧರ್ಮರಾಜನ ಧರ್ಮತ್ವ ಬೇಕು, ವಿದುರನ ನೀತಿ ಬೇಕು, ದಾನಶೂರ ಕರ್ಣನ ತ್ಯಾಗ ಬೇಕು, ಅರ್ಜುನನ ಗುರಿ ಇರಬೇಕು, ಕೃಷ್ಣನ ತಂತ್ರ ಬೇಕು, ಭೀಮನ ಬಲ ಇರಬೇಕೆಂದು ಪದೇ ಪದೆ ಪ್ರಸ್ತಾವಿಸುತ್ತಿದ್ದರು.

ಮೈತ್ರಿ ಸರಕಾರದಲ್ಲಿ ಪಾಲಿಲ್ಲ

ಕಾಂಗ್ರೆಸ್‌ ಸ್ವತಂತ್ರವಾಗಿ ಅಥವಾ ಅತಂತ್ರವಾಗಿ ಅಧಿಕಾರಕ್ಕೆ ಬಂದ ಎರಡು ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಸಚಿವ ಸಂಪುಟದಿಂದ ಹೊರಗಿರಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು. ಅವಧಿಪೂರ್ವ ಚುನಾವಣೆ ಎದುರಿಸಿದ ಎಸ್‌.ಎಂ.ಕೃಷ್ಣ  ಸರಕಾರ ಹೀನಾಯವಾಗಿ ಸೋಲನುಭವಿಸಿತು. ಹೀಗಾಗಿ 2004ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸರಕಾರ ರಚನೆಯಾಯಿತು. ಆಗ ಧರ್ಮಸಿಂಗ್‌ ಮುಖ್ಯಮಂತ್ರಿ, ಜೆಡಿಎಸ್‌ನಿಂದ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದಾಗ ದೇವೇಗೌಡರು ಶಿವಕುಮಾರ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದೆಂಬ ಕರಾರು ವಿಧಿಸಿದರು. ಆಗಲೂ ಡಿಕೆಶಿ ಪಕ್ಷದ ಆದೇಶ ಪಾಲಿಸಿದರು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದಾಗ ಸಾಹಿತಿಗಳು ಬರೆದ ಪತ್ರವನ್ನು ನೆಪವಾಗಿಸಿಕೊಂಡು ಒಂದು ವರ್ಷಗಳ ಕಾಲ ಸಂಪುಟದಿಂದ ಹೊರಗಿಡಲಾಯಿತು. ಆದರೆ ಏಳು ತಿಂಗಳ ಅನಂತರ ಶಿವಕುಮಾರ್‌ ಇಂಧನ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

ಸೋಲಿಲ್ಲದ ಸರದಾರ

1985ರಲ್ಲಿ ಪಕ್ಷದ  ಆಗ್ರಹಕ್ಕೆ ಮಣಿದು ಸಾತನೂರು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ಡಿ.ಕೆ .ಶಿವಕುಮಾರ್‌, 1989ರಿಂದ ಇಲ್ಲಿಯವರೆಗೆ ತಿರುಗಿ ನೋಡಿಲ್ಲ. 1989ರಿಂದ 2004ರ ವರೆಗೆ ಸಾತನೂರು ಕ್ಷೇತ್ರ ಮತ್ತು 2004ರಿಂದ 2023ರ ವರೆಗೆ ಕನಕಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿಕೊಂಡು ಬರುತ್ತಲೇ ಇದ್ದಾರೆ. ನಾಲ್ಕು ದಶಕಗಳಲ್ಲಿ ಪಕ್ಷದ ಮಾತುಗಳನ್ನು ಮೀರಿಲ್ಲ. ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ ವಿರುದ್ಧವೂ ಸ್ಪರ್ಧಿಸಿದ್ದಾರೆ.

ಮೊದಲ ಕಾರ್ಯಕ್ರಮ 

ಕ್ವೀನ್ಸ್‌ ರಸ್ತೆಯ ಕಾಂಗ್ರೆಸ್‌ ಕಚೇರಿಯ ಸಮೀಪವೇ ನಿರ್ಮಾಣವಾಗಿರುವ ಕಾಂಗ್ರೆಸ್‌ನ ನೂತನ ಭವನದಲ್ಲಿ ಪಕ್ಷದ ಸಭೆ ಅಥವಾ ಸಾರ್ವಜನಿಕ ಕಾರ್ಯಕ್ರಮ ನಡೆದಿರಲಿಲ್ಲ. ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಿ ನಿಯೋಜನೆಗೊಂಡ ಅನಂತರ ಪೂಜೆ ಮತ್ತು ಹೋಮ ನೆರವೇರಿಸಿದ್ದರು.

ಅಜ್ಜಯ್ಯನ ಮೇಲೆ ಅಚಲ ನಿಷ್ಠೆ

ತಮ್ಮ ನೋವು-ನಲಿವಿನ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್‌ ಅಚಲವಾಗಿ ನಂಬಿದ್ದು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ (ಅಜ್ಜಯ್ಯ ) ಶ್ರೀಗಳನ್ನು. ಅಜ್ಜಯ್ಯ ಅವರ ಮಾರ್ಗದರ್ಶನದಲ್ಲೇ ಅವರು ಬಹುತೇಕ ರಾಜಕೀಯ ಸವಾಲುಗಳಿಗೆ ಹೆಜ್ಜೆ ಹಾಕಿದ್ದಾರೆ. ಪದಗ್ರಹಣದ ವರ್ಚುವಲ್‌ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಕುಳಿತುಕೊಳ್ಳಲು ಯಾರಿಗೂ ಅವಕಾಶ ಇಲ್ಲದಿದ್ದರೂ ಅಜ್ಜಯ್ಯ ಅವರ ಫೋಟೋ ಇಟ್ಟು ಅಧಿಕಾರ ಸ್ವೀಕರಿಸಿದ್ದರು. ಅದೇ ರೀತಿ 2023ರ ಚುನಾವಣೆಗೆ ಬಿ ಫಾರ್ಮ್ ಹಂಚುವಾಗಲೂ ಶಿವಕುಮಾರ್‌ ಅಜ್ಜಯ್ಯನ ಆಶೀರ್ವಾದ ಪಡೆದಿದ್ದರು.

ಚುನಾವಣ ರಾಜಕಾರಣ

ಚುನಾವಣ ರಾಜಕಾರಣದಲ್ಲಿ ಇದುವರೆಗೆ ಎಂಟು ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ಡಿ.ಕೆ.ಶಿವಕುಮಾರ್‌ ಎರಡು ಬಾರಿ ಮಾತ್ರ ಸೋಲು ಕಂಡಿದ್ದಾರೆ. 1985ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋಲುಕಂಡ ಅವರ ದಶಕಗಳ ಬಳಿಕ ಕನಕಪುರ ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧಿಸಿ ಸೋಲು ಕಂಡರು. 1989, 1994, 1999, 2004ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರದಿಂದ 2008, 2013, 2018, 2023ರಲ್ಲಿ ಕನಕಪುರ ಕ್ಷೇತ್ರದಿಂದ ಸತತವಾಗಿ ಗೆಲುವು ಕಂಡಿದ್ದಾರೆ.

ದೇಶದ ಶ್ರೀಮಂತ ರಾಜಕಾರಣಿ

ಡಿ.ಕೆ.ಶಿವಕುಮಾರ್‌ ದೇಶದ ಅತೀ ಶ್ರೀಮಂತ ರಾಜಕಾರಣಿಗಳ ಪೈಕಿ ಒಬ್ಬರು. 2018ರಲ್ಲಿ ತಮ್ಮ ಚುನಾವಣ ಪ್ರಮಾಣ ಪತ್ರ ಸಲ್ಲಿಸುವಾಗ 840 ಕೋಟಿ ರೂ. ಮೌಲ್ಯದ ಆಸ್ತಿ ವಿವರ ಸಲ್ಲಿಸುವ ಮೂಲಕ ಅವರು ಎಲ್ಲರ ಹುಬ್ಬೇರಿಸುವುದಕ್ಕೆ ಕಾರಣರಾಗಿದ್ದರು. ನಾನು ಹುಟ್ಟಿನಿಂದ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ರಾಜಕಾರಣ ನನ್ನ  ಫ್ಯಾಷನ್‌ ಎಂದು ಡಿ.ಕೆ.ಶಿವಕುಮಾರ್‌ ಆಗಾಗ ಹೇಳುತ್ತಿದ್ದರೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ರೀತಿ ಅವರು 24 ಗಂಟೆ ರಾಜಕಾರಣಿ !

ಸಂಸ್ಕೃತದ ಮೇಲೆ ಹಿಡಿತ

ಕರ್ನಾಟಕದ ರಾಜಕಾರಣಿಗಳ ಪೈಕಿ ಮಾಜಿ ಸಿ.ಎಂ ಎಸ್‌.ಎಂ.ಕೃಷ್ಣ ಅವರನ್ನು ಹೊರತುಪಡಿಸಿದರೆ ಸಂಸ್ಕೃತ ಭಾಷೆ, ಸುಭಾಷಿತ, ಉಪನಿಷತ್‌ಗಳ ಬಗ್ಗೆ ಅತೀ ಹೆಚ್ಚು ಜ್ಞಾನ ಹಾಗೂ ಒಲವು ಹೊಂದಿರುವವರು ಡಿ.ಕೆ.ಶಿವಕುಮಾರ್‌. ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗದ ಹಲವು ಸಾಲುಗಳು ಅವರಿಗೆ ಕಂಠಸ್ಥ. ಭಗವದ್ಗೀತೆಯ ಬಗ್ಗೆ ಶ್ರದ್ಧೆ. ಸಂಸ್ಕೃತದ ಕ್ರಮ ಬದ್ಧ ಅಧ್ಯಯನಕ್ಕಾಗಿ ಮೂರು ವರ್ಷಗಳ ಕಾಲ ಅಧ್ಯಾಪಕರನ್ನು ನೇಮಿಸಿಕೊಂಡಿದ್ದರು. ವಿಧಾನಸಭೆಯಲ್ಲೂ ಆಗಾಗ ಸುಭಾಷಿತ, ಕಗ್ಗವನ್ನು ಉದ್ಧರಿಸುವ ಮೂಲಕ ಡಿ.ಕೆ. ಮಾಧ್ಯಮದಲ್ಲಿ ಸುದ್ದಿಯಾದ ಅದೆಷ್ಟೋ ದಿನಗಳಿವೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.