ಮೆಣಸಿನಕಾಯಿ ಬೆಳೆ ನಾಶ: ಯುವ ರೈತ ಆತ್ಮಹತ್ಯೆ
Team Udayavani, Dec 3, 2021, 6:00 PM IST
ಕುರುಗೋಡು: ಅಕಾಲಿಕ ಮಳೆಯಿಂದ ಬೆಳೆ ನಾಶಗೊಂಡ ಹಿನ್ನಲೆ ಸಾಲಭಾದೆ ತಾಳಲಾರದೆ ಗುರುವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವ ರೈತ, ಚಿಕಿತ್ಸೆ ಫಲಕರಿಯಾಗದೆ ಶುಕ್ರವಾರ ಬೆಳಿಗ್ಗೆ ಸಾವನ್ನಪ್ಪಿದ್ದಾನೆ.
ಮದಿರೆ ಗ್ರಾಮದ ರೈತ ಎಂ. ಮೋಹನ್ (34) ಆತ್ಮಹತ್ಯೆ ಮಾಡಿಕೊಂಡ ರೈತ.
ವಿಷ ಸೇವಿಸಿದ ಬಳಿಕ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆ ಕರೆದೊಯ್ಯಲಾಗಿತ್ತು,.
ರೈತನ ತಾಯಿ ಶೈಲಮ್ಮ ಹೇಸಿರಿನಲ್ಲಿ 11.9 ಎಕರೆ ಭೂಮಿ ಇದ್ದು, ಮೆಣಿಸಿನಕಾಯಿ ಬೆಳೆ ಬೆಳೆದಿದ್ದಾನೆ. ಮಳೆಯಿಂದ ನಷ್ಟವಾಗಿದೆ. ಬೆಳೆಗಾಗಿ ವ್ಯವಸಾಯ ಸೇವಾ ಸಹಕಾರ ಸಂಘ ಕೋಳೂರು ಕೇಂದ್ರದಲ್ಲಿ 3 ಲಕ್ಷ ಸಾಲ ತೆಗೆದುಕೊಂಡಿದ್ದು, ಇನ್ನಿತರ ಹೊರಗಡೆ ಕೈ ಸಾಲ ಮಾಡಿದ್ದಾನೆ. ಹಾಗಾಗಿ ಬೆಳೆಗೆ ಸಾಲ ಮಾಡಿದ್ದನು ಹೇಗೆ ತೀರಿಸೋದು ಎಂದು ಚಿಂತಿಸಿ ನೊಂದು ವಿಷ ಸೇವಿಸಿದ್ದಾನೆ.
ಮೃತನ ಅಂತ್ಯ ಕ್ರಿಯೆ ಸ್ವ ಗ್ರಾಮದಲ್ಲಿ ನೆರೆವೇರಿತು. ಮೃತನಿಗೆ ಪತ್ನಿ ಹಾಗೂ 2 ಹೆಣ್ಣು ಹಾಗೂ 1 ಗಂಡು ಮಕ್ಕಳಿದ್ದಾರೆ.
ಮೃತ ರೈತನ ಮನಗೆ ತಹಸೀಲ್ದಾರ್ ಕೆ. ರಾಘವೇಂದ್ರ ರಾವ್, ಗ್ರೇಡ್ 2 ತಹಸೀಲ್ದಾರ್ ಮಲ್ಲೇಶಪ್ಪ, ಜಂಟಿ ಕೃಷಿ ನಿರ್ದೇಶಕರು ಮಲ್ಲಿಕಾರ್ಜುನ, ಸಹಾಯಕ ಕೃಷಿ ನಿರ್ದೇಶಕ ಪಲಾಕ್ಷಿಗೌಡ, ಉಪ ಕೃಷಿ ನಿರ್ದೇಶಕ ಚಂದ್ರಶೇಖರ್, ಸಹಾಯಕ ತೋಟಗರಿಕೆ ಅಧಿಕಾರಿ ಯೋಗೀಶ್, ಸಹಾಯಕ ಕೃಷಿ ಅಧಿಕಾರಿ ಎಂ. ದೇವರಾಜ್, ಗ್ರಾಮಲೆಕ್ಕಿಗರು ಭೇಟಿ ನೀಡಿ ಪರಿಶೀಲಿಸಿ ಪ್ರಾಥಮಿಕ ವರದಿ ಯನ್ನು ಪಡೆದುಕೊಂಡರು.
ಈ ಕುರಿತು ಕುರಿತು ಕುರುಗೋಡು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.