ಕಳ್ಳತನ ಮಾಡಲು ಡಯೆಟ್ ಮಾಡಿ ಸಿದ್ಧನಾದ ಐನಾತಿ ಕಳ್ಳ!
Team Udayavani, Nov 21, 2021, 10:18 AM IST
ಅಹ್ಮದಾಬಾದ್: ಕ್ರೀಡಾಳುಗಳು ನಿರ್ದಿಷ್ಟ ಕ್ರೀಡಾಕೂಟದಲ್ಲಿ ಪದಕ ಅಥವಾ ಪ್ರಶಸ್ತಿ ಗೆಲ್ಲಲು ತಿಂಗಳುಗಳ ಮೊದಲೇ ಸೀಮಿತ ಆಹಾರ ಪಡೆಯುವ ಡಯೆಟ್‌ನ ಮೊರೆಹೋಗುತ್ತಾರೆ. ಕೆಲವೊಮ್ಮೆ ಸಿನಿಮಾ ನಟರು, ನಿರ್ದಿಷ್ಟ ಪಾತ್ರವೊಂದಕ್ಕಾಗಿ ತೂಕ ಇಳಿಸುವ ಸಲುವಾಗಿ ಡಯೆಟ್ ಮಾಡುತ್ತಾರೆ. ಆದರೆ, ಗುಜರಾತ್‌ನ ಅಹ್ಮದಾ ಬಾದ್‌ನ ಕಳ್ಳನೊಬ್ಬ, ಕಳ್ಳತನಕ್ಕಾಗಿಯೇ ಡಯೆಟ್ ಮಾಡಿದ್ದಾನೆ ಎಂದರೆ ನೀವಿದನ್ನು ನಂಬಲೇಬೇಕು! ಈತನ ಈ ಸಾಹಸದ ಕಥೆ ಕೇಳಿ ಪೊಲೀಸರೇ ಹುಬ್ಬೇರಿಸಿದ್ದಾರೆ.
ಈತನ ಹೆಸರು ಮೋತಿಸಿಂಗ್ ಚೌಹಾನ್. ಈತ ಅಹ್ಮದಾಬಾದ್‌ನ ಬೋಪಲ್ ಪ್ರಾಂತ್ಯದಲ್ಲಿರುವ ಬಸಂತ್ ಬಹಾರ್ ಸೊಸೈಟಿ ಎಂಬಲ್ಲಿ ವಾಸವಾಗಿದ್ದ ಮೋಹಿತ್ ಮೊರಾಡಿಯಾ ಎಂಬುವರ ಮನೆಯಲ್ಲಿ ಎರಡು ವರ್ಷದ ಹಿಂದೆ ಕೆಲಸದಾಳಾಗಿದ್ದ. ಹಾಗಾಗಿ, ಆತನಿಗೆ ಆ ಮನೆಯವರು ಬೆಲೆಬಾಳುವ ವಸ್ತುಗಳನ್ನು ಎಲ್ಲಿಡುತ್ತಾರೆಂದು ಗೊತ್ತಿತ್ತು. ಆ ಮನೆಗೆ ಕನ್ನ ಹಾಕಲು ನಿರ್ಧರಿಸಿದ್ದರೂ, ಆ ಮನೆಯ ಮುಂಬಾಗಿಲು ಹಾಗೂ ಹಿಂಬಾಗಿಲಿನಲ್ಲಿ ಸಿಸಿಟಿವಿ ಕ್ಯಾಮೆರಾ ಇದ್ದಿದ್ದರಿಂದ ಧೈರ್ಯ ಮಾಡಿರಲಿಲ್ಲ. ಆಗಲೇ ಆತನಿಗೆ ಅಡುಗೆ ಮನೆಯ ಕಿಟಕಿಯಿಂದ ಒಳತೂರಿ ಕಳ್ಳತನ ಮಾಡಲು ನಿಶ್ಚಯಿಸಿದ.
ಇದನ್ನೂ ಓದಿ:ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನನ್ನ ಅಣ್ಣನಿದ್ದಂತೆ : ನವಜೋತ್ ಸಿಂಗ್ ಸಿಧು
ಆದರೆ, ಆತನ ದೇಹ ಅದರಲ್ಲಿ ತೂರಲ್ಲ ಎಂಬುದನ್ನು ತಿಳಿದಿದ್ದ ಆತ, ಕಳೆದ ಮೂರು ತಿಂಗಳಿಂದ ದಿನಕ್ಕೆ ಒಂದು ಬಾರಿ ಮಾತ್ರ ಊಟ ಮಾಡುತ್ತಾ 75 ಕೆಜಿಯಿಂದ 65 ಕೆಜಿಗೆ ದೇಹದ ತೂಕ ಇಳಿಸಿ, ಆನಂತರ ಆ ಮನೆಯೊಳಗೆ ತೂರಿ 37 ಲಕ್ಷ ರೂ. ಮೌಲ್ಯದ ಸಾಮಗ್ರಿಗಳನ್ನು ಕದ್ದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Passes Away: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ವಿಧಿವಶ
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.