ಬಂಟ್ವಾಳ : ಡೀಸೆಲ್ ಸಾಗಾಟ ಪೈಪ್ ಲೈನ್ ನಿಂದ ಡೀಸೆಲ್ ಕಳವು ಪತ್ತೆ
ಸೊರ್ನಾಡು ಬಳಿಯ ಅರ್ಬಿ
Team Udayavani, Jul 30, 2021, 9:45 PM IST
ಬಂಟ್ವಾಳ : ಮಂಗಳೂರಿನಿಂದ ಹಾಸನ ಭಾಗಕ್ಕೆ ಡೀಸೆಲ್ ಸಾಗಾಟ ಮಾಡುವ ಪೈಪ್ ಲೈನ್ ನಿಂದ ಡೀಸೆಲ್ ಕಳವು ಮಾಡುತ್ತಿರುವ ಜಾಲವೊಂದು ಬಂಟ್ವಾಳ ತಾಲೂಕಿನ ಸೊರ್ನಾಡು ಬಳಿಯ ಅರ್ಬಿಯಲ್ಲಿ ಶುಕ್ರವಾರ ಬೆಳಕಿಗೆ ಬಂದಿದ್ದು, ಸುಮಾರು 1 ಸಾವಿರ ಲೀರ್ಟ ಡೀಸೆಲ್ ಕಳವಾಗಿರುತ್ತದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಸರಕಾರ ಸ್ವಾಮ್ಯದ ಕಂಪೆನಿಯೊಂದರ ಡೀಸೆಲ್ ಸಾಗಾಟ ಪೈಪ್ ಸೊರ್ನಾಡು ಖಾಸಗಿ ಜಮೀನಿನ ಮೂಲಕ ಹಾದು ಹೋಗಿದ್ದು, ಅದಕ್ಕೆ ಸ್ಥಳೀಯ ವ್ಯಕ್ತಿಯೋರ್ವ ಪೈಪ್ ಜೋಡಿಸಿ ಡೀಸೆಲ್ ಕಳವು ಮಾಡುತ್ತಿದ್ದ ಎನ್ನಲಾಗಿದೆ. ಡೀಸೆಲ್ ಸಾಗಾಟ ಕಂಪೆನಿಯ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಕಂಪೆನಿಗೆ ಡೀಸೆಲ್ ಪ್ರಮಾಣದಲ್ಲಿ ಸುಮಾರು 500 ಲೀ. ವ್ಯತ್ಯಾಸ ಕಂಡುಬಂದಿದ್ದು, ಬಳಿಕ ಮತ್ತೆ 500 ಲೀ. ಕಡಿಮೆಯಾಗಿತ್ತು. ಹೀಗಾಗಿ ಕಂಪೆನಿಯ ತಾಂತ್ರಿಕ ತಂಡ ಮೆಟಾಲಿಕ್ ತಂತ್ರಜ್ಞಾನದ ಮೂಲಕ ಪರಿಶೀಲಿಸಿದಾಗ ಸೊರ್ನಾಡು ಬಳಿ ಡೀಸೆಲ್ ಕಳವಾಗುತ್ತಿರುವುದು ಪತ್ತೆಯಾಗಿದೆ.
ಇದನ್ನೂ ಓದಿ :ಇನ್ನಂಜೆ ಹೊಳೆ ಬದಿ ತ್ಯಾಜ್ಯ ಎಸಗಿದವರನ್ನು ಪತ್ತೆ ಹಚ್ಚಿದ ಗ್ರಾಮಸ್ಥರು: ತಪ್ಪಿತಸ್ಥರಿಗೆ ದಂಡ
ಬಳಿಕ ಸ್ಥಳೀಯ ನಿವಾಸಿಯೋರ್ವನ ಜಮೀನಿನಲ್ಲಿ ಜೇಸಿಬಿ ಮೂಲಕ ಅಗೆದಾಗ ಡೀಸೆಲ್ ಕಳವು ಮಾಡುತ್ತಿರುವುದು ತಿಳಿದುಬಂದಿದೆ. ಆರೋಪಿಯು ಸುಮಾರು 20 ಅಡಿ ಆಳದಲ್ಲಿ ಹಾದು ಹೋಗಿರುವ ಪೈಪನ್ನು ಕೊರೆದು ಬಳಿಕ ಅದಕ್ಕೆ ಇನ್ನೊಂದು ಪೈಪ್ ಸಿಕ್ಕಿಸಿ, ಸುಮಾರು ಅರ್ಧ ಕಿ.ಮೀ.ದೂರದಲ್ಲಿ ಗೇಟ್ ವಾಲ್ ಬಳಸಿ ಡೀಸೆಲ್ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.