ಈಗ ಶಾಂತ, ಮುಂದೆ ಮಹಾ ಸ್ಫೋಟ ಖಚಿತ: ಯತ್ನಾಳ್
ಸಿದ್ದರಾಮಯ್ಯ ಹಿಂದೂನಾ ಅಥವಾ ಮುಸ್ಲಿಮರಾಗಿ ಮತಾಂತರಗೊಂಡಿದ್ದಾರಾ?
Team Udayavani, Feb 5, 2022, 3:53 PM IST
ಮೈಸೂರು : ಯಾವಾಗ ಪರಿಸ್ಥಿತಿ ಶಾಂತವಾಗಿರುತ್ತದೆಯೋ, ಮುಂದೆ ಮಹಾ ಸ್ಫೋಟ ಖಚಿತ ಎಂದು ಮುಂದಿನ ರಾಜಕೀಯ ಪರಿಸ್ಥಿತಿಯ ಬದಲಾವಣೆ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸುಳಿವು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈಗ ಶಾಂತವಾಗಿರುವಂತೆ ಕಾಣುತ್ತಿದ್ದೇನೆ ಅಷ್ಟೇ. ಅದು ಭವಿಷ್ಯದ ಸ್ಪೋಟಕದ ಸೂಚನೆ. ಪಕ್ಷದ ಒಳಿತಿಗಾಗಿ ಆ ಸ್ಪೋಟ ನಡೆಯುತ್ತದೆ ಎಂದರು.
ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ.ಒಂದು ವೇಳೆ ಪಕ್ಷ ಸಿಎಂ ಮಾಡಿದರೆ ಸಮರ್ಥವಾಗಿ ಆಡಳಿತ ನಡೆಸುತ್ತೇನೆ.ಸದ್ಯ ಎಲ್ಲಾ ಸಿಎಂಗಳು ತಮ್ಮ ಕ್ಷೇತ್ರದ ಸಿಎಂಗಳಾಗಿದ್ದಾರೆ. ಶಿವಮೊಗ್ಗದವರಾದರೆ ಶಿವಮೊಗ್ಗಕ್ಕೆ ಸಿಎಂ.ಮೈಸೂರಿನವರಾದರೆ ಮೈಸೂರಿಗೆ ಸಿಎಂ.ಹಾವೇರಿಯವರಾದರೆ ಹಾವೇರಿಗೆ ಸಿಎಂ.ನಾನು ಇಡೀ ರಾಜ್ಯದ ಸಿಎಂ ಆಗಿ ಸಮಗ್ರ ಅಭಿವೃದ್ಧಿ ಮಾಡುತ್ತೇನೆ. ಮೇಕೆದಾಟಿನಿಂದ ಹಿಡಿದು ಕೃಷ್ಣಾ ಮೇಲ್ದಂಡೆವರೆಗೂ ಅಭಿವೃದ್ಧಿ ಮಾಡುತ್ತೇನೆ.ಚಾಮರಾಜನಗರದಿಂದ ಬೀದರ್ ವರೆಗೂ ಸಿಎಂ ಆಗುತ್ತೇನೆ ಎಂದು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ ಸೇರಿದಂತೆ ಹಾಲಿ, ಮಾಜಿ ಸಿಎಂ ಎಲ್ಲರಿಗೂ ಟಾಂಗ್ ನೀಡಿದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಬರುವ ಸೋಮವಾರ ಅಥವಾ ಮಂಗಳವಾರ ಇದಕ್ಕೊಂದು ಸ್ಪಷ್ಟತೆ ಸಿಗಲಿದೆ. ನಾನು ಮಂತ್ರಿಯಾಗುವ ರೇಸ್‌ನಲ್ಲಿ ಇಲ್ಲ.ಸದ್ಯ ಪ್ರಾಂತ್ಯವಾರು ಆದ್ಯತೆ ನೀಡಿದರೆ ಒಳ್ಳೆಯದು. ಮೈಸೂರು, ಕೊಡಗು, ವಿಜಯಪುರ ಸೇರಿದಂತೆ ವಂಚಿತ ಜಿಲ್ಲೆಗಳಿಗೆ ಅವಕಾಶ ಕೊಡಿ. ಮಾಡುವುದಾದರೆ ಈಗ ಮಂತ್ರಿ ಮಾಡಿ, 1 ವರ್ಷವಾದರೂ ಕೆಲಸ ಮಾಡಬಹುದು. 6 ತಿಂಗಳಿಗೆ ಮಂತ್ರಿ ಮಾಡುವುದಾದರೆ ಮಾಡುವುದೇ ಬೇಡ. ಈಗ ಇರುವವರೇ ಖುಷಿಯಾಗಿ ಮಂತ್ರಿಗಳಾಗಿರಲಿ. ನಾವು ಶಾಸಕರಾಗಿಯೇ ಖುಷಿಯಾಗಿ ಇರುತ್ತೇವೆ.ಯಾರಿಗೆ ಸಚಿವ ಸ್ಥಾನ ಸಿಗದಿದ್ದರೂ ಅಸಮಾಧಾನ ಬೇಡ.ನನ್ನನ್ನು ಸೇರಿದಂತೆ ಯಾರು ಸಹ ಅಸಮಾಧಾನ ಮಾಡಿಕೊಳ್ಳಬಾರದು ಎಂದರು.
ಹಿಜಾಬ್ ಹಾಕಿಕೊಂಡು ಪಾಕಿಸ್ಥಾನಕ್ಕೆ ಹೋಗಿ
ಶಾಲೆಗಳಲ್ಲಿ ಹಿಜಾಬ್‌ಗೆ ಬೆಂಬಲಿಸುವವರು ದೇಶದ್ರೋಹಿಗಳು.ಶಾಲೆಗೆ ಹಿಜಾಬ್ ಹಾಕಿಕೊಂಡು ಹೋಗುವುದಾದರೆ ಪಾಕಿಸ್ಥಾನಕ್ಕೆ ಹೋಗಿ.ಈ ನೆಲದಲ್ಲಿ ಅದಕ್ಕೆ ಅವಕಾಶ ಇಲ್ಲ. ಇವತ್ತು ಹಿಜಾಬ್ ಕೇಳಿದವರು ನಾಳೆ ಶಾಲೆಯಲ್ಲಿ ಮಸೀದಿ ಬೇಕು ಅಂತಾರೆ. ಇದು ಹಿಂದೂಗಳಿಗಾಗಿ ಮಾಡಿರುವ ರಾಷ್ಟ್ರ. ಇಲ್ಲಿ ಗಣಪತಿ ಪೂಜೆಯು ನಡೆಯುತ್ತದೆ ಕುಂಕುಮಕ್ಕೂ ಅವಕಾಶ ಇದೆ. ಅದನ್ನು ಯಾರಿಗೂ ಪ್ರಶ್ನಿಸುವ ಹಕ್ಕಿಲ್ಲ.ಅದನ್ನು ಪ್ರಶ್ನಿಸಬೇಕಾದರೆ ಪಾಕಿಸ್ಥಾನಕ್ಕೆ ಹೋಗಿ. ಹಿಜಾಬ್ ಹೋರಾಟದ ಹಿಂದೆ ಉಗ್ರ ಸಂಘಟನೆಗಳ ಕೈವಾಡ ಇದೆ. ದೇಶದ ರಾಜ್ಯದ ಶಾಂತಿ ಕದಡಲು ಹುನ್ನಾರ ನಡೆದಿದೆ. ಈ ತಾಲಿಬಾನ್ ಸಂಸ್ಕೃತಿಗೆ ಅವಕಾಶ ಕೊಡುವುದಿಲ್ಲ.ಕರ್ನಾಟಕವನ್ನು ಮತ್ತೊಂದು ತಾಲಿಬಾನ್ ಮಾಡಲು ಬಿಡುವುದಿಲ್ಲ ಎಂದು ಯತ್ನಾಳ್ ಕಿಡಿ ಕಾರಿದರು.
ಸಿದ್ದರಾಮಯ್ಯ ಮುಸ್ಲಿಮರಾಗಿ ಮತಾಂತರಗೊಂಡಿದ್ದಾರಾ ?
ಹಿಜಾಬ್‌ಗೆ ಜೈ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿ, ಸಿದ್ದರಾಮಯ್ಯ ಹಿಂದೂನಾ ಅಥವಾ ಮುಸ್ಲಿಮರಾಗಿ ಮತಾಂತರಗೊಂಡಿದ್ದಾರಾ ಎಂದು ಪ್ರಶ್ನಿಸಿದರು. ಯಾವಾಗಲೂ ಮುಸ್ಲಿಮರನ್ನೇ ತಲೆ ಮೇಲೆ ಹೊತ್ತು ಮೆರೆಯುತ್ತಾರೆ.ಪ್ರತಿ ಬಾರಿಯೂ ಅವರನ್ನು ಓಲೈಸುವ ಗುಣ ಸಿದ್ದರಾಮಯ್ಯ ಅವರದ್ದು. ಇದು ಜಾತ್ಯ ತೀತಾನಾ ? ಜಾತ್ಯತೀತ ಬಗ್ಗೆ ಸಿದ್ದರಾಮಯ್ಯಗೆ ಪಾಠ ಮಾಡಿದ ಯತ್ನಾಳ್.
ಜ್ಯಾತ್ಯಾತೀತತೆ ಅಂದರೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವುದು.ಆ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
Havyaka Sammelana; ಹೆಚ್ಚು ಮಕ್ಕಳನ್ನು ಹೆರಿ, ಮಠ ಸಲಹುತ್ತದೆ: ಸ್ವಾಮೀಜಿ ಕರೆ
Stamp Paper; ನಕಲಿ ಹಾವಳಿಗೆ ತಡೆ: ಎ.1ರಿಂದ ಡಿಜಿಟಲ್ ಪಾವತಿ ಪದ್ಧತಿ ಜಾರಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.